ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರತಿಯೊಬ್ಬರ ಹಕ್ಕು

ಪ್ರಜಾಪ್ರಭುತ್ವದಲ್ಲಿ  ಮತದಾನ  ಪ್ರತಿಯೊಬ್ಬರ ಹಕ್ಕು

 ಮತದಾನ ಮಾಡುತಲಿ ಹಕ್ಕುಗಳ  ಚಲಾಯಿಸಿ
 ಗತಿಸಿರುವ ದಿನಗಳನು ಮರೆಯದಲೇ
 ಸತಿಸುತರ  ಜವಾಬ್ದಾರಿ ಬಾಳನು  ಮರೆಯದಿರಿ
 ಮತ ಹೀನ ಆಗದಿರು ಲಕ್ಷ್ಮಿ ದೇವಿ......

 ನಮ್ಮ ದೇಶ ಭಾರತ. ಇಂತಹ ದೇಶದಲ್ಲಿ ಮತದಾನದ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸುವುದು ಬಹು ಮುಖ್ಯ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ  ಮತದಾನವು ಪ್ರಮುಖವಾದ ಅಂಶವನ್ನು ಒಳಗೊಂಡಿದೆ. ಈ ಮತದಾನದ ಹತ್ತಿರದಿಂದಲೇ ಜನಸಾಮಾನ್ಯರು ತಮ್ಮ ಪ್ರತಿನಿಧಿಯ ಅಧಿಕಾರಿಯನ್ನು  ತಮ್ಮ  ಮೂಲಕವೇ  ಸರ್ಕಾರವನ್ನು ಚಲಾಯಿಸಬೇಕಾದವರನ್ನು ಆಯ್ಕೆ ಮಾಡಲು  ಸಾಧ್ಯ. ಎಂತಹ ಕಷ್ಟಗಳನ್ನು ಕಂಡಿದ್ದರು ಸಹ  ಸಮಾಜದಲ್ಲಿ ಪ್ರತಿಯೊಬ್ಬರಿಗೂ  ಮತದಾನದ ಹಕ್ಕು ಇರುತ್ತದೆ. ಹಿಂದೆ ನಡೆದ ಎಷ್ಟೋ ಕಹಿ ಘಟನೆಗಳು ಸರ್ಕಾರದಿಂದ ಭರವಸೆಗಳ ಪೂರವನ್ನೇ ಕೇಳಿ ಬೇಸರಗೊಂಡವರು, ಅಥವಾ ಸಂತೋಷ ಪಟ್ಟವರು ಇದ್ದರು ಸಹ  ಸಮಯ ಎಂಬುದು ಯಾರ ಸ್ವತ್ತು  ಅಲ್ಲ. ನಮಗೂ ಸಮಯ ಬರುತ್ತದೆ ಅದನ್ನು ಸದುಪಯೋಗಿಸಿಕೊಂಡು ಬಳಸಿಕೊಳ್ಳಬೇಕು. ಅದು ನಮ್ಮ ಕೈಯಲ್ಲೇ ಇರುತ್ತದೆ ಅದನ್ನು ಬಳಸಿಕೊಂಡು ಸೂಕ್ತವಾದ ಪ್ರತಿನಿಧಿಯ ಅಧಿಕಾರಿಯನ್ನು  ಆಯ್ಕೆ ಮಾಡುವುದು  ನಮ್ಮ ಹಕ್ಕು ಎಂಬುದನ್ನು ಯಾರು ಮರೆಯದಂತೆ ಪ್ರತಿಯೊಬ್ಬರು ಮತ ಚಲಾಯಿಸಬೇಕು . ನಮ್ಮ ಭಾರತದಲ್ಲಿ ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಗೆ, ಮೂಲಭೂತ ಹಕ್ಕುಗಳ ಜೊತೆಗೆ ಸಾಗಲು  ಮತದಾರರು ತಮ್ಮ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಬಳಸುವುದು ಬಹಳ ಮುಖ್ಯವಾಗಿರುತ್ತದೆ. ಈ ಮತದಾನದ ಸಮಯದಲ್ಲಿ  ಪ್ರತಿನಿಧಿಗಳು ಒಡ್ಡುವಂತಹ ಆಸೆ ಆಕಾಂಕ್ಷಿಗಳಗನ್ನು ತೊರೆದು  ಯಾವುದೇ ಆಮಿಷಕ್ಕೆ ಒಳಗಾಗದಂತೆ  ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಂಡು  ಮತದಾನದ ಹಕ್ಕನ್ನು ಬಳಸಿಕೊಳ್ಳಬೇಕು.
