ಕೆಟ್ಟು ಹೋಗಿರುವ ನೀರಿನ ಘಟಕ ಯಂತ್ರಗಳನ್ನು ರೆಡಿ ಮಾಡಿಸಿ

ಕೆಟ್ಟು ಹೋಗಿರುವ ನೀರಿನ ಘಟಕ ಯಂತ್ರಗಳನ್ನು ರೆಡಿ ಮಾಡಿಸಿ

ಕೆಟ್ಟು ಹೋಗಿರುವ ನೀರಿನ ಘಟಕ ಯಂತ್ರಗಳನ್ನು ರೆಡಿ ಮಾಡಿಸಿ

ಮಳವಳ್ಳಿ: ತಾಲೂಕಿನ ಹಲಗೂರು ಹೋಬಳಿ ಗುಂಡಾಪುರದಲ್ಲಿರುವ ನೀರಿನ ಘಟಕ ಉದ್ಘಾಟನೆಯಾಗಿ ಏಳು ವರ್ಷಗಳಿಂದ ಪದೇ ಪದೇ ಕೆಟ್ಟು ಹೋಗುತ್ತಿದ್ದು ಗ್ರಾಮದವರ ಪಾಲಿಗೆ ಈ ನೀರಿನ ಘಟಕ ಇದ್ದೂ ಇಲ್ಲದಂತಾಗಿದೆ. ಈ ಕುರಿತು ಹಲವಾರು ಬಾರಿ ಇಲಾಖೆಯವರ ಗಮನಕ್ಕೆ ತಂದ ನಂತರ ಸ್ಥಳಕ್ಕೆ ಇಂಜಿನಿಯರ್ ವೆಂಕಟೇಶ್ ಅವರು ಬಂದು ರೆಡಿ ಮಾಡಿಸಿದ್ದರು. ಆದರೆ ಒಳಗೆ ಹೋಗಿ ನೋಡಿದಾಗ ಯಾವುದೇ ಯಂತ್ರಗಳು ಕೆಲಸ ಮಾಡುತ್ತಿಲ್ಲ. ಬೋರ್ವೆಲ್ನಿಂದ ಟ್ಯಾಂಕಿಗೆ ಹೋದ ನೀರು ಯಾವುದೇ ಫಿಲ್ಟರ್ ಆಗದೆ ಐದು ರೂಪಾಯಿ ಕಾಯಿನ್ ಹಾಕಿ ನೋಡಿದರೆ ಬರಿ ಗಲೀಜು ನೀರು ಬರುತ್ತಿದೆ. ನಮ್ಮ ಗ್ರಾಮದಲ್ಲಿ ಬೆಟ್ಟದ ಅರಸಮ್ಮ ಜಾತ್ರಾ ನಡೆಯಲಿದ್ದು ಸಾವಿರಾರು ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಕೆಟ್ಟು ಹೋಗಿರುವ ಯಂತ್ರಗಳನ್ನು ರೆಡಿ ಮಾಡಿಸಿ. ಅಲ್ಲದೆ ನಮ್ಮ ಗ್ರಾಮದಲ್ಲಿ ಕೆಲವರಿಗೆ ನೆಗಡಿ ಕೆಮ್ಮು ಬಂದಿದೆ. ಜನಕ್ಕೆ ಏನಾದರೂ ಆರೋಗ್ಯದಲ್ಲಿ ವಾಂತಿ ಭೇದಿ ಆದರೆ ಜಿಲ್ಲೆಯ ಎಲ್ಲಾ ಅಧಿಕಾರಿಗಳು ನಮ್ಮ ಗ್ರಾಮಕ್ಕೆ ಓಡಿ ಬರುತ್ತಾರೆ. ಅದು ಆಗುವುದು ಬೇಡ ಶುದ್ಧ ಕುಡಿಯುವ ನೀರಿನ ಘಟಕದ ಯೋಗ್ಯವಾದ ಯಂತ್ರಗಳನ್ನು ಹಾಕಿ ಸರಿಪಡಿಸಬೇಕು ಎಂದು ಗ್ರಾಮದ ಮರಿಸ್ವಾಮಿ ಒತ್ತಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ದೊರೆಸ್ವಾಮಿ, ಸುರೇಶ್, ಬಸವರಾಜು, ನಾಗೇಶ್, ಕಿರಣ್, ಶಿವಕುಮಾರ್ ಹಾಜರಿದ್ದರು.