ವಿದ್ಯಾರ್ಥಿನಿ ನೇಹಾಳ ಭೀಕರ ಕೊಲೆ, ಹತ್ಯೆ ಅತ್ಯಂತ ಖಂಡನೀಯ: ಕಠಿಣ ಶಿಕ್ಷೆ ವಿಧಿಸಲು ಅಂದಪ್ಪ ಕೋಳೂರ ಆಗ್ರಹ 

ವಿದ್ಯಾರ್ಥಿನಿ ನೇಹಾಳ ಭೀಕರ ಕೊಲೆ, ಹತ್ಯೆ ಅತ್ಯಂತ ಖಂಡನೀಯ: ಕಠಿಣ ಶಿಕ್ಷೆ ವಿಧಿಸಲು ಅಂದಪ್ಪ ಕೋಳೂರ ಆಗ್ರಹ 

ಹುಬ್ಬಳ್ಳಿಯ ಬಿವಿಬಿ ಕಾಲೇಜ್ ವಿದ್ಯಾರ್ಥಿನಿ ನೇಹಾಳ ಹಿರೇಮಠ ರವರ ಭೀಕರ ಕೊಲೆ, ಹತ್ಯೆ ಅತ್ಯಂತ ಖಂಡನೀಯ: ಕಠಿಣ ಶಿಕ್ಷೆ ವಿಧಿಸಲು ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರು ಸರ್ಕಾರಕ್ಕೆ ಆಗ್ರಹಿಸಿದರು.

ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಕ್ಯಾಂಪಸ್ ನಲ್ಲಿ ಹಾಡು ಹಗಲಿ ನಡೆದ ವಿದ್ಯಾರ್ಥಿನಿ ನೇಹಾಳ ಹಿರೇಮಠ ರವರ ಭೀಕರ ಕೊಲೆ, ಹತ್ಯೆ ಅತ್ಯಂತ ಖಂಡನೀಯ, ಸರ್ಕಾರ ತಪ್ಪಿತಸ್ಥ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು  ಮುಂದಾಗುವುದನ್ನು ಬಿಟ್ಟು ಮುಖ್ಯೆಮಂತ್ರಿಗಳು ಗ್ರಹ ಸಚಿವರು ಇಲ್ಲಸಲ್ಲದ ಹೇಳಿಕೆ ನೀಡುತ್ತಾ ಸಮಯ ಹಾಳು ಮಾಡುತ್ತಾ ಹೊರಟ್ಟಿದ್ದಾರೆ ನೇಹಾಳ ತಂದೆ ನಾವು ಕಷ್ಟದಲ್ಲಿ ಇದ್ದೇವೆ ನಾನು ಒಬ್ಬ ಕಾಂಗ್ರೆಸ್ ನ ಕಾರ್ಪೊರೇಟರ್ ಕಾರ್ಯಕರ್ತನಾಗಿದ್ದರು ಕೂಡ ನಮಗೆ ನಮ್ಮ ಸರ್ಕಾರ ಇದ್ದರು ಕೂಡ ನಮ್ಮ ಸರ್ಕಾರದಿಂದ ನನ್ನ ಮಗಳಿಗೆ ನ್ಯಾಯ ಕೊಡಿಸಲು ನಮ್ಮ ಸರ್ಕಾರ ಮುಂದಾಗಲಿಲ್ಲ ಮುಖ್ಯೆಮಂತ್ರಿಗಳು ವೈಯಕ್ತಿಕ ವಿಚಾರ ಎಂದು ಹೇಳಿಕೆ ಕೊಟ್ಟರೆ ಗ್ರಹ ಸಚಿವರು ಏನೆಲ್ಲ ಇಲ್ಲಸಲ್ಲದ ಹೇಳಿಕೆ ನೀಡುತ್ತಾ ಬರುತ್ತಿದ್ದಾರೆ ರಾಜ್ಯದಲ್ಲಿ ನೇಹಾಳಿಗೆ ನ್ಯಾಯ ಸಿಗಬೇಕೆಂದು ಅವರ ಪರವಾಗಿ ಸಮಾಜದ ಮುಖಂಡರು ಸಂಘ ಸಂಸ್ಥೆಗಳು ರಾಜ್ಯದಲ್ಲಿ ಪ್ರತಿಭಟನೆ ನಡೆಯುತ್ತಲೇ ಇದ್ದರು ಕೂಡ ರಾಜ್ಯದ ಕೆಲವಒಂದು ಸಚಿವರು ಇಲ್ಲಸಲ್ಲದ ಹೇಳಿಕೆ ನೀಡುತ್ತಾ ಬರುತ್ತಾರೆ ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ಬಿಟ್ಟು ಕೋಲೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ ಕೋರ್ಟ್ ನ್ಯಾಯಾಲಯದಲ್ಲಿ ವಿಚಾರಣೆ ಮಾಡಿ ಕೋರ್ಟ್ ನ್ಯಾಯಾಲಯದಲ್ಲಿ ಚರ್ಚಿಸಿ ನಂತರ ಯಾರೆ ತಪ್ಪು ಮಾಡಿರಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಕೋರ್ಟ್ ನ್ಯಾಯಮೂರ್ತಿ ಕಾನೂನು ಮೂಲಕ ಕಠಿಣ ಶಿಕ್ಷೆ ವಿಧಿಸಲು ಮುಂದಾಗಬೇಕೆಂದು ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ. ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದ ಇವರು ಸರ್ಕಾರಕ್ಕೆ ಆಗ್ರಹಿಸಿ.

ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆ, ಕೊಲೆಗಳು ದಿನೇ ದಿನೇ ಹೆಚ್ಚುತ್ತಿದ್ದು ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ,ರಕ್ಷಣೆ ಇಲ್ಲದೆ ಇರುವುದು ಈ ಘಟನೆಗಳಿಗೆ ಕಾರಣವಾಗಿವೆ. ಹುಬ್ಬಳ್ಳಿ ವಿದ್ಯಾನಗರದ ಕೆಎಲ್‌ಇಯ ಅಡ್ಡಿಯಲ್ಲಿ ಬರುವ ಕರ್ನಾಟಕ ಲಿಂಗಾಯತ ಶಿಕ್ಷಣ ತಾಂತ್ರಿಕ ವಿಶ್ವವಿದ್ಯಾನಿಲಯ (ಬಿವಿಬಿ) ಆವರಣದಲ್ಲಿ ಗುರುವಾರ ರಂದು ಎಂಸಿಎ ಮೊದಲ ವರ್ಷದಲ್ಲಿ ಓದುತ್ತಿದ್ದ ನೇಹಾ ಹಿರೇಮಠ (24) ಎಂಬ ವಿದ್ಯಾರ್ಥಿನಿಯನ್ನು ಹಾಡಹಗಲೆ ತನ್ನ ಹಳೆಯ ಸಹಪಾಠಿ ಚಾಕುವಿನಿಂದ ಕೊಲೆಮಾಡಿ ಹತ್ಯೆಗೈದಿರುವುದು ಅತ್ಯಂತ ಖಂಡನೀಯ. ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥ ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸಬೇಕು.ಎಂದರು

ಈ ಪ್ರಕರಣಗಳು ರಾಜ್ಯಾದ್ಯಂತ ಪ್ರತಿ ದಿನವೂ ನಡೆಯುತ್ತಿದ್ದು ಸರ್ಕಾರ ಇವುಗಳ ಬಗ್ಗೆ ಗಮನ ನೀಡದೆ ಇರುವುದು ಈ ರೀತಿಯ ಘಟನೆಗಳು ಹೆಚ್ಚಾಗಿವೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಲ್ಲಾ ಶಾಲಾ - ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು ಇಷ್ಟಾದರೂ ಕೂಡ ರಾಜ್ಯ ಸರ್ಕಾರ ಕೋಲೆ ಆರೋಪಿಗೆ ಕಠಿಣ ಶಿಕ್ಷೆ ಜಾರಿ ಮಾಡಿಲ್ಲ ತಕ್ಷಣ ಇದನ್ನು ಜಾರಿ ಮಾಡಬೇಕು. ಇಂತ ಆರೋಪಿಗಳಿಗೆ ಕಾನೂನು ಕಠಿಣ ಶಿಕ್ಷೆ ವಿಧಿಸಿ ಇಂತವರನ್ನು ಗಲ್ಲಿಗೆ ಏರಿಸಿ ರಾಜ್ಯದ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ.ಈ ಮೂಲಕ ಆಗ್ರಹಿಸುತ್ತದೆ.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಕಾರ್ಯಧ್ಯಕ್ಷರಾದ ನಾಗರಾಜ ಗೋನಾಲ.ರೈತ ಸಂಘದ ರಾಜ್ಯ ಉಸ್ತುವಾರಿ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ. ಕುಕನೂರು ತಾಲೂಕ ಅಧ್ಯಕ್ಷ ಹನುಮಂತಪ್ಪ ಮುತ್ತಾಳ.ಇತರರು ಆಗ್ರಹಿಸಿದರು.