ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ರಾಮರೆಡ್ಡಿ ಆಯ್ಕೆ

ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ರಾಮರೆಡ್ಡಿ ಆಯ್ಕೆ

ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ರಾಮರೆಡ್ಡಿ ಆಯ್ಕೆ

ಬಾಗೇಪಲ್ಲಿ: ತಾಲೂಕು ಕಸಬಾ  ಹೋಬಳಿಯ ಏಟಿಗಡ್ಡಪಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ದ ನೂತನ ಅಧ್ಯಕ್ಷರಾಗಿ  ಸ್ಪರ್ಧಿಸಿದ್ದ ಸೂರಪ್ಪ ರೆಡ್ಡಿ ಅವರು ಹಾಗೂ ಉಪಾಧ್ಯಕ್ಷರಾಗಿ ರಾಮರೆಡ್ಡಿ.ಜಿ.ಎಸ್ ಜಯಗಳಿಸಿರುವುದ್ದಾರೆಂದು ಚುನಾವಣಾ ಅಧಿಕಾರಿ ಪ್ರೇಮ್ ಕುಮಾರ್ ಅವರು ತಿಳಿಸಿದರು. ಬುಧವಾರ ನಡೆದ ಚುನಾವಣೆಯಲ್ಲಿ ಒಟ್ಟು 11 ನಿರ್ದೇಶಕ ರಿರುವ ಹಾಲು ಉತ್ಪಾದಕರ ಸಂಘದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸೂರಪ್ಪ ರೆಡ್ಡಿ,ಬಿ,ಶ್ರೀನಿವಾಸ ರೆಡ್ಡಿ. ಬಿ.ಟಿ. ಉಪಾಧ್ಯಕ್ಷ ಸ್ಥಾನಕ್ಕೆ ರಾಮರೆಡ್ಡಿ ಒಬ್ಬರೇ ನಾಮ ಪತ್ರವನ್ನು ಸಲ್ಲಿಸಿದ್ದರು. ಚುನಾವಣಾಧಿಕರಿ ಪ್ರಮ್ ಕುಮಾರ್ ನಾಮಪತ್ರಗಳನ್ನು ಪರಿಶೀಲಿಸಿ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಗೌಪ್ಯ ಮತದಾನದಿಂದ ಶ್ರೀನಿವಾಸ ರೆಡ್ಡಿ.ಬಿ.ಟಿ 03 ಮತಗಳು,ಸೂರಪ್ಪ ರೆಡ್ಡಿ. ಬಿ. 08 ಮತಗಳಿಂದ ಜಯಗಳಿಸಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಪಪತ್ರ ಸಲ್ಲಿಸಿದ್ದು ರಾಮರೆಡ್ಡಿ .ಜಿ.ಎಸ್ ಅವಿರೋಧ ಆಯ್ಕೆ ಆಗಿರುವುದನ್ನು ಘೋಷಿಸಿದರು. ಅಧ್ಯಕ್ಷ ಸೂರಪ್ಪ ರೆಡ್ಡಿ. ಬಿ. ಅಧಿಕಾರ ಸ್ವೀಕರಿಸಿ ಮಾತನಾಡಿ, ಹಾಲು ಉತ್ಪಾದಕರಿಗೆ ಸಹಕಾರ ಸಂಘದಿಂದ ಬರುವ ಎಲ್ಲಾ ಸವಲತ್ತು ಮತ್ತು ಸಾಲ ಸೌಲಭ್ಯಗಳನ್ನು ನೇರವಾಗಿ ಹಾಲು ಉತ್ಪಾದಕರಿಗೆ ತಲುಪಿಸುವ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು. ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಿಜೇತ  ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ  ಕನಿರ್ದೇಶಕರಾದ ಶಿವರಾಮ ರೆಡ್ಡಿ, ಶ್ರೀರಾಮ ರೆಡ್ಡಿ, ಲಕ್ಷ್ಮೀನಾರಾಯಣ ರೆಡ್ಡಿ. ಟಿ,ಶ್ರೀನಿವಾಸ ರೆಡ್ಡಿ ಬಿ.ಟಿ.,ಶ್ರೀರಾಮಲು,ನರಸಿಂಹ ಮೂರ್ತಿ, ನರಸಿಂಹ ರೆಡ್ಡಿ.ಬಿ,ವರಲಕ್ಷ್ಮೀ,ರತ್ನಮ್ಮ  ಕಾರ್ಯದರ್ಶಿ ಆದಿನಾರಾಯಣ ರೆಡ್ಡಿ, ಹಾಲು ತಾಂತ್ರಿಕ ಸಹಾಯಕ ನಾಗ ರೆಡ್ಡಿ, ಸಹಾಯಕ ಚಂದನ್ ಹಾಗೂ ಸಾರ್ವಜನಿಕರು ಹಾಜರಿದ್ದರು.