"ಡಿ.ಇ.ಸಿ ಮತ್ತು ಅಲ್ಬೆಂಡೆಜೋಲ ಮಾತ್ರೆ ವಿತರಣೆ"

"ಡಿ.ಇ.ಸಿ ಮತ್ತು ಅಲ್ಬೆಂಡೆಜೋಲ ಮಾತ್ರೆ ವಿತರಣೆ"

"ಡಿ.ಇ.ಸಿ ಮತ್ತು ಅಲ್ಬೆಂಡೆಜೋಲ ಮಾತ್ರೆ ವಿತರಣೆ"

ಸಿಂದಗಿ: ನಗರದ  ಬಸ್ ಡಿಪೋ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಆನೇಕಾಲು ರೋಗ ನಿಯಂತ್ರಣ ಕಾರ್ಯಕ್ರಮ ದ ಅಂಗವಾಗಿ ಡಿ.ಇ.ಸಿ ಮತ್ತು ಅಲ್ಬೆಂಡೆಜೋಲ್ ಮಾತ್ರೆ ನುಂಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು... ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಜನೇವರಿ 18 ರಿಂದ ಇಲ್ಲಿಯವರೆಗೆ ಆಯ್ದ ಪ್ರಾ ಆ ಕೇಂದ್ರಗಳಾದ ಚಾಂದಕವಟೆ,ಬಳಗಾನೂರ, ಆಲಮೇಲ, ಮಲಘಾಣ,ಮೋರಟಗಿ ಹಾಗೂ ಸಿಂದಗಿ ನಗರದ ವ್ಯಾಪ್ತಿಯ ಅಂಗನವಾಡಿ ಹಾಗೂ ಶಾಲೆಗಳಲ್ಲಿ ಮಕ್ಕಳಿಗೆ ಮಾತ್ರೆ ನುಂಗಿಸಲಾಗಿದೆ ಅಲ್ಲದೆ ಫೆಬ್ರುವರಿ 10 ರಿಂದ 28 ರವರೆಗೆ ಮನೆ ಮನೆ ಭೇಟಿ ಮಾಡಿ ಮನೆಯಲ್ಲಿರುವ ಅರ್ಹ ಕುಟುಂಬದ ಸದಸ್ಯರಿಗೆ ಮಾತ್ರೆ ನುಂಗಿಸಲಾಗುತ್ತಿದ್ದು ದಯವಿಟ್ಟು ಮಾತ್ರೆ ಸೇವಿಸಿ ಆನೇಕಾಲು ರೋಗ ನಿಯಂತ್ರಿಸುವಲ್ಲಿ ಸಮುದಾಯ ಸಹಕರಿಸುವಿರೆಂದು ಮನವಿ ಮಾಡಿದರು..ಮಾತ್ರೆಗಳನ್ನು ಆಶಾ,ಅಂಗನವಾಡಿ ಹಾಗೂ ಆರೋಗ್ಯ ಸಿಬ್ಬಂದಿ ಮನೆ ಭೇಟಿ ಮಾಡಿ ನುಂಗುಸುವುರು..ಗರ್ಭಿಣಿ, ಬಾಣಂತಿ,ದೀರ್ಘಕಾಲದ ರೋಗದಿಂದ ಬಳುಲುತ್ತಿರುವುರು ಸೇವಿಸಬಾರದು,ಖಾಲಿ ಹೊಟ್ಟೆಯಲ್ಲಿ ಮಾತ್ರೆ ಸೇವನೆ ಮಾಡಬಾರದು ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ಮಲೇರಿಯಾ ಮೇಲ್ವಿಚಾರಕ ಪ್ರಭು ಜಂಗಿನಮಠ,ಆರೋಗ್ಯ ನಿರೀಕ್ಷಣಾಧಿಕಾರಿ ವಿರೇಂದ್ರ ಪವಾಡೆ ,ಮಹಾಲಿಂಗ ಪಕೀರಪೂರ, ಉಪಸ್ಥಿತಿರಿದ್ದರು.