ಎಸ್‍ಬಿಐ ಬ್ಯಾಂಕ್ 300 ಕೋಟಿ ರೂ ರೈತರಿಗೆ ಸಾಲ ನೀಡಿದೆ

ಎಸ್‍ಬಿಐ ಬ್ಯಾಂಕ್ 300 ಕೋಟಿ ರೂ ರೈತರಿಗೆ ಸಾಲ ನೀಡಿದೆ

ಎಸ್‍ಬಿಐ ಬ್ಯಾಂಕ್ 300 ಕೋಟಿ ರೂ ರೈತರಿಗೆ ಸಾಲ ನೀಡಿದೆ

ಇಂಡಿ:ಭಾರತೀಯ ಸ್ಟೇಟ್ ಬ್ಯಾಂಕು ಕಲಬುರಗಿ ವಲಯದ 240 ಬ್ರಾಂಚುಗಳಲ್ಲಿ ರೈತರಿಗೆ 300 ಕೋಟಿ ರೂ ಸಾಲ ನೀಡಿದ್ದು ಅದರಲ್ಲಿ 100 ಕೋಟಿ ರೂ ಸರಕಾರದ ಆದೇಶದ ಮೇರೆಗೆ ಸಾಲಮನ್ನಾ ಮಾಡಿದೆ ಎಂದು ಎಸ್ ಬಿಐ ಕಲಬುರ್ಗಿ ವಲಯದ ಉಪ ಪ್ರಬಂಧಕ ಪಿ.ಎಲ್.ಶ್ರೀನಿವಾಸರಾವ ಹೇಳಿದರು. ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಇಂಡಿ ಶಾಖೆಯಿಂದ ಕೃಷಿ ವಿಭಾಗದಿಂದ ಸಾಲ ವಿತರಣೆ ಮತ್ತು ಘರ ಘರ ಕೆಸಿಸಿ ಮತ್ತು ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಎಸ್‍ಬಿಐ ಯುನೋ ಆಪ್ ಉಪಯೋಗಿಸಿ ಮನೆಯಿಂದಲೇ ಒಂದು ಲಕ್ಷ ಅರವತ್ತು ಸಾವಿರ ರೂ ಸಾಲ ಪಡೆಯಬಹುದು.ವಿದೇಶದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಓದುವ ಮಕ್ಕಳಿಗೆ ಸಾಲ, ಬಂಗಾರದ ಮೇಲೆ, ನೌಕರಸ್ಥರಿಗೆ ಮನೆ ಕಟ್ಟಲು, ರೈತರಿಗೆ ಬೆಳೆಸಾಲ ಸೇರಿದಂತೆ ಸಾರ್ವಜನಿಕರಿಗೆ ಅನೇಕ ರೀತಿಯ ಸಾಲ ವಿತರಿಸುತ್ತಿದೆ ಎಂದರು. ಟಾಟಾ ಬಿರ್ಲಾ, ಅನೀಲ ಅಂಬಾನಿ ಸೇರಿದಂತೆ ಅನೇಕ ದಿಗ್ಗಜರು ಎಸ್‍ಬಿಐ ನಿಂದ ಸಾಲ ಪಡೆದು ಹೆಮ್ಮರವಾಗಿ ಬೆಳೆದಿದ್ದು ಕಾರಣ ಅವರು ಸಾಲದ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.
ಇಂಡಿಯ ಎಸ್ ಬಿಐ ಮುಖ್ಯ ವ್ಯವಸ್ಥಾಪಕ ಬಿ.ಜೆ.ರಾಮಸ್ವಾಮಿ ಮಾತನಾಡಿ ಇಂದು ರೈತರಿಗೆ ಒಂದು ಕೋಟಿ 37 ಲಕ್ಷ ರೂ ಸಾಲವನ್ನು 35 ರೈತರಿಗೆ ಹಂಚುತ್ತಿದ್ದು ಮುಂದಿನ ತಿಂಗಳು ರೈತರಿಗೆ ಒಂದು ಕೋಟಿಗೂ ಅಧಿಕ ಸಾಲ ವಿತರಿಸಲಾಗುವದು ಸೇರಿದಂತೆ ಒಟ್ಟು 3 ಕೋಟಿ ರೂ ಸಾಲ ವಿತರಿಸಲಾಗುತ್ತಿದೆ ಎಂದರು. ವಿಜಯಪುರದ ವಿಭಾಗೀಯ ಮುಖ್ಯ ವ್ಯವಸ್ಥಾಪಕ ಬಿ.ಗೀರೀಶಕುಮಾರ ಮಾತನಾಡಿ ವಿಜಯಪುರದ ರುಡ್ ಶೆಟ್ಟಿನಿಂದ ಯುವಕರಿಗೆ ಅನೇಕ ರೀತಿಯ ತರಬೇತಿ ನೀಡುತ್ತಿದ್ದು ತರಬೇತಿ ಪಡೆದ ಎಲ್ಲ ವಿದ್ಯಾಮಂತರಿಗೂ ಸಾಲ ನೀಡಲಾಗುತ್ತಿದೆ ಎಂದರು. ಇಂಡಿಯ ಫಿಲ್ಡ ಆಫಿಸರ್ ರವಿ ತಳವಾರ ಮತ್ತು ಪರಶುರಾಮ ತೆನೆಹಳ್ಳಿ ತಾಲೂಕಿನ 24 ರೈತರಿಗೆ ಸಾಲ ವಿತರಿಸಿದರು. ತಾಲೂಕಿನ ಪ್ರಗತಿಪರ ರೈತರಾದ ಗಡ್ಡೆಪ್ಪ ವಳಸಂಗ, ಯಲ್ಲಪ್ಪ ನಾಟಿಕಾರ, ಹನಮಂತ ಬಿರಾದಾರ, ಮಾದಪ್ಪ ಜಂಗಲಗಿ, ಗಿರಿಮಲ್ಲಪ್ಪ ಮೇತ್ರಿ, ವಿಠ್ಠಲ ಬಿರಾದಾರ, ಅಶೋಕ ಮೆಂಡೆಗಾರ, ಶಾಂತಪ್ಪ ಪಾಟೀಲ, ಬಸವರಾಜ ಜಂಬಗಿ, ಶರಣಪ್ಪ ಮರಡಿ ಇವರನ್ನು ಸನ್ಮಾನಿಸಲಾಯಿತು. ಹಿರೇಬೇವನೂರದ ಪೂಜ್ಯ ದಯಾನಂದ ಹಿರೇಮಠ, ವಿಜಯಪುರದ ಕೃಷ್ಣಯ್ಯ, ಕಿರಣಕುಮಾರ, ಪ್ರಲ್ಹಾದ ದೇಸಾಯಿ, ಮಂಜುನಾಥ ಸುಣಕಲ್, ಅವಿನಾಶ ಮಾತನಾಡಿದರು.