ಮಾಸ್ತಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿ ಗೋಷ್ಠಿ

ಮಾಲೂರು

ಮಾಸ್ತಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿ ಗೋಷ್ಠಿ

ಮಾಲೂರು: ವಿಧಾನ ಸಭಾ ಚುನಾವಣೆಯಲ್ಲಿ ಸೋತು ಹಶಾಷಯರಾಗಿರುವ ಹೂಡಿ ವಿಜಯಕುಮಾರ್ ರವರು ಶಾಸಕರು ಮತ್ತು ಕಾಂಗ್ರೇಸ್ ಕಾರ್ಯಕರ್ತರ ಬಗ್ಗೆ ಹಗುರವಾಗಿ ಮಾತನಾಡಲು ಎಷ್ಟರ ಮಟ್ಟಿಗೆ ನೈತಿಕತೆ ಇದೆ ಎಂಬುದನ್ನು ಮೊದಲು ತಿಳಿದು ಕೊಳ್ಳ ಬೇಕೆಂದು ಕಾಂಗ್ರೆಸ್‌ನ ಜಿಲ್ಲಾ ಅಧ್ಯಕ್ಷ ಸಿ. ಲಕ್ಷ್ಮೀನಾರಾಯಣ್ ಹೇಳಿದರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಲೂರು ಮತ್ತು ಮಾಸ್ತಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಕೇವಲ ಒಂದು ಗ್ರಾಮ ಪಂಚಾಯತಿ ಸದಸ್ಯನು ಆಗದ ಹೂಡಿ ವಿಜಯಕುಮಾರ್ 2023 ನೇ ವಿಧಾನಸಭಾ ಚುನಾವಣೆಯಲ್ಲಿ ಸ್ವಾಭಿಮಾನ ಪಕ್ಷ ದಿಂದ ತಾಲ್ಲೂಕಿ ನಲ್ಲಿ ಸ್ಪರ್ಧೆ ಮಾಡಿ ಸೋತು ಹತಾಶಯರಾಗಿದ್ದಾರೆ ಇತ್ತೀಚೆಗೆ ತಮ್ಮ ನಿವಾಸದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತಾನಾಡಿ ಜನಪ್ರಿಯ ಶಾಸಕ ಕೆ.ವೈ.ನಂಜೇಗೌಡರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ಹಗುರವಾಗಿ ಮಾತನಾಡುವುದು ಅವರ ವ್ಯಕ್ತಿತ್ವಕ್ಕೆ ಗೌರವ ತರುವುದಲ್ಲ. ಶಾಸಕರು ಯಾಕೆ ರಾಜೀನಾಮೆ ನೀಡಬೇಕು ಮತ್ತು ಅವರ ಕಾರ್ಯಕರ್ತರು ಯಾಕೆ ಪ್ರಮಾಣ ಮಾಡಬೇಕು.ಶಾಸಕರ ಏಳಿಗೆ ಯನ್ನು ಸಹಿಸದ ವಿರೋಧ ಪಕ್ಷದ ಕೆಲವರು ರಾಜಕೀಯ ಮತ್ತು ಕಾಂಗ್ರೇಸ್ ಪಕ್ಷದ ವಿರೋಧಿಗಳು ವೈಯಕ್ತಿಕ ದ್ವೇಷದಿಂದ ತನಿಖಾ ಸಂಸ್ಥೆ ಗೆ ದೂರು ನೀಡಿರಬಹುದು. ತನಿಖಾ ಸಂಸ್ಥೆಯವರು ತನಿಖೆ ನಡೆಸಲು ಬಂದಿದ್ದು ಶಾಸಕರು ತನಿಖೆಗೆ ಬಂದ ಅಧಿಕಾರಿಗಳಿಗೆ ಸಹಕಾರ ನೀಡಿದ್ದಾರೆ. ದರಖಾಸ್ತು ಸಮಿತಿಯಲ್ಲಿ ಅವ್ಯವಹಾರ ನಡೆದಿದೆ ಎಂಬoತೆ ಕೆಲವು ತಿಂಗಳುಗಳ ಹಿಂದೆಯೇ ಕೆಲವರ ಆರೋಪ ಬಂತು ಆ ವಿಚಾರ ಕೋರ್ಟಿನಲ್ಲಿ ನಡೆಯುತ್ತಿದೆ ಅದರ ವಿಚಾರ ಈಗೇಕೆ ಕೋಚಿಮುಲ್ ನಲ್ಲಿದ್ದ ಖಾಲಿ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆಯೋ ಅಥವಾ ನಡೆದಿಲ್ಲವೊ ಎಂಬುದು ಅಧಿಕಾರಿಗಳ ತನಿಖೆ ಹಂತದಲ್ಲಿದೆ ಹೂಡಿ ವಿಜಿ ಕುಮಾರ್ ರವರೆ ನೀವ್ಯಾಕೆ ಸುಮ್ಮನೆ ಹತಾಶಯರಾಗಿ ಇಲ್ಲಸಲ್ಲದ ಹೇಳಿಕೆಗಳನ್ನುನೀಡಿ ಶಾಸಕರು ಮತ್ತು ಕಾಂಗ್ರೇಸ್ ಕಾರ್ಯಕರ್ತರ ಮೇಲೆ ದೋಷ ರೋಪಗಳನ್ನು ಮಾಡುತ್ತೀರಿ ನೀವು ನಮ್ಮ ಶಾಸಕರು ಮತ್ತು ಕಾರ್ಯಕರ್ತರ ಬಗ್ಗೆ ಮಾತಾಡುವುದನ್ನು ಇಲ್ಲಿಗೆ ನಿಲ್ಲಿಸಿ ಇಲ್ಲದಿದ್ದರೆ ನಾವು ಸಹ ವೈಯಕ್ತಿಕವಾಗಿ ಮಾತಾನಾಡ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಎಂ ಜೆ ಮಧುಸೂದನ್, ಹೆಚ್ ಎಂ ವಿಜಯನರಸಿಂಹ, ಕೆಪಿಸಿಸಿ ಸದಸ್ಯರಾದ ಅಂಜನಿ ಸೋಮಣ್ಣ, ಪ್ರದೀಪ್ ರೆಡ್ಡಿ ಇತರರುಉದ್ದೇಶಿ ಮಾತನಾಡಿದರು. ಸಂದರ್ಭದಲ್ಲಿ ಮುಖoಡರಾದ ಎಸ್ಸಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೈಲಾಂಡಹಳ್ಳಿ ನಾರಾಯಣಸ್ವಾಮಿ, ಅಶ್ವಥರೆಡ್ಡಿ ಎಂ, ಶ್ರೀನಿವಾಸ್ ,ಅಂಜಿನಪ್ಪ, ಈಶ್ವರ್, ಹೆಚ್. ಹನುಮಂತಪ್ಪ, ವಕೀಲ ರಮೇಶ್,ಸತೀಶ್ ಕುಮಾರ್ , ವೆಂಕಟಸ್ವಾಮಿ,ಮಾವೆ ಪ್ರಕಾಶ್, ತಿಮ್ಮೇಗೌಡ, ರಾಮಮೂರ್ತಿ, ಎಮ್ ಎಲ್ ಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.