ಸಾಹಿತ್ಯಾಸಕ್ತರು ಕವಿಗಳನ್ನು ಕಡೆಗಣಿಸಿರುವ ಪರಿಷತ್ ಅಧ್ಯಕ್ಷರು

ಸಾಹಿತ್ಯಾಸಕ್ತರು ಕವಿಗಳನ್ನು ಕಡೆಗಣಿಸಿರುವ ಪರಿಷತ್ ಅಧ್ಯಕ್ಷರು

ಸಾಹಿತ್ಯಾಸಕ್ತರು ಕವಿಗಳನ್ನು ಕಡೆಗಣಿಸಿರುವ ಪರಿಷತ್ ಅಧ್ಯಕ್ಷರು

ದಿನಾಂಕ ೧೭-೦೨-೨೦೨೪ ರ ಶನಿವಾರದಂದು ಅರಸೀಕೆರೆ ಯಲ್ಲಿ ನಡೆಯುತ್ತಿರುವ ೮ ನೇ ಸಾಹಿತ್ಯ ಸಮ್ಮೇಳನಕ್ಕೆ ದಿನನಿತ್ಯ ಕನ್ನಡ ನಾಡು ನುಡಿಯ ಬಗ್ಗೆ ಸೇವೆ ಮಾಡುತ್ತಿರುವ ಅನೇಕ ಸಾಹಿತಿಗಳು,ಸಂಘಟಕರು,ನಾಡುನುಡಿಯ ಹಿತಕ್ಕಾಗಿ ಸೇವೆ ಸಲ್ಲಿಸುತ್ತಿರುವವರನ್ನು ಹೊರಗಿಟ್ಟು ತಮ್ಮ ಹಿಂಬಾಲಕರು ಹೊಗಳಭಟ್ಟರನ್ನು ಮುಂದಿಟ್ಟುಕೊಂಡು ಅರಸೀಕೆರೆ ಸಾಹಿತ್ಯಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ರವರು ತಾರತಮ್ಯ ಮಾಡುತ್ತಿದ್ದಾರೆ.ಚಂದ್ರಶೇಖರ ಅಧ್ಯಕ್ಷರಾದ ದಿನದಿಂದಲೂ ಯಾವುದೇ ಸಾಹಿತ್ತಿಕ ಹಾಗು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸದೆ ಪರಿಷತ್ತನ್ನು ಹೀನಾಯಸ್ಥಿತಿಗೆ ತಂದಿದ್ದಾರೆ. ಇವರ ಈ ದೋರಣೆಯಿಂದ ಬೇಸಕ್ತ ಸಾಹಿತ್ಯಾಸಕ್ತರು ಸಂಘಟಕರು ಕನ್ನಡ ಅಭಿಮಾನಿಗಳು ಮನೆ  ಮನೆ ಕವಿಗೋಷ್ಟಿ ಹಾಗು ಹಿರಿಯ ಉದ್ಧಾಮ ಸಾಹಿತಿಗಳ ಜಯಂತಿಯನ್ನು ಆಚರಿಸಿ ಕನ್ನಡದ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ ಅಂತ ಸಾಹಿತ್ಯ ಸಂಘಟಕರು ಕನ್ನಡ ಅಭಿಮಾನಿಗಳನ್ನು ಸಂಪೂರ್ಣವಾಗಿ ಹೊರಗಿಟ್ಟು ತಮ್ಮ ಹಿಂಬಾಲಕರಿಗೆ ಮನ್ನಣೆ ನೀಡಿ ಸಾಹಿತ್ಯ ಸಮ್ಮೇಳನವನ್ನು ನಡೆಸುತ್ತಿರುವುದು.ನಾಡುನುಡಿಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವವರನ್ನು ಕವಿಗೋಷ್ಠಿಗೂ ಆಹ್ವಾನಿಸದೆ ಹೊರಗಿಟ್ಟಿರುವುದು ಚಂದ್ರಶೇಖರ ಬಾಬು ಕನ್ನಡಕ್ಕೆ ಮಾಡಿದ ದ್ರೋಹ ಕನ್ನಡ ಸಾಹಿತ್ಯಪರಿಷತ್ತು ಏಳು ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ನಾಡುನುಡಿಗಾಗಿ ಸೇವೆ ಸಲ್ಲಿಸುತ್ತಿರುವವರನ್ನು ಹೊರಗಿಟ್ಟು ಏನು ಸಾಧಿಸಲು ಹೊರಟಿದ್ದಾರೆ. ಕೊಳಕು ಮನಸ್ಸಿನ ಇಂತಹ ಅಧ್ಯಕ್ಷರಿರುವವರೆಗೆ ಸಾಹಿತ್ಯಪರಿಷತ್ತಿನಲ್ಲಿ ತಾರತಮ್ಯ ನೀತಿ ಮಲತಾಯಿ ದೋರಣೆಗಳು ನಡೆಯುತ್ತಲೇ ಇರುತ್ತವೆ. ಸನ್ಮಾನ್ಯಜನಪ್ರಿಯ ಶಾಸಕರು ಹಾಗು ಜಿಲ್ಲಾಕನ್ನಡ ಸಾಹಿತ್ಯಪರಿಷತ್ತಿನ ಅಧ್ಯಕ್ಷರು ಇಂತಹ ಕೃತ್ಯಗಳಿಗೆ ಕಡಿವಾಣ ಹಾಕದೇ ಹೋದರೆ ಪರಿಷತ್ತು ಕೂಡ ಸ್ವಜನಪಕ್ಷಪಾತಿಗಳ ಗೂಡಾಗುತ್ತದೆ ಎಂದು ನೊಂದ ಸಾಹಿತ್ಯ ಆಸಕ್ತರು ಸಂಘಟಕರು ಸಾಹಿತ್ಯ ಅಭಿಮಾನಿಗಳು ತಮ್ಮ ಅಸಮಾದಾನವನ್ನು ಹೊರಹಾಕಿದ್ದಾರೆಂದು ಉದಯೋನ್ಮುಖ ಸಾಹಿತಿ ಬರಹಗಾರ ಬೋರೇಗೌಡ ದೂರಿದ್ದಾರೆ.