ಇಬ್ಬರು ಆರೋಪಿಗಳ ಸೆರೆ, ಚಿನ್ನದ ಆಭರಣಗಳು ವಶ

May 28, 2025 - 13:41
May 30, 2025 - 20:07
 0  4
ಇಬ್ಬರು ಆರೋಪಿಗಳ ಸೆರೆ, ಚಿನ್ನದ ಆಭರಣಗಳು ವಶ

ಕೆಜಿಎಫ್,ಮೇ ೨೭: ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಚಿನ್ನದ ಆಭರಣಗಳ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು ರೂ. ೨,೫೦,೦೦೦/- ಬೆಲೆ ಬಾಳುವ ೨೯ ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಬಂಗಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ದೂರುದಾರರಾದ ಬಂಗಾರಪೇಟೆ ವಾಸಿ ಸುಕನ್ಯಾ ಮತ್ತು ಬೊಪ್ಪನಹಳ್ಳಿ ವಾಸಿ ಬೀರಪ್ಪ ಎಂಬುವರು ಬಂಗಾರಪೇಟೆಯ ಕೆನರಾ ಬ್ಯಾಂಕ್‌ನಲ್ಲಿ ಚಿನ್ನದ ಆಭರಣಗಳನ್ನು ಅಡವಿಡಲು ಬಂದು ಡಿ.ಡಿ ಫಾರ್ಮ್ ಬರೆಸುತ್ತಿರುವಾಗ ಯಾರೋ ಕಳ್ಳರು ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿರುವ ಬಗ್ಗೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೇ ೨೫ ರಂದು ಕಳ್ಳತನ ಪ್ರಕರಣಗಳು ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿತ್ತು.
 
ಈ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಡಿವೈಎಸ್ಪಿ ಎಸ್.ಪಾಂಡುರಂಗ ರವರ ಮಾರ್ಗದರ್ಶನದಲ್ಲಿ ಬಂಗಾರಪೇಟೆ ಪಿಐ ಆರ್.ದಯಾನಂದ್ ರವರ ನೇತೃತ್ವದಲ್ಲಿ ಪಿಎಸ್‌ಐ ಪ್ರಕಾಶ್ ನರಸಿಂಗ್ ಮತ್ತು ಅವರ ತಂಡದವರು ಬಂಗಾರಪೇಟೆ ವಾಸಿಗಳಾದ ರಾಣಿಯಮ್ಮ ಮತ್ತು ಷೇಕ್ ಶಬ್ರೀನ್ ಎಂಬುವರನ್ನು ಬಂಧಿಸಿ, ಆರೋಪಿಗಳಿಂದ ಸುಮಾರು ರೂ. ೨,೫೦,೦೦೦/- ಬೆಲೆ ಬಾಳುವ ೨೯ ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಕಾನೂನು ಕ್ರಮ ವಹಿಸಿರುತ್ತಾರೆ.

ಡಿವೈಎಸ್ಪಿ ಎಸ್.ಪಾಂಡುರಂಗ, ಬಂಗಾರಪೇಟೆ ಪಿಐ ಆರ್.ದಯಾನಂದ್ ಅವರ ಮಾರ್ಗದರ್ಶನದಂತೆ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಬಂಗಾರಪೇಟೆ ಪಿಎಸ್‌ಐ ಪ್ರಕಾಶ್ ನರಸಿಂಗ್, ಸಿಬ್ಬಂದಿಗಳಾದ ಮಂಜುನಾಥ್, ಗಜೇಂದ್ರ, ವಿಜಯ್ ಕುಮಾರ್ ಮತ್ತು ಮುನೇಂದ್ರ ರವರುಗಳ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಪ್ರಶಂಶಿಸಿದ್ದಾರೆ.

ಚಿತ್ರ ಶೀರ್ಷಿಕೆ:೦೧ಕೆಜಿಎಫ್೦೧: ವಶಪಡಿಸಿಕೊಂಡ ಚಿನ್ನದ ಆಭರಣಗಳೊಂದಿಗೆ ಬಂಗಾರಪೇಟೆ ಪೊಲೀಸರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0