ರಾಗಿ ಮಾಲ್ಟ್ ಸೇವನೆಯಿಂದ ಆರೋಗ್ಯ ವೃದ್ಧಿ: ಶಾಸಕ ಸಿ ಎನ್ ಬಾಲಕೃಷ್ಣ

ರಾಗಿ ಮಾಲ್ಟ್ ಸೇವನೆಯಿಂದ ಆರೋಗ್ಯ ವೃದ್ಧಿ: ಶಾಸಕ ಸಿ ಎನ್ ಬಾಲಕೃಷ್ಣ

ರಾಗಿ ಮಾಲ್ಟ್ ಸೇವನೆಯಿಂದ ಆರೋಗ್ಯ ವೃದ್ಧಿ: ಶಾಸಕ ಸಿ ಎನ್ ಬಾಲಕೃಷ್ಣ

ಚನ್ನರಾಯಪಟ್ಟಣ: ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಸಾಯಿ ಶೂರ್ ರಾಗಿ ಹೆಲ್ತ್‌ ಮಿಕ್ಸ್ ವಿತರಣಾ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು. ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯ ವೃದ್ಧಿಯಾಗುವ ಜೊತೆಗೆ ಸದೃಢವಾಗಿ ಓದಿನಲ್ಲಿ ಚುರುಕು ವಂದಿ ಶೈಕ್ಷಣಿಕವಾಗಿ ಬೆಳವಣಿಗೆಯಾಗಲು ಸಾಧ್ಯ ಎಂದು ತಿಳಿಸಿದರು. ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ತಾಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ,ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಹಾಗೂ ಕೆಎಂಎಫ್ ಸಹಯೋಗದಲ್ಲಿ ಗುರುವಾರ ಸಾಯಿ ಹೆಲ್ತ್ ಮಿಕ್ಸ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು,  ತಾಲೂಕಿನ ಸರ್ಕಾರಿ ಶಾಲೆಯ ಮಕ್ಕಳ ಮಾನಸಿಕ ದೈಹಿಕ ಆರೋಗ್ಯಕ್ಕಾಗಿ ರಾಗಿ ಮಾಲ್ಟ್ ವಿತರಣೆಯನ್ನು ಪ್ರಾರಂಭಿಸಲಾಗಿದ್ದು ಉತ್ತಮ ಪೌಷ್ಟಿಕಾಂಶ ಶಿಕ್ಷಣಕ್ಕೆ  ರಹಧಾರಿಯಾಗಲಿದೆ, ಈ ಹಿಂದೆ ವಾರಕ್ಕೆರಡು ಮೊಟ್ಟೆ ಕೊಡುವ ಕಾರ್ಯಕ್ರಮ ರೂಪಿಸಿದ್ದು ಇದೀಗ ರಾಗಿ ಮಾಲ್ಟ್ ಕೊಡುವ ಕಾರ್ಯಕ್ರಮ ಇಂದಿನಿಂದ ಆರಂಭಗೊಂಡಿದೆ ಎಂದು ತಿಳಿಸಿದರು, ಚೆಲುವನಾರಾಯಣಸ್ವಾಮೀ ಮಾತನಾಡಿ ಮಕ್ಕಳಿಗೆ ರಕ್ತಹೀನತೆ ಹಾಗೂ ಪೌಷ್ಟಿಕಾಂಶ ಕೊರತೆ ಉಂಟಾಗಬಾರದು. ಆಗ ಮಾತ್ರ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗಿಸಿಕೊಂಡು ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳಲು ಸಾಧ್ಯ ಎಂದರು,ತಾಲೂಕಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶ ದೊರೆಯಬೇಕೆಂದು ರಾಜ್ಯ ಸರ್ಕಾರ ರಾಗಿ ಮಾಲ್ಟ್ ಯೋಜನೆ ಆರಂಭಿಸಿದ್ದು ಮಕ್ಕಳ ಅಪೌಷ್ಟಿಕತೆಯನ್ನು ತಡೆಗಟ್ಟಲು ಮುಂದಾಗಿದೆ ಎಂದರು, ಮಕ್ಕಳು ಬಾಲ್ಯದಲ್ಲಿ ಪೌಷ್ಟಿಕ ಆಹಾರಗಳಾದ ರಾಗಿ, ಮೊಟ್ಟೆ, ಹಾಲು, ತರಕಾರಿ ಸೇರಿದಂತೆ ಇನ್ನಿತರ ಪದಾರ್ಥಗಳಿಗೆ ಅಸಡ್ಡೆ ವಹಿಸುವವರು, ಕಾಲಕ್ರಮೇಣ ಅವುಗಳ ಮಹತ್ವ ತಿಳಿಯುವ ಮುನ್ನವೇ ಆರೋಗ್ಯ ಶರೀರಕ್ಕೆ ಪೌಷ್ಟಿಕ ಆಹಾರ ಸೇವಿಸುವುದು ಒಳ್ಳೆಯದು, ಇದರಿಂದ ಭವಿಷ್ಯದ ಬದುಕಿನಲ್ಲಿ ಇನ್ನಷ್ಟು ಸದೃಢವಾಗಲು ಸಾಧ್ಯ ಎಂದು ಸಲಹೆ ನೀಡಿದರು, ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಆರೋಗ್ಯ ಪರೀಕ್ಷೆಯ ಬಳಿಕ ರಕ್ತ ಹೀನತೆ ಅಪೌಷ್ಟಿಕತೆ ಕಾಡುತ್ತಿದೆ ಇವುಗಳನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಮಕ್ಕಳಿಗಾಗಿ ಉಣ ಪಡಿಸಿದೆ, ಹಾಲು, ಮೊಟ್ಟೆ, ಚುಕ್ಕಿ ಬಾಳೆಹಣ್ಣು ಇದೀಗ ರಾಗಿ ಮಾಲ್ಟ್ ವಿತರಿಸುತ್ತಿದ್ದು ಇದನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು, ಕ್ಷೇತ್ರ ಶಿಕ್ಷಣಾಧಿಕಾರಿ ದೀಪ ಮಾತನಾಡಿ ಆರೋಗ್ಯಕ್ಕೆ ಪೂರಕವಾದ ಪದಾರ್ಥಗಳನ್ನು ಸೇವಿಸುವುದು ಅತಿ ಮುಖ್ಯ, ವಿದ್ಯಾರ್ಥಿಗಳು ಗುಣಮಟ್ಟದ ಆಹಾರಗಳನ್ನು ಅಸಡ್ಡೆ ವಹಿಸದಿರಿ, ರುಚಿ ಕಡಿಮೆ ಇದ್ದರೂ ಕೂಡ ಪರಿಪೂರ್ಣ ಆರೋಗ್ಯಕ್ಕೆ ಸಹಕಾರಿ ಹೀಗಾಗಿ ಹಾಲು, ಮೊಟ್ಟೆ ಹಾಗೂ ರಾಗಿಯ ವಿವಿಧ ರೀತಿಯ ಪದಾರ್ಥಗಳನ್ನು ಸೇವಿಸುವುದು ಉತ್ತಮ ಎಂದು ಹೇಳಿದರು.ಮಕ್ಕಳಲ್ಲಿ ರಕ್ತಹೀನತೆ ಇರಕೂಡದು ಹಾಗೂ ಭವಿಷ್ಯಕ್ಕೆ ಉತ್ತಮ ಪ್ರಜೆ ನೀಡುವ ದೃಷ್ಟಿಯಿಂದ ತಾಲೂಕಿನ ಅತ್ಯಂತ ಒಂದರಿಂದ ಹತ್ತನೇ ತರಗತಿಗೆ ಮಕ್ಕಳಿಗೆ ಪ್ರಸ್ತುತ ಸಾಲಿನಿಂದ ರಾಗಿ ಮಾಲ್ಟ್ ವಿತರಿಸಲಾಗುತ್ತಿದೆ, ಮಕ್ಕಳು ಅಂಜದೆ ಆ ಮುಕ್ತವಾಗಿ ಸೇವಿಸಿ ಆರೋಗ್ಯಯುತ ಶರೀರ ನಿಮ್ಮದಾಗಿಸಿಕೊಳ್ಳಬೇಕೆಂದು ತಿಳಿಸಿದರು, ಇದೇ ಸಂದರ್ಭದಲ್ಲಿ ಶಾಸಕರಾದ ಸಿ ಎನ್ ಬಾಲಕೃಷ್ಣ, ಪುರಸಭಾ ಸದಸ್ಯ ಬನಶಂಕರಿ ರಘು,ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ ಆರ್ ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾ, ಅನ್ನದಾಸೋಹ ಅಧಿಕಾರಿ ಚೆಲುವನಾರಾಯಣಸ್ವಾಮಿ, ಬಿ ಆರ್ ಸಿ ಅನಿಲ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಟಿ ಮಂಜಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಲೇಂದ್ರ, ಸೇರಿದಂತೆ ಇತರರು ಹಾಜರಿದ್ದರು.