ನಮ್ಮ ಸಂವಿಧಾನ

ನಮ್ಮ ಸಂವಿಧಾನ

ನಮ್ಮ ಸಂವಿಧಾನ

ರಾಷ್ಟ್ರೀಯ ಹಬ್ಬಗಳೆಂದರೆ ಹಾಗೆ ! ಈ ಪುಣ್ಯ ನೆಲದಲ್ಲಿ ಜನಿಸಿದ ಪ್ರತಿಜೀವವು ಆತ್ಮಾಭಿಮಾನ ಹಾಗೂ ಹೆಮ್ಮೆ, ಗೌರವಾದರಗಳೊಂದಿಗೆ ಪಾಲ್ಗೊಂಡು ಈ ಹಬ್ಬಗಳ ಆಚರಣೆಯನ್ನು ಮಾಡುತ್ತಾರೆ. ಪ್ರತಿಯೊಬ್ಬರ ಧಮನಿಯಲ್ಲಿ ಉಚಿತ ಘೋಷವಾಕ್ಯಗಳ ಡಿಮ ಡಿಮವು ಮೊಳಗುವುದು. ದೇಶದ ನಿಷ್ಠ ಭಕ್ತರಿಗೆ ಇದೊಂದು ವಿಜಯೋತ್ಸವದ ಸಂಭ್ರಮ ಸಡಗರ ಗಣರಾಜ್ಯೋತ್ಸವವು ಭಾರತದಲ್ಲಿ ವಿಶೇಷ ದಿನವಾಗಿದ್ದು ಇದು ಪ್ರಪಂಚದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವದ ಆರಂಭವನ್ನು ಗುರುತಿಸುವ ಪ್ರತಿಯೊಂದು ಕಥೆಯ ಕಥೆಯಾಗಿದೆ. ಭಾರತವು ಸ್ವತಂತ್ರವಾಗುವ ಮೊದಲು ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಅನೇಕ ರಾಜವಂಶಗಳು ರಾಜಕೀಯ ಮುನ್ನಾಳುಗಳ ಶಾಂತ ಹಾಗೂ ತೀವ್ರತರದ ಹೋರಾಟದ ಫಲವಾಗಿ ಆಗಸ್ಟ್ 15   1947 ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಭಾರತದ ಸ್ವಾತಂತ್ರ್ಯ ಪಯಣವು ಅಷ್ಟೇನು ಸುಲಭ ವಾಗಿರಲಿಲ್ಲ ಸಮಾಜದ ಎಲ್ಲಾ ವರ್ಗಗಳ ಜನರು ಒಟ್ಟಾಗಿ ಶಾಂತಿಯುತವಾಗಿ ಪ್ರತಿಭಟಿಸಲು ಮತ್ತು ತಮ್ಮನ್ನು ತಾವು ಆಳಲು ಬಯಸುತ್ತಾರೆ ಎಂದು ಜಗತ್ತಿಗೆ ತೋರಿಸಿದರು.ಅನೇಕ ತ್ಯಾಗ ಮತ್ತು ಹೋರಾಟಗಳ ನಂತರ ಭಾರತವು ಅಂತಿಮವಾಗಿ ಸ್ವಾತಂತ್ರ್ಯ ದೇಶವಾಯಿತು ಸ್ವತಂತ್ರಪಡೆದ ನಂತರ ದೇಶಕ್ಕೆ ನಿಯಮಗಳ ಒಂದು "ಸೆಟ್"ಮುಖ್ಯ ಎಂದು ನಾಯಕರು ತಿಳಿದಿದ್ದರು. ಸಂವಿಧಾನ ಎಂದು ಕರೆಯುವ ಈ ನಿಯಮಗಳನ್ನು ರೂಪಿಸುವಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪಾತ್ರ ದೊಡ್ಡದು.