 ಸಮಾಜದಲ್ಲಿ ಆಗು  ಹೋಗುಗಳು ಸರಿ ಇಲ್ಲವೆಂದು ಮತದಾನವನ್ನು ಮಾಡದಿದ್ದರೆ  ಪರಿಣಾಮಕಾರಿಯಾಗಿ ತಮ್ಮನ್ನು ತಾವು ಮೌನವಾಗಿರಿಸಿಕೊಂಡರೆ ಸರಿಯೇ ? ಮತದಾನದಿಂದ ಹೊರ ಉಳಿದು ಸಾಧನೆ ಮಾಡುತ್ತೇವೆ ಎಂಬುದು ಸರಿಯೇ? ಹೇಳಬೇಕೆಂದರೆ ನಷ್ಟ ನಮ್ಮ ಸಮಾಜಕ್ಕೂ ನಮಗೆ ಆಗುತ್ತದೆ ಹೊರತು ಬೇರೆ ಯಾರಿಗೂ ಅಲ್ಲ. ಎಷ್ಟೋ ಜನರು ಮನಸ್ಸಿಗೆ ನೋವಾದ ರೀತಿಯಲ್ಲಿ  ಯಾವುದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಮತದಾನದಿಂದ ದೂರ ಉಳಿದಿರುವಂತಹ  ಹಲವು ಜನರನ್ನು  ಕಾಣಬಹುದು. ಮತ್ತು ಚುನಾವಣೆಯ ದಿನದಂದು ಸಿಗುವಂತಹ  ರಜೆಯನ್ನು ಮೆಜೆಯಲ್ಲಿ ಕಳೆಯದೆ ಮತದಾನ ಮಾಡಿ  ಸದ್ಬಳಕೆಯನ್ನು ಮಾಡಿಕೊಳ್ಳಬೇಕೆ  ಹೊರತು.  ಮತದಾನ ಮಾಡದೆ ತಿಳಿದು ತಿಳಿದು  ತಮ್ಮ ಹಕ್ಕನ್ನು  ಪಡೆಯದೆ ದೂರ ಉಳಿದುಬಿಡುತ್ತಾರೆ.
" ಮಾಡಬೇಕಿದೆ ಪ್ರತಿಯೊಬ್ಬರೂ  ಮತದಾನವ
  ಪ್ರತಿ ನಿಧಿಯ ಅಧಿಕಾರಿಯ ಸೇವೆ ಪಡೆಯುವ
 ಸುಳ್ಳು ಭರವಸೆಗಳಿಗೆ ಮಾರುಹೋಗದಂತೆ
 ಕಾರ್ಯವನು  ಮಾಡುವವರ ಹುಡುಕಬೇಕಿದೆ  
 ದೇಶದ ಉದ್ದಾರಕ್ಕಾಗಿ ಕಾಯಬೇಕಿದೆ
 ಹಿಂದೂ ಧರ್ಮವನ್ನು ಉಳಿಸಬೇಕಿದೆ
 ಸತ್ಯ ಸುಳ್ಳುಗಳ ನಡುವಿನ  ಜಂಜಾಟಗಳಲಿ
 ಪ್ರಾಮಾಣಿಕತೆಯ ಪ್ರತಿನಿಧಿಯ  ಹೆಕ್ಕಿ  ತೆಗೆಯಬೇಕಿದೆ
 ನಮ್ಮ ದೇಶ ಅಭಿವೃದ್ಧಿಯಿಂದ  ಉದ್ದಾರವಾಗಬೇಕಿದೆ. ಹೀಗೆ ಹೇಳುತ್ತಾ  ನಮ್ಮ ಪ್ರತಿನಿಧಿಯ ಅಧಿಕಾರಿಯನ್ನು ಆಯ್ಕೆ ಮಾಡುವಾಗ  ಬಹಳಷ್ಟು ಯೋಚಿಸಿ  ಮತದಾನ ಮಾಡಬೇಕಿದೆ.
ಯಾವ ಪಕ್ಷ ಬಂದರೆ ನಮ್ಮ ಸರ್ಕಾರವನ್ನು ಚೆನ್ನಾಗಿ ನಡೆಸುತ್ತಾರೆ ಎಂದು ತಿಳಿದು ಪ್ರಜ್ಞಾವಂತ ಮತದಾರರಾಗಿ ಮತ ಚಲಾಯಿಸುವ ಕಾರ್ಯವನ್ನು ಮಾಡಬೇಕಿದೆ.
