ರಾಜ್ಯದ ಚರಿತ್ರೆ ಬರೆಯಲಿದೆ ಚಿತ್ರದುರ್ಗದ ಸಮಾವೇಶ-ಮಹಾಂತೇಶ ಕವಲಗಿ

ರಾಜ್ಯದ ಚರಿತ್ರೆ ಬರೆಯಲಿದೆ ಚಿತ್ರದುರ್ಗದ ಸಮಾವೇಶ-ಮಹಾಂತೇಶ ಕವಲಗಿ

ರಾಜ್ಯದ ಚರಿತ್ರೆ ಬರೆಯಲಿದೆ ಚಿತ್ರದುರ್ಗದ ಸಮಾವೇಶ-ಮಹಾಂತೇಶ ಕವಲಗಿ

ಜೇವರ್ಗಿ: ನಮ್ಮ ಭವ್ಯ ಭಾರತ ಸರ್ವ ಜನಾಂಗದ ಶಾಂತಿಯ ತೋಟದ ಸಂಪತ್ತು ಸಮನಾಗಿ ಹಂಚಿಕೆಯಾಗಿಲ್ಲ. ನಮ್ಮ ಹಕ್ಕೋತ್ತಾಯವನ್ನು ಪಡೆಯಲು ಶೋಷಿತರ ಜಾಗೃತಿ ಸಮಾವೇಶವು ಕರ್ನಾಟಕ ರಾಜ್ಯದ ಚರಿತ್ರೆ ಬರೆಯಲಿದೆ ಎಂದು ರಾಜ್ಯ ಸಂಚಾಲಕ ಮಹಾಂತೇಶ ಕವಲಗಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕವಲಗಿರವರು, ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ನೇತ್ರತ್ವದಲ್ಲಿ ಚಿತ್ರದುರ್ಗದಲ್ಲಿ ಇದೆ ಭಾನುವಾರದಂದು ನಡೆಯುತ್ತಿರುವ ಶೋಷಿತರ ಜಾಗೃತಿ ಸಮಾವೇಶವು,ನಮ್ಮ ಕರ್ನಾಟಕ ರಾಜ್ಯದ ಚರಿತ್ರೆಯನ್ನೆ ಬದಲಿಸುವ ಐತಿಹಾಸಿಕ ಕಾರ್ಯಕ್ರಮವಾದರು ಅಚ್ಚರಿಯಿಲ್ಲ ಎಂದು ಕವಲಗಿ ನುಡಿದರು. ಈ ಕಾರ್ಯಕ್ರಮದಲ್ಲಿ ಎಚ್ ಕಾಂತರಾಜು ವರದಿ ಜಾರಿಗಾಗಿ,ಕೇಂದ್ರ ಸರ್ಕಾರವು ಜಾತಿವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸಲು,ಇವಿಎಸ್ ಶೇಕಡಾ10% ಮೀಸಲಾತಿ ರದ್ದು ಸೇರಿದಂತೆ ಹಲವು ಬೇಡಿಕೆ ಹಕ್ಕೊತ್ತಾಯಗಳು ಮಂಡನೆಯಾಗಲಿದೆ ಎಂದು ಪ್ರಮುಖರು ಹೇಳಿದರು.ಹಾಗಾಗಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕೋರಿದರು. ಈ ಸಂದರ್ಭದಲ್ಲಿ ಬೈಲಪ್ಪ ನೆಲೋಗಿ, ಚಂದ್ರಶೇಖರ ಹರನಾಳ, ಮಹ್ಮದಷಾ ದರವಾಜಿ, ರಹೇಮಾನ ಪಟೇಲ್, ಸಾಯಬಣ್ಣ ಹೆಳವರ,ಮಲ್ಲೇಶಿ ಯಾದವ,ಭೀಮರಾಯ ನಗನೂರ, ಮಲ್ಲಿಕಾರ್ಜುನ ಕುರಳಗೇರಾ, ರವಿ ಕುರಳಗೇರಾ,ಚಂದ್ರಶೇಖರ ನೇರಡಗಿ, ರಾಜಶೇಖರ ಮುತ್ತಕೋಡ, ಮಹಾಂತೇಶ ದೋರೆ, ಗಿರೀಶ್ ತುಂಬಗಿ, ಭೀಮಾಶಂಕರ ಬಿಲ್ಲಾಡ, ಪರಮೇಶ್ವರ ಬಿರಾಳ, ಶ್ರೀಹರಿ ಕರಕಿಹಳ್ಳಿ, ನಾಗರಾಜ ಅಲಗೂರ, ಶಿವಶಂಕರ ಬಳಬಟ್ಟಿ ಸೇರಿದಂತೆ ಅನೇಕರು ಇದ್ದರು.