ಶ್ರೀ ಹನುಮಂತ ಮತ್ತು ಶ್ರೀಕೋದಂಡರಾಮಸ್ವಾಮಿ ಅದ್ದೂರಿ ಬ್ರಹ್ಮರತೋತ್ಸವ

ಶ್ರೀ ಹನುಮಂತ ಮತ್ತು ಶ್ರೀಕೋದಂಡರಾಮಸ್ವಾಮಿ ಅದ್ದೂರಿ ಬ್ರಹ್ಮರತೋತ್ಸವ

ಶ್ರೀ ಹನುಮಂತ ಮತ್ತು ಶ್ರೀಕೋದಂಡರಾಮಸ್ವಾಮಿ ಅದ್ದೂರಿ ಬ್ರಹ್ಮರತೋತ್ಸವ

ಬಾಗೇಪಲ್ಲಿ: ನೂತನ ತಾಲ್ಲೂಕು ಚಿಕ್ಕಬಳ್ಳಾಪುರದ ಚೇಳೂರು ಪಟ್ಟಣದಲ ಶ್ರೀಕೋದಂಡರಾಮಸ್ವಾಮಿ ರತೋತ್ಸವ ನೆರವೇರಿಸಲಾಯಿತು. ಸುಮಾರು ನೂರಾರು ವರ್ಷಗಳ ಇತಿಹಾಸ ಉಳ್ಳ ಈ ಕೋದಂಡರಾಮಸ್ವಾಮಿ ದೇವಾಲಯ ಪ್ರಸಿದ್ದಿಗೆ ಪಾತ್ರವಾಗಿದೆ. ಅತೀ ಪುರಾತನದ ದೇವಾಲಯಗಳಲ್ಲಿ ಒಂದು, ಅಂದಿನಿಂದ ಇಂದುವರೆಗೂ ಪ್ರತಿ ವರ್ಷ ರಥೋತ್ಸವ ನಡೆಸುಕೊಂಡು ಬರಲಾಗುತ್ತಿದೆ. ಇದರಂತೆ ಈ ರಾತೋತ್ಸವಕ್ಕೆ ಪ್ರಧಾನ ಅರ್ಚಕರಿಂದ ನಾನಾ ರೀತಿಯ ಪೂಜೆ ಪುನಸ್ಕಾರ ಮಾಡಿದ ಬಳಿಕ ದ್ರಿಷ್ಟಿ ಕುಂಬಳಕಾಯಿ ಹೊಡೆಯುವ ಮೂಲಕ ಚಾಲನೆ ನೀಡಲಾಯಿತು. ಇದೆ ಸಮಯದಲ್ಲಿ ಕ್ಷೇತ್ರದ ಶಾಸಕರು ಪೂಜೆಗೆ ಹಾಗು ರಥೋತ್ಸವಕ್ಕೆ ಭಕ್ತರಿಗೆ ಸಾಥ್ ಕೊಟ್ಟು ಮತ್ತಷ್ಟು ಮೆರೆಗು ನೀಡಿದರು. ಜೊತೆಗೆ ರಥೋತ್ಸವದಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಂಡು ತಮ್ಮ ನೃತ್ಯದ ಮೂಲಕ ಎಲ್ಲರ ಗಮನ ಸೆಳೆದರು. ಈ ರಥೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಶ್ರೀ ಕೋದಂಡರಾಮಸ್ವಾಮಿ ರಥೋತ್ಸವದಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡು ರಥೋತ್ಸವ ಯಶಸ್ವೀಗೊಳಿಸಿದರು.