ಭೀಮಾ ನದಿಯ ಮೇಲಿನ ಪಂಪುಶೆಟ್ಟು ತೆರವುಗೊಳಿಸಲು ಎಸಿ ಮನವಿ

ಭೀಮಾ ನದಿಯ ಮೇಲಿನ ಪಂಪುಶೆಟ್ಟು ತೆರವುಗೊಳಿಸಲು ಎಸಿ ಮನವಿ

ಚಡಚಣ ತಾಲೂಕಿನ ಭೀಮಾ ನದಿಯ ದಂಡೆಯ ರೈತರು ಭೀಕರ ಬರಗಾಲದ ನಿಮಿತ್ಯ ಬರುವ ದಿನಗಳಲ್ಲಿ ಗ್ರಾಮಸ್ಥರಿಗೆ ಮತ್ತು ಜನ ಜಾನುವಾರುಗಳಿಗೆ ತೊಂದರೆ ಯಾಗದಂತೆ ಮಾನವೀಯ ಆಧಾರದ ಮೇಲೆ ಕೃಷಿಗೆ ನೀರು ಬಳಸಬಾರದೆಂದು ಇಂಡಿ ಮತ್ತು ಚಡಚಣ ತಾಲೂಕಿನ ಅಣಚಿ,ಧೂಳಖೇಡ,ಮರಗೂರ ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ಮನವಿ ಮಾಡಿದರು.ಇಂಡಿ ಮತ್ತು ಚಡಚಣ ತಾಲೂಕಿನಲ್ಲಿ ಮಳೆ ಕಡಿಮೆ ಯಾಗಿರುವದರಿಂದ ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ರೈತರು ಕೃಷಿಗೆ ನೀರು ಬಳಸಬಾರದು.
ಅದಲ್ಲದೆ ಇಂಡಿ ಮತ್ತು ಚಡಚಣ ತಾಲೂಕಿನ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ನೀರಿನ ಅವಶ್ಯಕತೆ ಇರುವದರಿಂದ ಇಂಡಿ ಮತ್ತು ಚಡಚಣ ತಾಲೂಕುಗಳ ಭೀಮಾ ನದಿಯ ದಡದಲ್ಲಿರುವ ಗ್ರಾಮಗಳ ರೈತರು ನೀರನ್ನು ಬಳಸದಂತೆ ಕಾನೂನಾತ್ಮಕ ನಿರ್ಭಂಧ ವಿಧಿಸಿದ್ದು ಮಾನವೀಯ ಆಧಾರದ ಮೇಲೆ ನೀರು ಬಳಸದಂತೆ 144ರನ್ವಯ ಆದೇಶ ಹೊರಡಿಸಿದೆ ಎಂದರು. ಇಂಡಿಯ ತಹಸೀಲ್ದಾರ ಬಿ.ಎಸ್.ಕಡಕಬಾವಿ, ಚಡಚಣ ತಹಸೀಲ್ದಾರ ಸಂಜಯ ಇಂಗಳೆ,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಅಧಿಕಾರಿ ಎಸ.ಆರ್.ರುದ್ರವಾಡಿ, ಹೆಸ್ಕಾಂ ಎಇಇ ಎಸ್.ಆರ್.ಮೆಂಡೆಗಾರ, ಚಡಚಣ ಎಇಇ ಕುಮಸಿ, ಇಒ ಬಾಬು ರಾಠೋಡ, ಚಡಚಣ ಇಒ ಸಂಜಯ ಖಡಗೇಕರ ಮತ್ತಿತರಿದ್ದರು.