ಸಮಗ್ರ ಭಾರತ ವಿಕಸಿತವೇ ಪ್ರಧಾನಿ ಮೋದಿ ಸಂಕಲ್ಪವಾಗಿದೆ-ಸಂಸದ ಜಿಗಜಿಣಗಿ

ಸಮಗ್ರ ಭಾರತ ವಿಕಸಿತವೇ ಪ್ರಧಾನಿ ಮೋದಿ ಸಂಕಲ್ಪವಾಗಿದೆ-ಸಂಸದ ಜಿಗಜಿಣಗಿ

ಸಮಗ್ರ ಭಾರತ ವಿಕಸಿತವೇ ಪ್ರಧಾನಿ ಮೋದಿ ಸಂಕಲ್ಪವಾಗಿದೆ-ಸಂಸದ ಜಿಗಜಿಣಗಿ

ಇಂಡಿ:ಸಮಗ್ರ ಭಾರತ ವಿಕಸಿತವೇ ಪ್ರಧಾನಿ ಮೋದಿ ಅವರ ಸಂಕಲ್ಪವಾಗಿದೆ.ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ನಂತರ ಅನೇಕ ಅಭಿವೃದ್ದಿ ಕಾರ್ಯಗಳು ದೇಶದಲ್ಲಿ,ರಾಜ್ಯ,ಜಿಲ್ಲೆಯಲ್ಲಿ ನಡೆದಿವೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ಅವರು ಗರೀಬ್ ಕಲ್ಯಾಣ,ಅಟಲ್ ಪಿಂಚಣಿ ಯೋಜನೆ, ಫಸಲ್ ವಿಮಾ ಯೋಜನೆ, ಸುಕನ್ಯಾ ಸಮೃದ್ದಿ ಯೋಜನೆ,ಉಜ್ವಲ್ ಯೋಜನೆಗಳನ್ನು ಜಾತಿ ಭೇದ,ಪಕ್ಷ ಮರೆತು ಪ್ರತಿಯೊಬ್ಬರಿಗೂ ನೀಡಿದ್ದಾರೆ.ಈ ದೇಶದ ಜನರ ಪರಿಶ್ರಮ ನೋಡಿದರೆ, ದೇಶ ಈ ಹಿಂದೆಯೇ ಅಭಿವೃದ್ದಿ ಹೊಂದಬೇಕಿತ್ತು.ಆದರೆ ಹಿಂದಿನ ಸರ್ಕಾರಗಳು ನಮ್ಮ ಜನರಿಗೆ ಸೂಕ್ತ ಅವಕಾಶ ನೀಡದಿರುವುದು,ಕೇಂದ್ರದಲ್ಲಿನ ಹಿಂದಿನ ಸರ್ಕಾರದಲ್ಲಿ ನಡೆದ ಭೃಷ್ಠಾಚಾರ ಹಾಗೂ ದುರಾಡಳಿತದಿಂದ ದೇಶ ಹೇಳಿಕೊಳ್ಳುವಷ್ಟು ಅಭಿವೃದ್ದಿ ಸಾಧಿಸಿರುವುದಿಲ್ಲ.ಪ್ರಧಾನಿ ಮೋದಿ ಅವರ ಆಡಳಿತ ದೇಶಕ್ಕೆ ಸಿಕ್ಕ ನಂತರ ದೇಶದ ಅಭಿವೃದ್ದಿ ಅಭೂತಪೂರ್ವವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಹಿಂದೆಂದೂ ಆಗದಷ್ಟು ಅಭಿವೃದ್ದಿ ಕಾರ್ಯಗಳು ನಡೆದಿವೆ.ಇದಕ್ಕೆಲ್ಲ ಪ್ರಧಾನಿ ಮೋದಿ ಅವರೇ ಕಾರಣ. 1 ಲಕ್ಷ ಕೋಟಿಗೂ ಅಧಿಕ ಅನುಧಾನ ವಿಜಯಪುರ ಜಿಲ್ಲೆಯ ಅಭಿವೃದ್ದಿಗೆ ನೀಡಿದ್ದಾರೆ ಎಂದು ಹೇಳಿದರು.