ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ.

ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ.

ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ.

ಇಂಡಿ:ಪಟ್ಟಣದ ಟಂ ಟಂ ಸಂಘದವರು ರೇಲ್ವೆ ಸ್ಟೇಷನದ ಕಡೆಗೆ ಹೋಗುವ ಟಂ ಟಂ ಗಳಿಗೆ ಬಸ್ ನಿಲ್ದಾಣದ ಹತ್ತಿರ ಪಾರ್ಕಿಂಗ್ ಅಳವಡಿಸ ಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣ ಮತ್ತು ಟಂ ಟಂ ಸಂಘಟನೆಯಿಂದ ಪ್ರತಿಭಟನೆ ನಡೆಸಿ ಮಿನಿ ವಿಧಾನ ಸೌಧಗೆ ತೆರಳಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಶಿವು ಬಡಿಗೇರ ಮಾತನಾಡಿ ಪಟ್ಟಣ ದಿಂದ ರೇಲ್ವೆ ಸ್ಟೇಷನ್ ಕ್ಕೆ ಹಗಲಿನಲ್ಲಿ ಒಂದು ತಾಸಿನಲ್ಲಿ ಕನಿಷ್ಠ ೧೫ ಟಂ ಟಂ ಹೋಗುತ್ತದೆ. ಅದಲ್ಲದೆ ಪ್ರತಿ ನಿತ್ಯ ಇಂಡಿ ರೇಲ್ವೆ ಸ್ಟೇಷನ ದಿಂದ ವಿಜಯಪುರ ಸೋಲಾಪುರ, ಬೆಂಗಳೂರ,ಮುಂಬಯಿ,ಹೈದ್ರಾಬಾದ, ಮಂತ್ರಾಲಯ ಕಡೆಗೆ ಹೋಗುವ ರೇಲ್ವೆ ಸಂಖ್ಯೆ ಹೆಚ್ಚಾಗಿದ್ದು ಬೇರೆ ಸ್ಥಳಗಳಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಅದಲ್ಲದೆ ಇಂಡಿ ರೇಲ್ವೆ ಸ್ಟೇಷನ್ ದಲ್ಲಿ ಜನ ವಸತಿಯೂ ಸಾಕಷ್ಟಿದೆ. ಸಧ್ಯ ನಿಲ್ಲುವ ಟಂ ಟಂ ಗಳಿಗೆ ಅಲ್ಲಿ ನಿಲ್ಲಿಸ ಬೇಡಿ ಎಂದು ಪೋಲಿಸರು ಬಹಳ ಕಿರಿ ಕಿರಿ ಮಾಡುತ್ತಾರೆ. ಹೀಗಾಗಿ ಬಿಎಸ್‌ಎನ್‌ಎಲ್ ಎದುರು ಗಡೆ ಅಥವಾ ಎಲ್ಲಿಯಾದರೂ ಖಾಲಿ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡ ಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಶಿವು ಕೋಳಿ, ಕಿರಣ ಇಂಗಳೆ, ಸುರೇಶ ಹಿರೇಮಠ, ಮಲ್ಲು ಮೇತ್ರಿ, ಶಶಿ ವಾಲಿಕಾರ, ನಬಿಲಾಲ ಬಾಗವಾನ, ಪ್ರದೀಪ ಪವಾರ, ಮಹೇಶ ಅಗಸರ, ಖಾಜಿಸಾಬ ಬಾಗವಾನ, ಈಸಾಬ ಎಕ್ಕೆವಾಲೆ, ಮುತ್ತು ಹೊಸಮನಿ, ಸಮೀರ ಪಟೇಲ, ರಾಕೇಶ ಜಾಧವ, ವಿಠ್ಠಲ ವಾಲಿಕಾರ , ವಾಶೀಮ ಅಷ್ಟೇಕರ ಮತ್ತಿತರಿದ್ದರು.