ಸಂವಿಧಾನ ಜಾಗೃತಿ ರಥವನ್ನು ಸ್ವಾಗತ ಮಾಡಿಕೊಂಡ ಅಧಿಕಾರಿಗಳು ಮತ್ತು ಢವಳಗಿ ಗ್ರಾಮಸ್ಥರು

ಸಂವಿಧಾನ ಜಾಗೃತಿ ರಥವನ್ನು ಸ್ವಾಗತ ಮಾಡಿಕೊಂಡ ಅಧಿಕಾರಿಗಳು ಮತ್ತು ಢವಳಗಿ ಗ್ರಾಮಸ್ಥರು

ಸಂವಿಧಾನ ಜಾಗೃತಿ ರಥವನ್ನು ಸ್ವಾಗತ ಮಾಡಿಕೊಂಡ ಅಧಿಕಾರಿಗಳು ಮತ್ತು ಢವಳಗಿ ಗ್ರಾಮಸ್ಥರು

ಮುದ್ದೇಬಿಹಾಳ: ಯಾವ ವ್ಯಕ್ತಿ ಅವಮಾನ ಸಹಿಸಿಕೊಂಡು ಎದುರಿಸುತ್ತಾನೆ ಅವನ ಹೆಸರು ಅಜರಾಮರವಾಗಿ ಉಳಿಯಲು ಸಾಧ್ಯ.ಇದಕ್ಕೆ ಉದಾಹರಣೆಯೆ ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರು.ತಮ್ಮ ಬಾಲ್ಯದ ಜೀವನದಲ್ಲಿ ಅನೇಕ ಅವಮಾನಗಳನ್ನು ಅನುಭವಿಸಿ,ಎದುರಿಸಿದ ಬ್ರಿಟಿಷ್ ರಿಗೆ ಅವರು ಹೇಳಿದ ದಿನದ ಒಳಗಾಗಿ ಸಂವಿಧಾನ ರಚಿಸಿಕೊಟ್ಟು ನಮ್ಮಗೆ ಸುಭದ್ರವಾದ,ಸ್ವತಂತ್ರ ವಾದ  ಆಡಳಿತ ನಡೆಸಲು ಅನುವು ಮಾಡಿಕೊಟ್ಟ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಮತ್ತು ಅವರು ರಚಿಸಿದ ಸಂವಿಧಾನವು ನಮಗೆಲ್ಲರಿಗೂ ಸಿಕ್ಕಿದೆ ಎಂದು ಉಪನ್ಯಾಸಕ ಎಸ್ ಎಸ್ ಮಾಲಗತ್ತಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ನಿಖಿತಾ ಕಡಿವಾಲ ಎಂಬ ವಿದ್ಯಾರ್ಥಿನಿ  ಸಾರ್ವಜನಿಕರಿಗೆ ಸಂವಿಧಾನ ವಾಚನ ಕಂಠಪಾಠ ದಿಂದ ಬೋಧಿಸಿದಳು.ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಲಮಾಣಿ,ಮತ್ತು ವಾಯ್ ಎಚ್ ವಿಜಯಕ್ ಅವರು ಸಂವಿಧಾನದ ಕುರಿತು ಮಾತನಾಡಿದರು. ಢವಳಗಿ ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾದ ರಥವನ್ನು ತಾಲೂಕು ಪಂಚಾಯತಿ ಪ್ರಭಾರಿ ಕಾರ್ಯನಿರ್ವಾಹಕ ಯುವರಾಜ ಹನಗಂಡಿ,ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ, ತಾಲೂಕು ಪಂಚಾಯತಿ ಯೋಜನಾಧಿಕಾರಿ ಖೂಬಾಸಿಂಗ್ ಜಾದವ್,ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಲಮಾಣಿ,ಮತ್ತು ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿ ಆನಂದ ಹೀರೆಮಠ,ಅಧ್ಯಕ್ಷರಾದ ಶ್ರೀಮತಿ ದ್ರಾಕ್ಷಾಯಣಿ ಮೇಲಿನಮನಿ,ಉಪಾಧ್ಯಕ್ಷ ಸುರೇಶಗೌಡ ಪಾಟೀಲ, ದ್ವೀತಿಯ ದರ್ಜೆ ಲೆಕ್ಕಸಹಾಯಕರಾದ ಎಮ್ ಕೆ ಗುಡಿಮನಿ,ಸಹಾಯಕ ಕೃಷಿ ಅಧಿಕಾರಿ ಅಶೋಕ ಇಟಗಿ,ಕಂದಾಯ ನೀರಿಕ್ಷಕರು ಪವನ್ ಕುಮಾರ ತಳವಾರ, ಸಿದ್ದು ಬಾಸಗಿ,ವಾಯ್ ಎಚ್ ವಿಜಯಕರ್ ಮಾಜಿ ಸದಸ್ಯರು ಎಪಿಎಮ್ ಸಿ ಮುದ್ದೇಬಿಹಾಳ, ಮಡಿವಾಳಪ್ಪ ಸುತಗುಂಡರ, ಮಡಿವಾಳಪ್ಪ ಬೀರಗೊಂಡ, ಶಾಂತಪ್ಪ ಚಲವಾದಿ ದಲಿತ ಸಮಾಜ ಮುಖಂಡರು. ಸೇರಿದಂತೆ ಮತ್ತು ಸ್ಥಳೀಯ ಗ್ರಾಮಸ್ಥರು ಮತ್ತು ಪಂಚಾಯತಿ ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಆಶಾ ಕಾರ್ಯಕರ್ತರು, ಜಾಗೃತ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿಕೊಂಡರು.