ಮುಂಚೂಣಿ ಪ್ರಾತ್ಯಕ್ಷಿಕೆ-ರಾಗಿ ಬೆಳೆಯಲ್ಲಿ ಎಸ್.ಟಿ.ಸಿ.ಆರ್. ಆಧಾರಿತ ಪೋಷಕಾಂಶಗಳ ನಿರ್ವಹಣೆ ಕ್ಷೆತ್ರೋತ್ಸವ

ಮುಂಚೂಣಿ ಪ್ರಾತ್ಯಕ್ಷಿಕೆ-ರಾಗಿ ಬೆಳೆಯಲ್ಲಿ ಎಸ್.ಟಿ.ಸಿ.ಆರ್. ಆಧಾರಿತ ಪೋಷಕಾಂಶಗಳ ನಿರ್ವಹಣೆ ಕ್ಷೆತ್ರೋತ್ಸವ

ಮುಂಚೂಣಿ ಪ್ರಾತ್ಯಕ್ಷಿಕೆ-ರಾಗಿ ಬೆಳೆಯಲ್ಲಿ ಎಸ್.ಟಿ.ಸಿ.ಆರ್. ಆಧಾರಿತ ಪೋಷಕಾಂಶಗಳ ನಿರ್ವಹಣೆ ಕ್ಷೆತ್ರೋತ್ಸವ

ಕೃಷಿ ವಿಜ್ಞಾನ ಕೇಂದ್ರ  ವಿ.ಸಿ. ಫಾರ್ಮ್ ಮಂಡ್ಯ ವತಿಯಿಂದ ಮಂಡ್ಯ "ರಾಗಿ ಬೆಳೆಯಲ್ಲಿ ಎಸ್.ಟಿ.ಸಿ.ಆರ್. ಆಧಾರಿತ ಪೋಷಕಾಂಶಗಳ ನಿರ್ವಹಣೆ" ಕುರಿತು ನಾಗಮಂಗಲ ತಾಲೂಕಿನ ಬಿಂಡೇನಹಳ್ಳಿ ಗ್ರಾಮದ ಶ್ರೀಯುತ ಯೋಗೇಶ್ ರವರ ತಾಕಿನಲಿ ಕ್ಷೇತ್ರೋತ್ಸವವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಾ.ಅತೀಫ ಮುನವರಿ, ವಿಜ್ಞಾನಿ (ಮಣ್ಣು ವಿಜ್ಞಾನ) ರವರು ಎಸ್.ಟಿ.ಸಿ.ಆರ್. ಆಧಾರಿತ ಅಂದರೆ ಮಣ್ಣು ಪರೀಕ್ಷೆ ಮಾಡಿಸಿ ಅದಕ್ಕೆ ಅನುಸಾರ ಪೋಷಕಾಂಶಗಳ ನಿರ್ವಹಣೆ ಮಾಡಿದಲ್ಲಿ ಉತ್ತಮ ಇಳುವರಿ ಆದಾಯ ಪಡೆಯಲು ಸುಲಭ ಎಂದರು ಮತ್ತು ಬೆಳೆಗಳಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಅರ್ಪಿತ, ಹವಾಮಾನ ತಜ್ಞರು, ಹವಾಮಾನ ವೈಪರೀತ್ಯ ದಿಂದಾಗುತಿರುವ ಬದಲಾವಣೆಗಳು ಹಾಗೂ ಅದಕ್ಕೆ ತಕ್ಕಂತೆ ಹವಾಮಾನ ಸ್ಥಿತಿಸ್ಥಾಪಕ ಪದ್ದತಿ ಬದಲಾವಣೆ ಮತ್ತು ಅಳವಡಿಕೆ ಕುರಿತು ಮಾಹಿತಿ ನೀಡಿದರು. ಶ್ರೀಯುತ ಯೋಗೇಶ್ ರವರು ತಮ್ಮ ಜಮೀನಿನಲ್ಲಿ ತೆಗೆದುಕೊಂಡ ಪ್ರಾತ್ಯಕ್ಷಿಕೆಯಿಂದ ಉತ್ತಮ ಇಳುವರಿ ಪಡೆದಿರುವ ಬಗ್ಗೆ ತಿಳಿಸಿದರು.