ಓಂಶಕ್ತಿ ಚಲಪತಿ ನೇತೃತ್ವದಲ್ಲಿ ಮನೆ-ಮನೆಗೆ ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆ

ಓಂಶಕ್ತಿ ಚಲಪತಿ ನೇತೃತ್ವದಲ್ಲಿ ಮನೆ-ಮನೆಗೆ ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆ

ಓಂಶಕ್ತಿ ಚಲಪತಿ ನೇತೃತ್ವದಲ್ಲಿ ಮನೆ-ಮನೆಗೆ ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆ

ಕೋಲಾರ : ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಹೊರವಲಯದ ಎನ್.ಜಿ.ಒ ಲೇಔಟ್ ನಲ್ಲಿ ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಶ್ರದ್ದೆ ಭಕ್ತಿಯಿಂದ ಅಯೋಧ್ಯೆಯ ಮಂತ್ರಾಕ್ಷತೆ ಹಾಗೂ ರಾಮನ ಭಾವಚಿತ್ರ ವಿತರಿಸಿ ರಾಮನ ಭಕ್ತಿಭಾವವನ್ನು ಮೆರೆದರು. ಈ ಸಂದರ್ಭದಲ್ಲಿ ಕುಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಓಂಶಕ್ತಿ ಚಲಪತಿ ಮಾತನಾಡಿ ಭಾರತ ದೇಶದ 500 ವರ್ಷಗಳ ಕೋಟ್ಯಂತರ ಹಿಂದೂಗಳ ಕನಸನ್ನು ಇದೇ ತಿಂಗಳು 22ರಂದು ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆ ಮಾಡುವ ಮೂಲಕ ನರೇಂದ್ರ ಮೋದಿ ನಾಯಕತ್ವದಲ್ಲಿ ನನಸು ಮಾಡಲಿದ್ದಾರೆ ಇಡೀ ದೇಶ ಸಂತೋಷ ಪಡುವ ವಿಷಯವಾಗಿದೆ. ಯಾವುದೇ ರಾಜಕೀಯ ರಹಿತವಾಗಿ ಪಕ್ಷಬೇಧ ಮರೆತು ಭಾರತೀಯರಾದವರು ಸಂಭ್ರಮಪಡುತ್ತಾ ಇದ್ದಾರೆ ಆ ದಿನ ಪ್ರತಿ ಮನೆಯಲ್ಲಿ ದೀಪಗಳನ್ನು ಉರಿಸಿ, ಕುಟುಂಬದ ಸದಸ್ಯರೆಲ್ಲರೂ ಸೇರಿ ಪೂಜೆ ಮಾಡಬೇಕು. ದೀಪಾವಳಿ ಮಾದರಿಯಲ್ಲಿ ಹಬ್ಬವನ್ನು ಆಚರಿಸಿ ಸಂಭ್ರಮಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ರಾಮಭಕ್ತರಾದ ನಟರಾಜ್, ಮುರಳಿ, ನಾಗರಾಜ್, ಗಣೇಶ್, ಸುರೇಶ್, ಗೋವಿಂದ ಸ್ವಾಮಿ, ಮುಂತಾದವರು ಇದ್ದರು.