ಭಕ್ತಿಯ ಪರಾಕಾಷ್ಠೆ: ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಿಸಿದ ಶ್ರೀ ವಿಜಯೇಂದ್ರ ಸ್ವಾಮಿ ತೇರು
ಬೇತಮಂಗಲ: ಪಾಲಾರ್ ನದಿಯ ತೀರದಲ್ಲಿರುವ ಪುರಾತನ ವಿಜೇಂದ್ರ ಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ಪ್ರಯುಕ್ತ ವಿಜೇಂದ್ರ ಸ್ವಾಮಿಯ 58ನೇ ವರ್ಷದ ಬ್ರಹ್ಮರಥೋತ್ಸವವು ಸಡಗರದಿಂದ ವೈಭವದಿಂದ ನಡೆಯಿತು.
ಜಾತ್ರೆಯ ಪ್ರಮುಖ ಆಕರ್ಷಣೆಯಾದ ಬ್ರಹ್ಮರಥೋತ್ಸವವು ಅತಿ ವಿಜೃಂಭಣೆಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು ಹೂವು ಮತ್ತು ತಳಿರು ತೋರಣಗಳಿಂದ ಅಲಂಕರಿಸಲ್ಪಟ್ಟ ರಥವನ್ನು ಭಕ್ತರು ಗೋವಿಂದಾ ಗೋವಿಂದಾ ಎಂಬ ಘೋಷಣೆಗಳೊಂದಿಗೆ ಭಕ್ತರು ಎಳೆದರು ರಥೋತ್ಸವದ ಹಾದಿಯುದ್ದಕ್ಕೂ ಭಕ್ತರಿಗೆ ಪಾನಕ, ಮಜ್ಜಿಗೆ ಹಾಗೂ ಪ್ರಸಾದ ವಿನಿಯೋಗವನ್ನು ಮಾಡಲಾಯಿತು.
ಕೆಜಿಎಫ್ ತಾಲ್ಲೂಕಿನ ಸ್ಥಳೀಯ ಶಾಸಕರಾದ ರೂಪಕಲಾ ಮತ್ತು ಗಣ್ಯರು ಹಾಗೂ ಮುಖಂಡರು ರಥೋತ್ಸವದಲ್ಲಿ ಬಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಜಾತ್ರಾ ಮಹೋತ್ಸವ ಪ್ರಯುಕ್ತ ತಮಟೆ, ವಾದ್ಯಗೋಷ್ಠಿ, ಕೀಲು ಕುದುರೆ, ಉದ್ದ ಬೊಂಬೆ. ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಥೋತ್ಸವಕ್ಕೆ ಮೆರುಗು ತಂದಿತು.
ಅನ್ನದಾನ ಸೇವೆ: ರಥೋತ್ಸವವು ಮದ್ಯಾಹ್ನ 1 ಗಂಟೆಗೆ ಬಸ್ ನಿಲ್ದಾಣ ಬಳಿ ತಲುಪಿತು ರಥೋತ್ಸವ ಪ್ರಯುಕ್ತ ಶ್ರೀ ನೇತಾಜಿ ಯುವಕರ ಸಂಘದ ವತಿಯಿಂದ ಭಕ್ತಾದಿಗಳಿಗೆ ಅನ್ನದಾನ ಸೇವೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಶಾಸಕಿ ರೂಪಕಲಾ, ದೇಗುಲದ ಕನ್ವಿನರ್ ಅ ಮು ಲಕ್ಷೀನಾರಾಯಣ, ಮಾಜಿ ಗ್ರಾಪಂ ಅಧ್ಯಕ್ಷ ವಿನೂ ಕಾರ್ತಿಕ್, ಮುಖಂಡರಾದ ಏರ್ಟೆಲ್ ಸುರೇಶ್, ಅಪ್ಪಿ, ಮಮತಾ ಗಣೇಶ್, ವಾಸವಿ ಟೆಕ್ಸ್ಟ್ ಟೈಲ್ಸ್ ಮೂರ್ತಿ, ಸೇರಿದಂತೆ ಯುವಕರು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
