"ರೈತರಿಗೆ ಉತ್ತಮ ಸಂದೇಶ ನೀಡುವ ಲೈನಮಾನ್ಯ ಪ್ರಕಾಶ"

"ರೈತರಿಗೆ ಉತ್ತಮ ಸಂದೇಶ ನೀಡುವ ಲೈನಮಾನ್ಯ ಪ್ರಕಾಶ"

"ರೈತರಿಗೆ ಉತ್ತಮ ಸಂದೇಶ ನೀಡುವ ಲೈನಮಾನ್ಯ ಪ್ರಕಾಶ"

ಸಿಂದಗಿ: ತಾಲೂಕಿನ ಬಂದಾಳ ಪಂಪ  ಸಟ್ ಹೊಂದಿರುವ ಚಿಕ್ಕಸಿಂದಗಿ ಹಾಗೂ ಬಂದಾಳ ಗ್ರಾಮದ ತಮ್ಮ ತೋಟಗಳಿಗೆ ನೀರು ಉಣಿಸಲು ಸರಿಯಾದ ಸಮಯದಲ್ಲಿ ವಿದ್ಯುತ್ ನೀಡುವ ಮೂಲಕ ತಮ್ಮದೇ ಮೊಬೈಲದಲ್ಲಿ ರೈತರ ಗುಂಪು ಮಾಡಿ ಪ್ರಕಾಶ  ಚಂದ್ರಮ ಸಿಂಗೆ  ತಮ್ಮದು  ಧ್ವನಿಯ ಮೂಲಕ ರೈತರಿಗೆ ಸಮಯ ತಕ್ಕಂತೆ ಉತ್ತಮ ಸಂದೇಶ ನೀಡುವ ಕ್ರಿಯ ಶೀಲ ಸಿಂದಗಿ ಘಟಕದ ಹೆಸ್ಕಂ ಇಲಾಖೆಯ ಲೈನಮಾನ್ಯರಾದ ಪ್ರಕಾಶ ಸಿಂಗೆ ಅವರು ರೈತರಿಗೆ ಸಮಯ ತಕ್ಕಂತೆ ಉತ್ತಮ ಸಂದೇಶ ನೀಡುವ ಮೂಲಕ ಆ ಭಾಗದ ರೈತರಿಂದ ಉತ್ತಮ ಲೈನಮಾನ್ಯ ಎಂದು ಬಿರುದು ಪ್ರಶಂಸೆ  ಪಡದಿರುವ ಪ್ರಕಾಶ ಚಂದ್ರಾಮ ಸಿಂಗೆ ತಮ್ಮ ಸಂದೇಶ ಮೂಲಕ ರೈತರಿಗೆ ತಮ್ಮಗೆ ಈ ಸಮಯದಲ್ಲಿ ವಿದ್ಯತ್  ನೀಡಲಾಗುತ್ತದೆ. ಇಲ್ಲವಾದರೆ ಸ್ವಲ್ಪ ಕಾಯಬೇಕು ಎಂದು ನಿರಂತರವಾಗಿ ಸಂದೇಶ ನೀಡುವ ಲೈನಮಾನ್ಯ ಪ್ರಕಾಶ ಸಿಂಗೆ ಈ ಭಾಗಕ್ಕೆ ಬಂದ ಮೇಲೆ ನಮ್ಮಗೆ ವಿದ್ಯುತದ ಸಮಸ್ಯೆ ಆಗಿಲ್ಲ ಎಂದು ರೈತರು ಮಾತನಾಡುತ್ತಾರೆ. ಕಾರಣ ನಮ್ಮ ಭಾಗದಲ್ಲಿ ಕ್ರಿಯ ಶೀಲ ಲೈನಮಾನ್ಯ ಪ್ರಕಾಶ ಸಿಂಗೆ ಉತ್ತಮ ಸಂದೇಶ ನೀಡುವದರಿಂದ ರೈತರು ವಿದ್ಯುತ್  ಯಾವಗು ಬರುತ್ತವೆ ಎಂದು ಕಾಯುವದು ತಪ್ಪಿದೆ ಎಂದು ರೈತರ ನುಡಿಯಾಗಿದೆ.ಪ್ರಕಾಶ ಚಂದ್ರಮ ಸಿಂಗೆ ಅವರ ಮಾತಿನ ಸಂದೇಶ ಮೂಲಕ ಜನರಿಗೆ ಬೇಕು ವಿದ್ಯುತ್‌ ಉಳಿತಾಯದ ಸೂತ್ರ ಅಗತ್ಯವಿಲ್ಲದೆ ವಿದ್ಯುತ್‌ ಬಳಕೆ ಮಾಡುವುದಿಲ್ಲ ಎಂಬುದು ಇಂದು ಪ್ರತಿಯೊಬ್ಬರೂ ಪಾಲಿಸಲೇಬೇಕಾದ ಬೀಜಮಂತ್ರವಾಗಬೇಕು ಎಂಬುವದು ಪ್ರಕಾಶ ಸಿಂಗೆ ಅವರ ಕಳಕಳಿಯ ವಿನಂತಿಯಾಗಿದೆ.

