ಬಸವಣ್ಣ ರವರ ಭಾವ ಚಿತ್ರವನ್ನು ಅನಾವರಣ

ಬಸವಣ್ಣ ರವರ ಭಾವ ಚಿತ್ರವನ್ನು ಅನಾವರಣ

ಬಸವಣ್ಣ ರವರ ಭಾವ ಚಿತ್ರವನ್ನು ಅನಾವರಣ

ಗುಂಡ್ಲುಪೇಟೆ ತಾ.ರಾಘವಾಪುರ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕರಾಗಿ ಆಯ್ಕೆ ಮಾಡಿದ ಅಣ್ಣ ಬಸವಣ್ಣ ರವರ ಭಾವ ಚಿತ್ರವನ್ನು ಅನಾವರಣ ಗೊಳಿಸಲಾಯಿತು. ಗ್ರಾ/ಪಂ ಅಧ್ಯಕ್ಷರಾದ ಎಸ್ ಮಹದೇವಪ್ಪ ರವರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಸುಧಾರಾಣಿ ಪುಷ್ಪಾರ್ಚಣೆ ನೆರವೇರಿಸಿದರು, ಮುಖ್ಯ ಭಾಷಣಕಾರರಾಗಿ ಮಾನವ ಬಂಧುತ್ವ ವೇದಿಕೆ ಯ ಜಿಲ್ಲಾ ಸಂಚಾಲಕರಾದ ಸುಭಾಷ್ ಮಾಡ್ರಹಳ್ಳಿ  ಮಾತನಾಡಿ  ಕರ್ನಾಟಕ ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕರಾಗಿ ಜಗಜ್ಯೋತಿ ಅಣ್ಣ ಬಸವಣ್ಣ ರವರನ್ನು ಆಯ್ಕೆ ಮಾಡಿ ಶರಣರ ವಿಚಾರಗಳು ಮುಂದಿನ ಪೀಳಿಗೆಗೆ ತಲುಪಿಸುವ ಸದುದ್ದೇಶವನ್ನು ಮಾಡಿದ್ದಾರೆ. ಕರ್ನಾಟಕ ಹುಟ್ಟಿದ ಮಾನವೀಯ ಧರ್ಮ ಎಂದರೆ ಅದು ಲಿಂಗಾಯತ ಧರ್ಮವಾಗಿದೆ. ಹನ್ನೆರಡನೆಯ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲು ಹಾಕಿದ್ದಾರೆ. ವಚನಗಳನ್ನು ಆಡುಭಾಷೆಯಲ್ಲಿ ರಚಿಸಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವಂತಹ ಕೆಲಸವನ್ನು ಶರಣರು ಮಾಡಿದ್ದಾರೆ. ಸಮಾಜದಲ್ಲಿನ ಮೂಢ ನಂಬಿಕೆಗಳ ವಿರುದ್ಧ ನಿಂತು ಸಮಾನತೆಯನ್ನು ಪ್ರತಿಪಾದಿಸಿದರು‌ ಎಂದರು. ಗ್ರಾಮ ಪಂಚಾಯತಿ ಸದಸ್ಯರಾದ  ಆರ್ ಡಿ ಉಲ್ಲಾಸ್, ಆರ್ ಎಸ್ ಗೋವಿಂದ ರಾಜ್, ಎಸ್ ಡಿ ಎ ಮಹದೇವ ಸ್ವಾಮಿ, ಲೋಕೇಶ್ ( ಕಂಪ್ಯೂಟರ್ ಆಫ್ ರೈಟರ್ ) ಗ್ರಂಥ ಪಾಲಕ ನಾಗರಾಜ್, ಮಂಜುಳ, ಮಂಗಳಮ್ಮ ನಾಗೇಂದ್ರ, ಸಂತೋಷ, ಸಿದ್ದರಾಜು ಮುಂತಾದವರು ಭಾಗವಹಿಸಿದ್ದರು.