ಸಂವಿಧಾನವು ದೇಶವನ್ನು ಹೇಗೆ ನಡೆಸಬೇಕು ಎಂಬುದನ್ನು ತಿಳಿಸುವ ಮಾರ್ಗದರ್ಶಿಯಾಗಿದೆ. ಇದು ನ್ಯಾಯೋಚಿತ,ಸ್ವಾತಂತ್ರ್ಯ, ಸಮಾನತೆ ಮತ್ತು ಒಗ್ಗಟ್ಟಿನಂತಹ ವಿಷಯಗಳ ಬಗ್ಗೆ ಮಾತನಾಡುತ್ತದೆ. ಎಲ್ಲರಿಗೂ ನಿಯಮಗಳು ನ್ಯಾಯಯುತವಾಗಿ ಇರಬೇಕು ಎಂದು ಹೇಳುವ ಸಂವಿಧಾನವನ್ನು ದೊಡ್ಡ ಪುಸ್ತಕವೆಂದು ಕಲ್ಪಿಸಿಕೊಳ್ಳಿ ಅದು ಪ್ರತಿಯೊಬ್ಬರ ದಯೆಯಿಂದ ನಡೆಸಿಕೊಳ್ಳುವುದು ಖಾತ್ರಿಪಡಿಸುತ್ತದೆ. ಮತ್ತು ಅದೇ ಅವಕಾಶಗಳನ್ನು ಹೊಂದಿದೆ. ಜನವರಿ 26- 1950 ರಂದು ನಾಯಕರ ಅಧಿಕೃತವಾಗಿ ಸಂವಿಧಾನವನ್ನು ಒಪ್ಪಿಕೊಂಡರು. 1929 ಜನವರಿ 26ರ ಅಲ್ಲಿಯೇ ಅದೇ ದಿನ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸಂಪೂರ್ಣ ಸ್ವಾತಂತ್ರವನ್ನು ಬಯಸುವದಾಗಿ ಘೋಷಿದ್ದರಿಂದ ಈ ದಿನಾಂಕವನ್ನು ಆಯ್ಕೆ ಮಾಡಲಾಗಿದೆ. ಆದ್ದರಿಂದ ಜನವರಿ 26 ನಮ್ಮ ಗಣರಾಜ್ಯ ದಿನವಾಯಿತು ಗಣರಾಜ್ಯೋತ್ಸವದ ಮಹತ್ವವನ್ನ ಅರಿಯಬೇಕಾದರೆ ನಮ್ಮ ಗಣರಾಜ್ಯವು ನ್ಯಾಯಯುತವಾಗಿದ್ದು ದೇಶದ ಎಲ್ಲರಿಗೂ ಒಂದೇ ರೀತಿಯ ಹಕ್ಕುಗಳಿವೆ ಎಂಬುದನ್ನು ಇದು ನಮಗೆ ನೆನಪಿಸಿದೆ. ಜಾತಿಭೇದ, ಆರ್ಥಿಕಭೇದಗಳನ್ನು ಕಡೆಗಣಿಸಿ ಪ್ರಜಾಪ್ರಭುತ್ವವು ಸಮಾನ ಅವಕಾಶವನ್ನು ಒದಗಿಸುವುದಾಗಿದೆ. ಅಲ್ಲದೆ "ಸುಖಿರಾಜ್ಯ" ಸ್ಥಾಪನೆಯೂ ಕೂಡ ಇದರ ಮೂಲ ಮಂತ್ರವಾಗಿದೆ. ಇನ್ನು ನಮ್ಮ ಸಂವಿಧಾನವು ಪ್ರತಿಯೊಬ್ಬರಿಗೂ ಮೂಲಭೂತವಾಗಿ ಆರು ಹಕ್ಕುಗಳು ಹಾಗೂ ಹನ್ನೊಂದು ಕರ್ತವ್ಯಗಳನ್ನು ನೀಡುವುದರ ಮೂಲಕ ತನ್ನ ಪಾರುಪತ್ಯವನ್ನು ನಡೆಸುತ್ತಲಿದೆ. ಸಮರ್ಪಕವಾಗಿ ಉಚಿತವಾಗಿ ಹಕ್ಕುಗಳನ್ನು ಅನುಭವಿಸುವುದರ ಮೂಲಕ ದೇಶದ ನಿಷ್ಠೆಯನ್ನು ಮರೆಯಬೇಕಾಗಿದೆ.