  ನಮ್ಮ ಗೆಳಯ ಪ್ರಕಾಶ ಚಂದ್ರಾಮ ಸಿಂಗೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ತವನಂದಿ ಗ್ರಾಮದಲ್ಲಿ 8ವರ್ಷ ಲೈನಮಾನ್ಯರಾಗಿ  ತಮ್ಮ ಉತ್ತಮ ಸೇವೆ ಮಾಡಿ ಸಿಂದಗಿ ತಾಲ್ಲೂಕನ ಉಪ ವಿಭಾಗದಲ್ಲಿ ಗ್ರಾಮೀಣ ಭಾಗದಲ್ಲಿ ತಮ್ಮ ಸೇವೆ ಆರಂಬಿಸಿರುವ ಪ್ರಕಾಶ ಸಿಂಗೆ ಅವರು ತಮ್ಮ ಭಾಗದ ರೈತರ ಮೊಬೈಲ ನಂಬರ ಪಡೆದು ಕೊಂಡು ಅವರಿಗೆ ವಿದ್ಯುತ್  ಬರುವದು ಹಾಗೂ ನಿಲ್ಲುವ ಸಂದೇಶ ನೀಡುವ ಮೂಲಕ ರೈತರಿಗೆ ತುಂಬಾ ಅನುಕುಲ ಮಾಡಿರುವ  ಪ್ರಕಾಶ ಅವರ ಸೇವೆ ನಮ್ಮ ಇಲಾಖೆಯಲ್ಲಿ ಹೆಸರು ಮಾಡಿರುವ ಪ್ರಕಾಶ ಸಿಂಗೆ  ಪ್ರಕಾರವಾಗಿ ನಾವು ನಮ್ಮ ಭಾಗದ ರೈತರ್ ದೂರವಾಣಿ ಸಂಗ್ರಮಾಡಿ ರೈತರಿಗೆ ನಾವು ಸಂದೇಶ ನೀಡುತ್ತವೆ ಎಂದು ಹಿರಿಯ ಲೈನಮ್ಯಾನರಾಗಿ ಸೇವೆ ಮಾಡಲು ಮುಂದಾಗಿರುವದು ಸಂತೋಷದ ವಿಷಯವಾಗಿದೆ ಎಂದು ಹಿರಿಯ ಲೈನಮ್ಯಾನ್ ಬಿಲಾಲ್ ಮಸ್ತ್ರಿಯವರು ನುಡಿಯಾಗಿದೆ. ನಮ್ಮ ಭಾಗದಲ್ಲಿ ಕ್ರಿಯ ಶೀಲ ಚತುರ ಮಾತುಗಾರ ಸಂಗೀತಗಾರ ಪ್ರಕಾಶ ಸಿಂಗೆ ನಮ್ಮ ಸಿಂದಗಿ ಹೆಸ್ಕಂ ಇಲಾಖೆಯಲ್ಲಿ ಉತ್ತಮ ಲೈನಮ್ಯಾನ್ ರಾಗಿ ಸೇವೆ ಮಾಡುತ್ತಾ ರೈತರಿಗೆ ಸಮಯ ತಕ್ಕಂತೆ ಸಂದೇಶ ಹಾಗೂ ವಿದುತ್ಯ ಸಮಸ್ಯ ಪರಿಹಾರ ಮಾಡಲು ರೈತರ ಮೊಬೈಲ ನಂಬರ ಸಂಗ್ರಹ ಮಾಡಿ ಒಂದು ಗುಂಪು ರಚನೆ ಮಾಡಿ ಸಂದೇಶ ನೀಡುವದು ನೋಡಿದರೆ ಪ್ರಕಾಶ ಅವರ ಸಾಧನೆ ದೊಡ್ಡದು ಎಂದು ತಿಳಿಸಲು ಸಂತೋಷವಾಗುತ್ತದೆ. ಗ್ರಾಮೀಣ ವಲಯದ ಹೆಸ್ಕಂ ಅಧಿಕಾರಿ ಬಸವರಾಜ ಅಗಸರ ನುಡಿಯಾಗಿದೆ.


