ಮಧ್ಯ  ಮಾದಕ  ವಸ್ತುಗಳ ವಿರುದ್ಧ ಅಭಿಯಾನ

Oct 17, 2025 - 17:37
 0  14
ಮಧ್ಯ  ಮಾದಕ  ವಸ್ತುಗಳ ವಿರುದ್ಧ ಅಭಿಯಾನ

ಚನ್ನರಾಯಪಟ್ಟಣ: ತಾಲೂಕು ದಂಡಿಗನಹಳ್ಳಿ ಹೋಬಳಿ ಬರಗೂರು ಹ್ಯಾಂಡ್ ಪೋಸ್ಟ್ ನಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ ನವದೆಹಲಿ, ಹಾಗೂ ವಿಕಲಾಚೇತನ  ಹಾಗೂ  ಹಿರಿಯ  ನಾಗರಿಕರ  ಇಲಾಖೆ ವತಿಯಿಂದ ಮಧ್ಯ  ಮಾದಕ  ವಸ್ತುಗಳ ವಿರುದ್ಧ ಅಭಿಯಾನ ಹಾಗೂ ನಮ್ಮಗೆ ಅನಾರೋಗ್ಯ ಉಂಟುಮಾಡುವ ಮಾದಕ ವಸ್ತುಗಳಿಂದ ದೂರ ಇರೋಣ
ಸಮಾಜದ ಸ್ವಾಸ್ಥವನ್ನು ಕೆಡಿಸುವ ಮಾದಕೇಶನದಿಂದ ದೂರ ಸರಿಯೋಣ
ನಮ್ಮ ವಿದ್ಯಾಭ್ಯಾಸಕ್ಕೆ ಮಾರಕವಾಗುವ ಮಾದಕವೇಶನಕ್ಕೆ ಬಲಿಯಾಗದಿರೋಣ
ನಮ್ಮ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಗೆ ತಡೆಯಾಗಿರುವ ಮಾದಕವೇಶನದಿಂದ ಮುಕ್ತರಾಗೋಣ
ನಶಮುಕ್ತ ಕರ್ನಾಟಕದ ನಿರ್ಮಾಣ ಮಾಡೋಣ ಹಾಗೂ ದೇಶವನ್ನು ಸದೃಢಗೊಳಿಸಲು ಸಹಕರಿಸೋಣ ಈ ಘೋಷವಾಕ್ಯಗಳೊಂದಿಗೆ ಬರಗೂರು ಹ್ಯಾಂಡ್ ಪೋಸ್ಟ್ ಕುವೆಂಪು ಇಂಟರ್ ನ್ಯಾಷನಲ್ ಶಾಲೆಯವತಿಯಿಂದ ಕಾರ್ಯಕ್ರಮ ಆಯೋಜಿಸಲಾಯಿತು.

ಜೊತೆಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವ ಸಲುವಾಗಿ ಘೋಷಣೆಗಳನ್ನು ಹೇಳಿಸಲಾಯಿತು ಹಾಗೂ ರಂಗೋಲಿ ಸ್ಪರ್ಧೆ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆ ಇನ್ನಿತರ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಂದಲೇ ಮಾಡಿಸಲಾಯಿತು  

ಉದ್ಘಾಟನೆಯನ್ನೂ ಕುವೆಂಪು ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಕೋಮಲ ಶಿವಸ್ವಾಮಿ ನೆರವೇರಿಸಿದರು.   ಪ್ರಾರ್ಥನೆಯನ್ನೂ 9 ಮತ್ತು 10ನೇ ತರಗತಿ  ವಿದ್ಯಾರ್ಥಿಗಳು ನಡೆಸಿಕೊಟ್ಟರು. ನಿರೂಪಣೆಯನ್ನ  ಶ್ರೀನಿವಾಸ್ ಬಿ.ಟಿ     (ವಿ. ಆರ್ .ಡಬ್ಲ್ಯೂ) ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಕುವೆಂಪು  ಇಂಟರ್ನ್ಯಾಷನಲ್ ಸ್ಕೂಲ್ ಕಾರ್ಯದರ್ಶಿ  ಕೋಮಲ   ಶಿವಸ್ವಾಮಿ, ಪ್ರಾಂಶುಪಾಲರಾದ  ಭೂಮಿಕ ಮೋಹನ್  ಬರಗೂರು  ಕೆನರಾ  ಬ್ಯಾಂಕ್ ಮ್ಯಾನೇಜರ್ ಚಂದ್ರಕಾಂತ್,  ಸಹೋದ್ಯೋಗಿ  ರಘು, ಚನ್ನರಾಯಪಟ್ಟಣ ತಾಲೂಕು ಪಂಚಾಯಿತಿ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಾದ          ( ಎಂ.ಆರ್. ಡಬ್ಲ್ಯೂ)   ಶ್ರೀ ಸುಬ್ರಹ್ಮಣ್ಯ ರವರು,  
ಕರ್ನಾಟಕ ರಕ್ಷಣಾ ವೇದಿಕೆ  ದಂಡಿಗನಹಳ್ಳಿ  ಹೋಬಳಿ ಅಧ್ಯಕ್ಷರು ಫಯಾಜ್ ಯು ಎನ್ ,ಕರವೇ ಉಪಾಧ್ಯಕ್ಷರು ಹಾಗೂ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರು (ವಿ ಆರ್ ಡಬ್ಲ್ಯೂ) ಅನಿಲ್  ಕೆ  ಗೌಡ ಬರಗೂರು ಗ್ರಾಮ ಪಂಚಾಯತ್ . ಸಂಘಟನಾ  ಕಾರ್ಯದರ್ಶಿ  ಮಂಜುನಾಥ್  ಡಿ  ಆರ್ ನಯಾಜ್ , ಡಿ .ಕಾಳೇನಹಳ್ಳಿ ಗ್ರಾಮ ಪಂಚಾಯತಿ (ವಿ.ಆರ್. ಡಬ್ಲ್ಯೂ) ಬಿ.ಟಿ ಶ್ರೀನಿವಾಸ್ ಮತಿಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಎನ್ ಗೋವಿಂದ  ಗೌಡ  ಮಟ್ಟನವಿಲೆ           ( ವಿ.ಆರ್. ಡಬ್ಲ್ಯೂ) ಶಾಂತ್ ಕುಮಾರ್ ಹಾಗೂ ಕುಂದೂರು ಗ್ರಾಮ ಪಂಚಾಯಿತಿಯ ವಿ ಆರ್ ಡಬ್ಲ್ಯೂ ಪ್ರವೀಣ್ ಕುಮಾರ್  ಸಹ ಶಿಕ್ಷಕರು. ಹಾಗೂ ಶಿಕ್ಷಕಿಯರು  ಕಲ್ಪನಾ ಎಂ ಆರ್ ಮಹೇಶ್ ಎಂ ಎನ್ ,ರೋಶನ್, ಕಾವ್ಯ,  ಲೀಲಾ,   ಸುಪ್ರಿಯಾ,   ಯುವದಿತ,  ಜಯಪ್ರಕಾಶ್,  ಸ್ಪಂದನ,  ಸಂಧ್ಯಾ  ಶ್ರೀ ನೇತ್ರ, ಚೈತ್ರ,  ವರ್ದಿನಿ,  ವೀಣಾ,  ಶಾಲೆಯ  ವಿದ್ಯಾರ್ಥಿಗಳು, ಸೇರಿದಂತೆ ಇತರ ಹಾಜರಿದ್ದರು.

What's Your Reaction?

Like Like 3
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456