ಹಕ್ಕುಗಳಿಗೆ ಧಕ್ಕೆ ಉಂಟಾಗದಂತೆ ಕಾಪಾಡುವುದು ಈ ದೇಶವಾಸಿಯ ಮೂಲ ಕರ್ತವ್ಯವಾಗಿದೆ ಇನ್ನು ನಮಗೆ ವಹಿಸಿರುವ ಜವಾಬ್ದಾರಿ( ಕರ್ತವ್ಯ)ಗಳನ್ನು ಮನನ ಮಾಡಿದೆ. ನಮ್ಮ ದೇಶದ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡಲು ನಾವು ಕಂಕಣಭದ್ಧರಾಗಿ ಉತ್ತಮ ಆಲೋಚನೆ ಹಾಗೂ ಕಾರ್ಯಗಳಿಂದ ದೇಶದ ಉನ್ನತಿಗೆ ನಾವೆಲ್ಲರೂ ಕಾರಣಿಭೂತರಾಗಬೇಕಾಗಿದೆ. ಹಾಗಿದ್ದಾಗ ! ಈ ಒಂದು ಆಚರಣೆಗೆ  ಕಳೆಗಟ್ಟಿದಂತಾಗುವುದು . ಜಗತ್ತಿನಲ್ಲಿ ಶ್ರೇಷ್ಠ ದೇಶವನ್ನಾಗಿಸಿ ಆತ್ಮ ಗೌರವಗಳೊಂದಿಗೆ ಇಲ್ಲಿಯ ಪ್ರಜೆಗಳು ಜೀವನ ನಡೆಸಬೇಕಾಗಿದೆ ದೇಶಪ್ರೇಮ ದೇಶಭಕ್ತಿ ದೇಶನಿಷ್ಟ ನಮ್ಮೆಲ್ಲರ ಮೂಲ ಮಂತ್ರವಾಗಿ, ಧ್ವಜ ಹಿಡಿಯುವ ಪ್ರತಿ ಕೈಗಳು ನಿಸ್ವಾರ್ಥತೆಯನ್ನು ಮೆರೆದುಮಾಡುವ ಪ್ರತಿಕಾರ್ಯವು ಈ ಸಮಾಜವನ್ನು ಏಳ್ಗೆಗೊಳಿಸುವುದಾದರೇ,ಅದುವೇ!ನಾವು ನಮ್ಮ ಸಂವಿಧಾನಕ್ಕೆ ಕೊಡುವ ಗೌರವವಾಗಿದೆ.
 ದೇಶದ ಪ್ರತಿ ಸಂಪತ್ತುಗಳ ರಕ್ಷಣೆ ಅವಶ್ಯಕ ಕ್ಷೇತ್ರಗಳಲ್ಲಿ ಯುವ ಪಡೆಯು ಆಸಕ್ತಿ ಹೊಂದಿ ಅಭಿವೃದ್ಧಿ ಸಾಧಿಸಬೇಕು ಅಲ್ಲದೇ ನಮ್ಮ ಪರಂಪರೆ,ಸಂಸ್ಕೃತಿಕತೆ,ಸಂಪ್ರದಾಯ ಧಾರ್ಮಿಕ ಸಹಿಷ್ಣತೆ ಹಾಗೂ ಸೌಹಾರ್ದಯುತ ಬಾಳನ್ನು ಮೈಗೂಡಿಸಿಕೊಂಡು ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಹೊಂದಿ,ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂದು ಏಕತೆಯನ್ನು ಮೆರೆಯುವುದಾದರೆ ಈ ಹಬ್ಬಗಳಿಗೆ ಒಂದು ಬೆಲೆ ಬಂದಂತಾಗುವುದು .
ಜೈ ಹಿಂದ್

ಅಶ್ವಿನಿ ಅಂಗಡಿ
ಬದಾಮಿ...