ಪ್ರಕಾಶ ಸಿಂಗೆ ಲೈನಮ್ಯಾನರು ನಮ್ಮ ನಂಬರ ಸಂಗ್ರಹ ಮಾಡಿ ನಮ್ಮಗೆ ವಿದುತ್ಯಯಾಗ ಬರುತ್ತವೆ ಹಾಗೂ ತೊಂದರಿ ಇದೆ ಸ್ವಲ್ಪ ಕಾಯಬೇಕು ಎಂದು ನಿರಂತರವಾಗಿ ಸಂದೇಶ ನೀಡುವದು ಉತ್ತಮ ಬೆಳೆವಣಿಗೆಯಾಗಿದೆ ಬಂದಾಳ ಗ್ರಾಮದ ಪ್ರಗತಿ ಪರ ರೈತ ಅಪ್ಪರಾಯಗೌಡ ಗುರಲಿಂಗಪ್ಪಗೌಡ ಬಿರಾದಾರ ಮಾತು. ಲೈನಮ್ಯಾನ ಪ್ರಕಾಶ ಸಿಂಗೆ ಅವರ ಕಳಕಳಿ ಮಾತು ಇನ್ನೂ ಬೇಸಿಗೆ ಕಾಲ ಬಂದಿಲ್ಲ. ಅದಕ್ಕಿಂತ ಮೊದಲೇ ಅನಿಯಮಿತ ವಿದ್ಯುತ್‌  ನೀಡುವದು ಸ್ವಲ್ಪ ಕಷ್ಠವಾಗುತ್ತದೆ ಅದು ಕೂಡ ಸರಕಾರ ಉಚಿತ ವಿದ್ಯುತ್‌ ಕೊಡುವುದು ನಡದಿದೆ ಕಾರಣ   ವಿದ್ಯುತ್‌ ಮಿತ ಬಳಕೆಯ ಸೂತ್ರವೊಂದನ್ನು ರಚಿಸುವ ಮೂಲಕ, ಲಭ್ಯವಿರುವ ವಿದ್ಯುತ್ತನ್ನು ಹೆಚ್ಚು ಬಳಸುವ ನೀತಿ ಸೂತ್ರವೊಂದು ಇಂದು ಅಗತ್ಯವಿದೆ.

ಜಲ ವಿದ್ಯುತ್ತನ್ನೇ ನಂಬಿದರೆ ಈ ವರ್ಷ ಮಳೆಯ ಕೊರತೆಯಿಂದ ಅದು ಲಭ್ಯವಾಗಲಾರದು. ಕೃಷಿಗೆ ಉಚಿತವಾಗಿ ವಿದ್ಯುತ್‌ ಪೂರೈಸಲಾಗುತ್ತಿದೆ. ಅನೇಕ ತೋಟಗಳಲ್ಲಿ ಅನಗತ್ಯವಾಗಿ ಹಗಲು, ರಾತ್ರಿ ಬಿಡದೆ ಪಂಪುಗಳು ಕೊಳವೆಬಾವಿಯ ನೀರನ್ನು ಉಗುಳುತ್ತಲೇ ಇರುತ್ತವೆ. ತೋಟದಲ್ಲಿ ತುಂಬಿದ ನೀರು ಮತ್ತೆ ಕೆರೆಗೋ ಚರಂಡಿಗೋ ಹರಿದುಹೋದರೂ ಪಂಪುಗಳು ಸ್ತಬ್ಧವಾಗುವುದಿಲ್ಲ. ಕೃಷಿಗೆ ಬಳಸುವ ವಿದ್ಯುತ್ತಿಗೆ ಕಾಲಮಿತಿಯನ್ನು ಹೇರುವ ಮೂಲಕ ರೈತರು ಜವಾಬ್ದಾರಿಯುತವಾಗಿ ಅದರ ಸದುಪಯೋಗ ಮಾಡಲು ಸಲಹೆ ನೀಡುವುದು ಉಚಿತ ಎನಿಸುತ್ತದೆ. ಆದ್ದರಿಂದ ರೈತರು ವಿದ್ಯುತ್ ಬಳಿಕೆ ಕಡಿಮೆ ಮಾಡಬೇಕು .ನೀರು ಉಣಿಸುವ ಪದ್ದತಿ ಹನಿ ನೀರಾವರಿ ಬಳಿಸುವದರಿಂದ ವಿದ್ಯುತ್ ಹಾಗೂ ನೀರು ಉಳಿತಾಯ ಮಾಡಲು ಸಾಧ್ಯ ಎಂದು ಅವರ ಮಾತಿನಲ್ಲಿ ಸತ್ಯ ಇದೆ.


ವಿನಯಕುಮಾರ ಬಸವರಾಜ ಅಗಸರ  ಚಿಕ್ಕಸಿಂದಗಿ