ರಿವಾರ್ಡ್ ಯೋಜನೆಯಡಿ ದ್ವೀಪ ಬೆಳಗಿಸುವ ಕಾರ್ಯಕ್ರಮವನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಉದ್ಘಾಟಿಸಿದರು

ರಿವಾರ್ಡ್ ಯೋಜನೆಯಡಿ ದ್ವೀಪ ಬೆಳಗಿಸುವ ಕಾರ್ಯಕ್ರಮವನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಉದ್ಘಾಟಿಸಿದರು

ರಿವಾರ್ಡ್ ಯೋಜನೆಯಡಿ ದ್ವೀಪ ಬೆಳಗಿಸುವ ಕಾರ್ಯಕ್ರಮವನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಉದ್ಘಾಟಿಸಿದರು

ಬಾಗೇಪಲ್ಲಿ: ತಾಲೂಕಿನ ಪತಾಪಾಳ್ಯ ಗುಮ್ಮಲಪಲ್ಲಿ ಉಪ ಜಲಾನಯನ ಪ್ರದೇಶದಲ್ಲಿ ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಯಡಿ ತಾಲ್ಲೂಕು ಮಟ್ಟದ ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ ಪಾತಪಾಳ್ಯ ಹೋಬಳಿಯ ತೋಳ್ಳಪಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋಲಾರಪಲ್ಲಿ ಗ್ರಾಮದ ಶ್ರೀ ಮದ್ದೇಮ್ಮ ದೇವಿ ದೇವಾಲಯದ ಆವರಣದಲ್ಲಿ ದ್ವೀಪ ಬೆಳಗಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಮಾತನಾಡಿ ಈಗಾಗಲೇ ಗುಮ್ಮಲಪಲ್ಲಿ ಉಪಜಲಾನಯನ ಪ್ರದೇಶವು ಮೂರು ಗ್ರಾಮ ಪಂಚಾಯ್ತಿಗಳನ್ನು ಒಳಗೋಂಡಿದ್ದು ತೋಳ್ಳಪಲ್ಲಿ, ಸೋಮನಾಥಪುರ, ನಾರೆಮದ್ದೇಪಲ್ಲಿ ಪಂಚಾಯ್ತಿಗಳಲ್ಲಿ ಕೆಲಸಗಳನ್ನು ಮಾಡಲಾಗುತ್ತಿದೆ ವೈಜ್ಞಾನಿಕ ಭೂ ಸಂಪನ್ಮೂಲ ಸಮೀಕ್ಷೆ ಕೈಗೊಂಡು ಡಿಜಿಟಲ್ ಪೋರ್ಟಲ್ ನಲ್ಲಿ ಮಾಹಿತಿ ಕ್ರೋಡಿಕರಿಸುವುದು, ಕೃಷಿಹೋಂಡಾ, ತುಂತುರು ನೀರಾವರಿ, ಮಣ್ಣು, ನೀರು ಸಂರಕ್ಷಣೆಗಾಗಿ ಬದುಗಳು ನಿರ್ಮಾಣ, ಚೆಕ್ ಡ್ಯಾಂ, ತೋಟಗಾರಿಕೆ ಗಿಡಗಳು, ಅರಣ್ಯ ಗಿಡಗಳು, ಮಹಾಗಣಿ, ಇನ್ನು ಹಲವಾರು ಕೆಲಸಗಳನ್ನು ಮಾಡಲಾಗುತ್ತಿದ್ದು ಈ ಭಾಗದ ರೈತರು ಈ ಕಾರ್ಯಕ್ರಮವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ರೈತರಿಗೆ ಟ್ರಾಕ್ಟರ್ ಕಲ್ಟಿವೆಟರ್ಗಳು, ಶಾಲೆಗಳಿಗೆ ಡೆಸ್ಕ್, ಸಿಮೇಂಟ್ ಬೆಂಚ್, ದನಗಳನ್ನು ಎತ್ತುವ ಸಾಧನಗಳು, ತುಂತುರು ಹನಿ ನೀರಾವರಿಯ ಸಲಕರಣೆಗಳನ್ನು ನೀಡಲಾಯಿತು. ಯಾವುದೇ ಕಾರಣಕ್ಕೂ ರೈತರು ಸರ್ಕಾರದ ಸಲಕರಣೆಗಳನ್ನು ಮಾರುವುದನ್ನು ಸಹಿಸುವುದಿಲ್ಲ ಅಂತಹ ರೈತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.