ಟೇಕಲ್ ಗ್ರಾಮದಲ್ಲಿ ಉಚಿತ ರಕ್ತದಾನ ಶಿಬಿರ

ಟೇಕಲ್ ಗ್ರಾಮದಲ್ಲಿ ಉಚಿತ ರಕ್ತದಾನ ಶಿಬಿರ

ಟೇಕಲ್ ಗ್ರಾಮದಲ್ಲಿ ಉಚಿತ ರಕ್ತದಾನ ಶಿಬಿರ

ಮಾಲೂರು:- ರಕ್ತದಾನ ಮಹಾದಾನ ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ರಕ್ತದಾನ ಮಾಡಬೇಕು, ನಮ್ಮ ಒಂದೊಂದು ಹನಿರಕ್ತವು ಒಂದೊಂದು ಜೀವವನ್ನು ಬದುಕಿಸುತ್ತದೆ. ಇದರಿಂದ ಆರೋಗ್ಯವಂತ ಭಾರತ ನಿರ್ಮಾಣವಾಗುತ್ತದೆ ಎಂದು ಅಕ್ಷರ ತಂಡದ ಪದಾಧಿಕಾರಿಗಳು ತಿಳಿಸಿದರು. ತಾಲೂಕಿನ ಟೇಕಲ್ ಗ್ರಾಮದಲ್ಲಿನ  ಆಶ್ಲೇ  ಶಾಲೆ ಹತ್ತಿರ *ಅಕ್ಷರ ತಂಡ ಮತ್ತು ಎಸ್ ಎನ್ ಆರ್ ಜಿಲ್ಲಾ ಆಸ್ಪತ್ರೆ, ಕೋಲಾರ* ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ಅನೇಕ ದಾನಿಗಳು ರಕ್ತದಾನ ಮಾಡಿದರು. ಈ ಶಿಬಿರದಲ್ಲಿ 83 ಯೂನಿಟ್ ಅಷ್ಟು ರಕ್ತ ಸಂಗ್ರಹವಾಗಿದೆ. ಈ ಸಂದರ್ಭದಲ್ಲಿ ಅಕ್ಷರ ತಂಡದ ವತಿಯಿಂದ ಮುಖ್ಯ ಅತಿಥಿಗಳಾದ ಕ್ಯಾಪ್ಟನ್ ಶ್ರೀ ಸಿ.ಎಂ.ರಾಜೇಶ್ ಜಯಸಿಂಹ ಹಾಗೂ ಡಾ.ರೇವತಿ ರವರನ್ನು ಸನ್ಮಾನಿಸಲಾಯಿತು. ಈ ಶಿಬಿರದಲ್ಲಿ ಮುಖ್ಯ ಅತಿಥಿಗಳಾದ ಕ್ಯಾಪ್ಟನ್ ಶ್ರೀ ಎಂ.ರಾಜೇಶ್ ಜಯಸಿಂಹ, ಡಾ. ರೇವತಿ ವೈದ್ಯಾಧಿಕಾರಿಗಳು ರಕ್ತ ನಿಧಿ ಕೇಂದ್ರ, ಎಸ್ ಎನ್ ಆರ್ ಆಸ್ಪತ್ರೆ ಕೋಲಾರ ಮತ್ತು ಅಕ್ಷರ ತಂಡದ ಎಲ್ಲಾ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.