ಉತ್ತಮ ಸೂರ್ಯಕಾಂತಿ ಬೆಳೆ ಬೆಳೆಯುವ ಮೂಲಕ ಮಾದರಿಯಾದ ರೈತ ರಾಮಂಜಿ-ರೈತರ ಮುಖದಲ್ಲಿ ಕಾಂತಿ ಮೂಡಿಸಿದ ಸೂರ್ಯಕಾಂತಿ

ಉತ್ತಮ ಸೂರ್ಯಕಾಂತಿ ಬೆಳೆ ಬೆಳೆಯುವ ಮೂಲಕ ಮಾದರಿಯಾದ ರೈತ ರಾಮಂಜಿ-ರೈತರ ಮುಖದಲ್ಲಿ ಕಾಂತಿ ಮೂಡಿಸಿದ ಸೂರ್ಯಕಾಂತಿ

ಉತ್ತಮ ಸೂರ್ಯಕಾಂತಿ ಬೆಳೆ ಬೆಳೆಯುವ ಮೂಲಕ ಮಾದರಿಯಾದ ರೈತ ರಾಮಂಜಿ-ರೈತರ ಮುಖದಲ್ಲಿ ಕಾಂತಿ ಮೂಡಿಸಿದ ಸೂರ್ಯಕಾಂತಿ

ಬಾಗೇಪಲ್ಲಿ: ನೀರಾವರಿ ಪ್ರದೇಶ ಜಮೀನುಗಳಲ್ಲಿ ಸೂರ್ಯಕಾಂತಿ ಬೆಳೆಯನ್ನು ಮೊದಲ ಬೆಳೆಯಾಗಿ ಬೆಳೆದ ರೈತರಿಗೆ ಉತ್ತಮವಾದ ಯೋಗ್ಯಬೆಲೆ ದೊರೆತಿದ್ದು, ಸೂರ್ಯಕಾಂತಿ ಬೆಳೆದ ರೈತರರ ಮೊಗದಲ್ಲಿ ಮಂದಹಾಸ ಮೂಡಿದೆ. ತಾಲೂಕಿನ  ಕೊತ್ತಕೋಟೆ ಗ್ರಾಮದ ರೈತ ರಾಮಾಂಜಿ ನೀರಾವರಿಯಾಶ್ರಿತ ಜಮೀನಿನಲ್ಲಿ ಕಾವೇರಿ  ಸೂರ್ಯಕಾಂತಿ ಬೆಳೆಯನ್ನು ಬಿತ್ತನೆ ಮಾಡಿದ್ದರು. ಕೊಳವೆ ಬಾವಿಗಳ ಮೂಲಕ ನೀರಾವರಿ ಆಶ್ರಿತ ಪ್ರದೇಶದ ರೈತರೂ ಸೂರ್ಯಕಾಂತಿ ಬೆಳೆಯನ್ನು ಬೆಳದಿದ್ದು, ಸುಮಾರು 8 ಎಕರೆ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆ  ಬೆಳೆದು ಸುತ್ತಮುತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ. ಅನೇಕ ವರ್ಷಗಳಿಂದ ವ್ಯವಸಾಯವನ್ನೇ ನಂಬಿ ಜೀವನ ಮಾಡುತ್ತಾ ಉತ್ತಮ ಆದಾಯ ಗಳಿಸುವ ಮೂಲಕ ಮಾದರಿ ರೈತ ಎಂಬುವ ಹೆಸರಿಗೆ ಪಾತ್ರಗಾಗಿದ್ದಾರೆ. ಸೂರ್ಯಕಾಂತಿ, ಅಡುಗೆ ಎಣ್ಣೆಗೆ ಖಚ್ಚಾವಸ್ತುವಾಗಿರುವ ಒಂದು ಪ್ರಮುಖ ಬೆಳೆ. ಸೂರ್ಯಕಾಂತಿ ಬೀಜಗಳಲ್ಲಿ ಶೇಕಡಾ ನಲವತ್ತರಷ್ಟು ಉತ್ತಮ ಗುಣಮಟ್ಟದ ಎಣ್ಣೆಯ ಅಂಶವಿದೆ. ಹಾಗಾಗಿ ರೈತರಿಗೆ ಸೂರ್ಯಕಾಂತಿ ಬೆಳೆಯುವುದು ಹೆಚ್ಚು ಲಾಭದಾಯಕವಾಗಿದೆ ಎಂದು ಸಂತಸ ವನ್ನು ವ್ಯಕ್ತಪಡಿಸಿದ್ದರೆ. ಈ ಸಂಧರ್ಭದಲ್ಲಿ ಕೊತ್ತಕೋಟೆ ಗ್ರಾಮದ ರೈತ ಎಂ. ಎಲ್.ರಾಮಂಜಿನಪ್ಪ ಕುಟುಂಬಸ್ಥರಾದ ಎಂ. ಎನ್. ಮರಿಯಾಲ ಲಕ್ಷ್ಮಯ್ಯ, ಎಂ. ಎಲ್. ಪುರುಷೋತ್ತಮ್, ಕೆ. ಆರ್. ಪೃತ್ವಿ ರಾಜ್,ಎಚ್. ಜಿ. ದಾಕ್ಷಯಣಿ,ವರಲಕ್ಷ್ಮಿ ಸೇರಿದಂತೆ ಕೂಲಿ ಕಾರ್ಮಿಕರು ಇದ್ದರು.