ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಿಗೆ ವರ್ತಕರಿಂದ ಹೋರಾಟದ ಎಚ್ಚರಿಕೆ
ಬಾಕ್ಸ್ ಸುದ್ದಿ : ಸುಮಾರು ವರ್ಷಗಳಿಂದ ಇರುವ ತೊಂದರೆಗಳು ಇವು ನಾನು ಬಂದು ಕೇವಲ ಎರಡು ತಿಂಗಳಾಗಿದೆ, ಈಗಾಗಲೇ ಸಂಬಂಧ ಪಟ್ಟ ಮೇಲಾಧಿಕಾರಿಗಳಿಗೆ ಮೂಲಭೂತ ಸೌಕರ್ಯಗಳ ಉದ್ದೇಶಕ್ಕಾಗಿ ಪತ್ರ ಕಳುಹಿಸಿಲಾಗಿದೆ, ಅವರಿಂದ ಅನುಮೋದನೆಯು ಸಹ ಸಿಕ್ಕಿದ್ದು ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಶಶಿಕಲಾ ಭರವಸೆ ನೀಡಿದ್ದಾರೆ.
ಭಾಗ್ಯನಗರ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸುಮಾರು ನಾಲ್ಕೈದು ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಕಂಗತ್ತಲಲ್ಲಿ ಪರದಾಡುವ ಪರಸ್ಥಿತಿ ನಿತ್ಮನವಾಗಿದ್ದು ರೈತರು ತಂದ ತರಕಾರಿ ತೂಕ ಮಾಡುವ ತಕ್ಕಡಿಗಳು ಸಹ ಕೆಲಸ ಮಾಡುತ್ತಿಲ್ಲ ಎಂದು ವರ್ತಕ ಎಚ್.ಎಸ್.ನಂಜುಂಡ ತಿಳಿಸಿದ್ದಾರೆ.
ಪಟ್ಟಣದ ಟಿ ಬಿ ಕ್ರಾಸ್ ಬಳಿ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ವರ್ತಕರು ಎ ಪಿ ಎಂ ಸಿ ಮಾರುಕಟ್ಟೆ ಕಛೇರಿ ಮುಂದೆ ಚಾರ್ಜಿಂಗ್ ಇಲ್ಲದ ವಿದ್ಯುತ್ ಸ್ಕೆಲ್ ಕೈಯಲ್ಲಿ ಹಿಡಿದು ತಮ್ಮ ಅಲಳನ್ನು ತೋಡಿಕೊಂಡಿದ್ದಾರೆ. ನಂತರ ಮಾತನಾಡಿದ ಅವರು ಮಾರುಕಟ್ಟೆಯಲ್ಲಿ ಸೌಚಾಲಯ,ಶುದ್ಧ ಕುಡಿಯುವ ನೀರಿನ ಘಟಕ,ತಡೆಗೋಡೆ ನಿರ್ಮಾಣ, ವಿದ್ಯುತ್ ದೀಪಗಳು ಅಳವಡಿಕೆ ಮತ್ತು ಮುಖ್ಯವಾಗಿ ವಿದ್ಯುತ್ ಸಂಪರ್ಕ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳಿಗಾಗಿ ನಾವು ಅನೇಕ ಬಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಿಗೆ ಮತ್ತು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು ಸಹ ಯಾವುದೇ ಪ್ರಯೋಜನವಿಲ್ಲ,ರೈತರು ಮತ್ತು ವರ್ತಕರು ಯಾರನ್ನು ಪ್ರಶ್ನೆ ಮಾಡಿದರು ಸಹ ಕಾಟಾಚಾರಕ್ಕೆ ನೆಪಗಳನ್ನು ಒಡ್ಡಿ ತಪ್ಪಿಸಿಕೊಳ್ಳುತ್ತಾರೆ,ತಾತ್ಕಾಲಿಕ ಭರವಸೆಗಳಿಗೆ ಸೀಮಿತವಾಗಿದ್ದಾರೆ ಅಷ್ಟೇ, ನಮ್ಮ ಮಾರುಕಟ್ಟೆಗೆ ಆಗಮಿಸುವ ರೈತರಿಗೆ ಸರ್ಕಾರದಿಂದ ಯಾವುದೇ ಸೌಕರ್ಯವಿಲ್ಲ,ರೈತರಿಲ್ಲ ಎಂದರೆ ನಾವು ಇಲ್ಲ, ಮಾರುಕಟ್ಟೆನೂ ಇಲ್ಲ ಹಾಗಾಗಿ ಇಂದು ಮಾರುಕಟ್ಟೆ ಅಧಿಕಾರಿಗಳಿಗೆ ಕೊನೇದಾಗಿ ಒಂದು ವಾರ ಕಲಾವಕಾಶ ನೀಡಿದ್ದು,ಮಾರುಕಟ್ಟೆಯಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡದ ಪಕ್ಷದಲ್ಲಿ ಅನಿರ್ದಿಷ್ಟ ಹೊರಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ ಎ ಪಿ ಎಂ ಸಿ ಮಾರ್ಕೆಟ್ ವರ್ತಕರಾದ ಟಿ.ಎಂ.ಎಸ್.ಶ್ರೀನಿವಾಸ್,ಕೆ.ವಿ.ಎಸ್.ಶ್ರೀನಿವಾಸ್,ಶಂಕರ್, ರೈತರಾದ ಅದಿನಾರಾಯಣಪ್ಪ, ಮಾಕಿ ರೆಡ್ಡಿ,ಅಮರ, ಜನಾರ್ದನ್,ಮದ್ದಿರೆಡ್ಡಿ,ಸತೀಶ್,ವಿಜಯ್,ಮಂಜುನಾಥ್,ಆದಿನಾರಾಯಣಪ್ಪ,ನರಸಿಂಹಪ್ಪ,ಶಂಕರಪ್ಪ,ಮೂರ್ತಿ,ಭಾಸ್ಕರ್,ಸೇರಿದಂತೆ ಮತ್ತಿತರರು ಇದ್ದರು....
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