   ಪ್ರತಿನಿಧಿಗಳ ಆಯ್ಕೆಯ ನಂತರದಲ್ಲಿ ನೀಡಿದಂತಹ  ಭರವಸೆಗಳನ್ನು ಈಡೇರಿಸದಿದ್ದಾಗ ಮತದಾರರಲ್ಲಿ ನಿರಾಶಕ್ತಿ ಉಂಟಾಗುವುದು ಸರ್ವೇಸಾಮಾನ್ಯವಾಗಿದೆ. ತಮ್ಮ  ಸಮಸ್ಯೆಗಳಿಗೆ ಸ್ಪಂದಿಸುವವರು ಯಾರು  ಎಂಬುದನ್ನು ಅರಿತು  ಚುನಾವಣೆಗಳಲ್ಲಿ ಪ್ರತಿನಿಧಿಯ ಅಧಿಕಾರಿಯನ್ನು ಆಯ್ಕೆ  ಮಾಡಬೇಕು. ಮತದಾನದ ಹಕ್ಕಿನ  ಸದ್ಬಳಕೆಯನ್ನು  ಮಾಡಿಕೊಂಡು ಹೋಗಬೇಕು. ಕೆಲವೊಮ್ಮೆ ತಿಳಿದು ತಿಳಿಯದೆಯೋ  ಪ್ರತಿನಿಧಿಯಾ ಆಯ್ಕೆಯಲ್ಲಿ ತಪ್ಪಾಗಬಹುದು. ಅವರು  ಕೆಲಸವನ್ನು ಮಾಡದಿದ್ದಾಗ  ಶಪಿಸಿರಲು ಬಹುದು. ಅದನ್ನೆಲ್ಲ ಮರೆತು. ಹೊಸ ಪ್ರತಿನಿಧಿಯ ಆಯ್ಕೆಯಲ್ಲಿ  ತಮಗೆ ತಾವೇ ಪ್ರಶ್ನಿಸುವಂತಹ ಕಾರ್ಯಗಳನ್ನು ಮಾಡುತ್ತಾ, ನಾಟಕೀಕರಣ ಮಾಡುವವರನ್ನು ಹೊರತುಪಡಿಸಿ  "ಜನಸೇವೆಯೇ ಜನಾರ್ದನ ಸೇವೆ"ಎಂದು ಕಾರ್ಯ ಮಾಡುವ ಪ್ರತಿನಿಧಿಯನ್ನು  ಹುಡುಕಿ  ಹೆಕ್ಕಿ ತೆಗೆಯಬೇಕು. ಹುಡುಕೋಣವೆಂದರೆ ಸಿಕ್ಕಿ ಬಿಡಲು ಅದೇನು ವಸ್ತುವು ಅಲ್ಲ ಎಂದು ಪ್ರಶ್ನೆ ನಿಮ್ಮ ಮನಸಿನಲ್ಲಿ ಹುಟ್ಟುತ್ತದೆ ಅಲ್ಲವೇ? ಒಮ್ಮೆ ಯೋಚಿಸಿ ನೋಡಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವವರ ಹುಡುಕಿ ತೆಗೆಯುವುದು ದೊಡ್ಡ ವಿಷಯವಲ್ಲ. ಪ್ರತಿನಿಧಿಗಳ ಆಯ್ಕೆ ಮಾಡುವ  ಸರ್ಕಾರವನ್ನು ಅರಿತು ಯಾವ ಸರ್ಕಾರ ಉತ್ತಮ ಎಂಬುದು ಯೋಚಿಸಿ ಪ್ರತಿಯೊಬ್ಬರೂ ಸಹ  ಮತದಾನ ಮಾಡುವುದು ಮುಖ್ಯವಾಗಿದೆ. ಮತದಾನ ಮಾಡುವುದು ಪ್ರಜಾಪ್ರಭುತ್ವದಲ್ಲಿ ನಿಮ್ಮ ನಿಲುವನು ನೀವೇ ತೆಗೆದುಕೊಳ್ಳುವ, ನಿಮ್ಮ ಹಕ್ಕಿಗಾಗಿ ನೀವು ಹೋರಾಟ ಮಾಡುವ ಒಂದು ವಿಧಾನ . ಎಲ್ಲರೂ ಮತದಾನ ಮಾಡಿ  ಜನರ ಒಳಿತಿನ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದರಲ್ಲಿ ಯಶಸ್ವಿಯಾಗಿರಿ. ಮತದಾನ ನಮ್ಮ ಹಕ್ಕು ಮರೆಯದಂತೆ  ಮತ ಚಲಾಯಿಸಿರಿ ಜಾಗೃತರಾಗಿ ಮತ ಚಲಾಯಿಸುವುದನ್ನು ಮರೆಯದಿರಿ  ಎಂದು ಹೇಳುತ್ತಾ  ಶುಭವಾಗಲಿ ಎಂದು ಹಾರೈಸುತ್ತೇನೆ. ಜೈ ಹಿಂದ್ ಜೈ ಕರ್ನಾಟಕ ಮಾತೆ.

ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್.
ಸಾಮಾಜಿಕ ಚಿಂತಕಿ. ಶಿಕ್ಷಕಿ. ಹಾಸನ.