ಕೆಜಿಎಫ್ ನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಣೆ

ಕೆಜಿಎಫ್ ನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಣೆ

ಕೆಜಿಎಫ್ ನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಣೆ

ಕೆಜಿಎಫ್: ಒಳ್ಳೆಯ ಜನಪರ ಸೇವೆ ಮಾಡುವ ಜ್ಞಾನವುಳ್ಳ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದು. ಕೆಜಿಎಫ್ ತಾಲೂಕ್ ಆಡಳಿತ ಹಾಗೂ ತಾಲೂಕು ಕಾನೂನು ಸೇವಗಳ ಸಮಿತಿ ಕೆಜಿಎಫ್ ಮತ್ತು ಶಿಕ್ಷಣ ಇಲಾಖೆಯ ಜಂಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಶ್ರೇಣಿ ನ್ಯಾಯಾಧೀಶರು ತಾಲೂಕು ಕಾನೂನು ಸೇವ ಗಳ ಸಮಿತಿ ಅಧ್ಯಕ್ಷರು ಮುಜಾಪರ್ ಎ ಮಂಜರಿ. ಚುನಾವಣೆಯಲ್ಲಿ ಒಳ್ಳೆಯ ಜ್ಞಾನವನ್ನು ಅಭಿವೃದ್ಧಿಪರ ಕೆಲಸ ಮಾಡುವ ಜಾತಿಭೇದ ಇಲ್ಲದೆ ಇರುವ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ. 18 ವರ್ಷ ತುಂಬಿದ ಮೊದಲ ಬಾರಿಗೆ ಮತ ಚಲಾಯಿಸುವ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ನಮ್ಮ ದೇಶ ವಿಶ್ವದಲ್ಲೇ ಪ್ರಜಾಪ್ರಭುತ್ವ ಹೊಂದಿರುವ ದೊಡ್ಡ ದೇಶ ಇಲ್ಲಿ ನಾವು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅವಕಾಶ ಇದೆ ಇದನ್ನು ನಾವು ಅತಿ ಸೂಕ್ಷ್ಮವಾಗಿ ಮತ ಚಲಾವಣೆ ಮಾಡಿ ಆಯ್ಕೆ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಶೇಕಡ 50 ಪರ್ಸೆಂಟ್ ಮತ ಚಲಾವಣೆ ಆಗುತ್ತೆ. ಇದಕ್ಕೆ  ಮುಖ್ಯ ಕಾರಣ ಆಸಕ್ತಿ ಕಡಿಮೆ. ಇದನ್ನು ನಾವು ಮಾಡಬಾರದು. ಚುನಾವಣೆಯಲ್ಲಿ ಹಾಜರಾಗಿ ಯಾಕಣ್ಣ 90ರಷ್ಟು ಮತ ಚಲಾವಣೆ ಮಾಡಿ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ನಮ್ಮ ದೇಶದಲ್ಲಿ ತಪ್ಪದೇ ಎಲ್ಲಾ ಮತದಾರರು ಮತ ಚಲಾವಣೆ ಮಾಡಬೇಕಾಗಿ ಎಂಬ ಕಾನೂನು ತರಬೇಕು ಎಂದು ನನ್ನ ಅಭಿಪ್ರಾಯ ಎಂದರು. ಪ್ರಧಾನ ಸಿವಿಲ್ ನ್ಯಾಯಾಧೀಶರು ಮಂಜುನಾಥ್ ಮಾತನಾಡಿ. ಚುನಾವಣೆಯಲ್ಲಿ ಮತ ಮಾಡುವಾಗ ಅಭ್ಯರ್ಥಿಗಳ ಯಾವುದೇ ಒಂದು  ಅಮಿಷಕ್ಕೆ ಆಗಬಾರದು ನಮ್ಮ ಮನೆಯಲ್ಲಿ ಇರುವ ಹಿರಿಯರಿಗೆ ನಾವು ವಿದ್ಯಾರ್ಥಿಗಳಾಗಿ ಒಳ್ಳೆಯ ಅಭ್ಯರ್ಥಿಯ ಬಗ್ಗೆ ತಿಳಿಸುವ ಮೂಲಕ ಒಳ್ಳೆ ಅಭ್ಯರ್ಥಿಗಳು ಮತ ಚಲಾವಣೆ ಮಾಡಬೇಕು ಎಂದು ತಿಳಿಸಿದರು. ತಹಶೀಲ್ದಾರ್ ನಾಗವೇಣಿ ಮಾತನಾಡಿ. ನಾವು ತಾಲೂಕಿನಲ್ಲಿ ಈಗಾಗಲೇ 18 ವರ್ಷ ತುಂಬಿದ ವಿದ್ಯಾರ್ಥಿಗಳಿಗೆ  ಕಾಲೇಜು ಮಟ್ಟದಲ್ಲಿ ಚುನಾವಣೆ ಗುರುತಿನ ಚೀಟಿಯನ್ನು ಮಾಡಿಕೊಟ್ಟಿದ್ದೇವೆ. ತಾಲೂಕು ಮಟ್ಟದಲ್ಲಿ ಚುನಾವಣೆ ಬಗ್ಗೆ ಅರಿವು ಮೂಡಿಸಿದ್ದು. ಈ ವರ್ಷ 6 ಸಾವಿರಕ್ಕೂ ಹೆಚ್ಚು ಹೊಸ ಅಭ್ಯರ್ಥಿಗಳನ್ನು ಮತ ಪಟ್ಟಿಗೆ ಸೇರಿಸಿದ್ದೇವೆ ಎಂದು ತಿಳಿಸಿದರು ಕಾರ್ಯಕ್ರಮದ ಕೊನೆಯ ಭಾಗವಾಗಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು ಈ ಸಂದರ್ಭದಲ್ಲಿ ನ್ಯಾಯಾಧೀಶರುಗಳಾದ ಮಂಜು. ವಕೀಲರ ಸಂಘದ ಅಧ್ಯಕ್ಷರು ರಾಜಗೋಪಾಲಗೌಡ. ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಮಂಜುನಾಥ ಹರ್ತಿ ನಗರಸಭೆ ಪೌರಾಯುಕ್ತರು ಪವನ್ ಕುಮಾರ್. ಶಿಶು   ಅಭಿವೃದ್ಧಿ ಯೋಜನೆ ಅಧಿಕಾರಿ  ಅಧಿಕಾರಿ. ರಾಜೇಶ್. ವಿದ್ಯಾರ್ಥಿಗಳು ಇದ್ದರು