ದಾನಗಳಲ್ಲೇ ಶ್ರೇಷ್ಠ ಹಾಗೂ ಪುಣ್ಯದ ಕೆಲಸ ಗೋದಾನ ಗೋವುಗಳಿಗೆ ಮೇವು ವಿತರಿಸಿದ ಹೆಚ್.ರಾಮಚಂದ್ರಪ್

ಕೆಜಿಎಫ್: ಧರ್ಮಗ್ರಂಥಗಳ ಪ್ರಕಾರ ಪ್ರಾಣಿಗಳಿಗೆ ಆಹಾರವನ್ನು ನೀಡುವುದು ಪುಣ್ಯದ ಕಾರ್ಯವಾಗಿದೆ ಅದೇ ರೀತಿ ಗೋದಾನ ದಾನಗಳಲ್ಲೇ ಶ್ರೇಷ್ಟವಾದುದು ಎಂದು ಕೋಲಾರ ಜಿಲ್ಲಾ ರೋಟರಿ ಸಹಾಯಕ ರಾಜ್ಯಪಾಲಕ ಹಾಗೂ ಶ್ರೀ ಗಂಗಾ ನಿಕೇತನ ಫೌಂಡೇಶನ್ ಮತ್ತು ಸಿರಿಗನ್ನಡ ವೇದಿಕೆ ಅಧ್ಯಕ್ಷ ಹೆಚ್.ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
“ ಗಡಿನಾಡು ಉತ್ಸವ ” ಪ್ರಯುಕ್ತ ರೋಟರಿ ಸಂಸ್ಥೆ ಕೋಲಾರ ಹಾಗೂ ಸಿರಿಗನ್ನಡ ವೇದಿಕೆ, ಶ್ರೀ ಗಂಗಾ ನಿಕೇತನ ಫೌಂಡೇಶನ್, ಸ್ವರ್ಣಭೂಮಿ ಫೌಂಡೇಶನ್, ಶ್ರೀರಕ್ಷಾ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಕ್ಯಾಸಂಬಳ್ಳಿಯ ಬಳಿ ಇರುವ ಕಾವೇರಹಳ್ಳಿ ಧಾತ್ರಿ ಗೋಶಾಲೆಯಲ್ಲಿ ಗೋವುಗಳಿಗೆ ಮೇವು ವಿತರಣೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಸಂಘಟಿತ ಕಾರ್ಮಿಕರಿಗೆ ಗೌರವಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಧಾತ್ರಿ ಗೋಶಾಲೆಗೆ ಗೋದಾನ ಮಾಡಿ ಮಾತನಾಡುತ್ತಿದ್ದರು.
ಅಸಂಘಟಿತ ಕಾರ್ಮಿಕರು ಸಮಾಜದಲ್ಲಿ ಮುಖ್ಯವಾಹಿನಿಗೆ ಬಂದರೆ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಶ್ರಮಿಕ ಅಸಂಘಟಿತ ಕಾರ್ಮಿಕÀರನ್ನು ನಾವು ಗುರುತಿಸಿ ಸನ್ಮಾನ ಮಾಡಿದರೆ ಅವರಿಗೆ ನಿಜವಾದ ಸಾಮಾಜಿಕ ನ್ಯಾಯವನ್ನು ದೊರಕಿಸಿ ಕೊಟ್ಟಂತಾಗುತ್ತದೆ ಎಂದು ಹೇಳಿದರು. ಧಾತ್ರಿ ಗೋಶಾಲೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಗೋಶಾಲೆಗೆ ಸರಿಯಾದ ರಸ್ತೆ ಇಲ್ಲ ಸಂಬAಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ರಸ್ತೆ ನಿರ್ಮಿಸಿಕೊಡುವಂತೆ ