ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಭಾಂದವರಿಗೆ ದಿನಸಿ ಕಿಟ್ ವಿತರಿಸಿದ ಯುವ ಮುಖಂಡ ಮಹೇಶ್
ಭಾಗ್ಯನಗರ: ಪವಿತ್ರ ರಂಜಾನ್ ಹಬ್ಬವು ದಾನ, ಧರ್ಮದ ಸಂಕೇತ. ಅದನ್ನು ಯಾವುದೇ ಜಾತಿ,ಧರ್ಮಕ್ಕೆ ಹೊಲಿಸದೆ ಮಾನವ ಧರ್ಮ ಒಂದೇ ಎಂಬ ಉದ್ದೇಶದಿಂದ ಅಲ್ಪಸಂಖ್ಯಾತರ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಕರ್ನಾಟಕ ಯುವ ಸೇನೆ ವೇದಿಕೆ ರಾಜ್ಯಾಧ್ಯಕ್ಷ ಮಹೇಶ್ ತಿಳಿಸಿದ್ದಾರೆ.
ತಾಲೂಕಿನ ಮಿಟ್ಟೆಮರಿ ಗ್ರಾಮದ ಜಾಮಿಯ ಮಸೀದಿ ಅವರಣದಲ್ಲಿ ಕರ್ನಾಟಕ ಯುವ ಸೇನೆ ವೇದಿಕೆ ವತಿಯಿಂದ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಅವರು ರಂಜಾನ್ ಹಬ್ಬದ ಸಂದರ್ಭದಲ್ಲಿ ಸಮುದಾಯದ ಯಾರೊಬ್ಬರು ಸಹ ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಸಾಮಾಜಿಕ ಸೇವೆಗಳ ಮೂಲಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕೆಲವು ಮಂದಿ ಆರ್ಥಿಕವಾಗಿ ಸದೃಢರಾಗಿರದ ಕುಟುಂಬಗಳಿಗೆ ಹಬ್ಬದ ಆಚರಣೆಗಾಗಿ ದಿನಸಿ ಕಿಟ್ ವಿತರಣೆ ಮಾಡಲಾಗಿದೆ ಹಾಗು ಬಡ ಕುಟುಂಬಸ್ಥರು ಸೇರಿದಂತೆ ಸಮಾಜದ ಎಲ್ಲಾ ಭಾಂದವರು ಸಂಭ್ರಮ ಸಡಗರದೊಂದಿಗೆ ಅರ್ಥಪೂರ್ಣವಾಗಿ ಭಕ್ತಿರಂಜಾನ್ ಹಬ್ಬವನ್ನು ಆಚರಣೆ ಮಾಡವುನ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ ಯುವ ಸೇನೆ ವೇದಿಕೆ ರಾಜ್ಯಾಧ್ಯಕ್ಷ ಮಹೇಶ್, ಉಪಾಧ್ಯಕ್ಷ ಚಂದನ್,ಬಾಬು ಪೋಸ್ಟ್,ರಫಿಕ್, ಇಮ್ರಾನ್, ರಾಘವೇಂದ್ರ, ಮಂಜುನಾಥ್
ಮದ್ದಿರೆಡ್ಡಿ, ಪಾಪಿರೆಡ್ಡಿ, ಭರತ್,ನಾಗರಾಜ್, ಅಂಬರೀಶ್, ನರೇಶ್, ವಾಸು, ಉದಯ್, ಜಗದೀಶ್, ಮುಜ್ಜು, ಗುತ್ತಿಗೆದಾರ ರಘು ಸೇರಿದಂತೆ ಮತ್ತಿತರರು ಇದ್ದರು..
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
