ಸಂತೆಮರಹಳ್ಳಿಯಲ್ಲಿ ವಿಜೃಂಭಣೆಯಿಂದ ಜರುಗಿದ ಕಂಡಾಯ ಉತ್ಸವ

Oct 17, 2025 - 15:33
 0  4
ಸಂತೆಮರಹಳ್ಳಿಯಲ್ಲಿ ವಿಜೃಂಭಣೆಯಿಂದ ಜರುಗಿದ ಕಂಡಾಯ ಉತ್ಸವ

 ಚಾಮರಾಜನಗರ: ತಾಲೋಕಿನ ಸಂತೆಮರಹಳ್ಳಿಯಲ್ಲಿ ಅದಿಜಾಂಬವ ಸಮುದಾಯ ವತಿಯಿಂದ 10ನೇ ವರ್ಷದ ಕಂಡಾಯ ಉತ್ಸವ  ಬಿಳಿಗಿರಿ ರಂಗಸ್ವಾಮಿ ಹರಿವೆ ಉತ್ಸವ ಹಾಗೂ ಬಹಳ ವಿಜೃಂಭಣೆಯಿಂದ ಜರುಗಿತು.

 ಸತತವಾಗಿ ಕಳೆದ ಹತ್ತು ವರ್ಷಗಳಿಂದ ಸಂತೆಮರಹಳ್ಳಿ ಗ್ರಾಮದಲ್ಲಿ ಒಗ್ಗಟ್ಟಿನಿಂದ ಆಚರಣೆ ಮಾಡುವ ಉತ್ಸವವಾಗಿದೆ.  

ಗ್ರಾಮದ ಉದ್ದಕ್ಕೂ ಕಂಡಾಯದ ಜೊತೆಗೆ ಬಿಸಿಲು ಮಾರಮ್ಮ ಹಾಗೂ ಬಿಳಿಗಿರಿ ರಂಗಸ್ವಾಮಿ ಹರಿವೆ ಉತ್ಸವವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ತಮಟೆ ಹಾಗೂ ವಾದ್ಯಗಳ ಜೊತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.


 ಇಲ್ಲಿನ ಆದಿ ಜಾಂಬವರ ಬೀದಿಯಲ್ಲಿಮನೆಗಳ ಮುಂದೆ ರಂಗೋಲಿ ಇಟ್ಟು ವಿದ್ಯುತ್ ದೀಪಗಳಿಂದ ಅಲಂಕರಿಸಲಾಯಿತು. ಗ್ರಾಮದಲ್ಲಿ ವರ್ಷಕೊಮ್ಮೆ ಮಾಡುವ ಗ್ರಾಮ ದೇವತೆ ಅಪವಾಗಿರುವುದರಿಂದ ತಮ್ಮ  ಸ್ವಂತ ನೆಂಟರಿಷ್ಟರನ್ನು ಕರೆದು ಹಬ್ಬದ ಊಟ ಮಾಡಿ ಬಡಿಸುವ ಸಂಪ್ರದಾಯವಾಗಿದೆ. ಮೂರು ದಿನಗಳ ಹಬ್ಬವಾಗಿರುವುದರಿಂದ ಸರಿಸುಮಾರು 5 ಸಾವಿರ ಕ್ಕೂ ಹೆಚ್ಚು ಭಕ್ತಾದಿಗಳು ಬಂದು ದೇವರ ದರ್ಶನ ಪಡೆಯುವುದು ಬಹಳ ವಿಶೇಷವಾಗಿದೆ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456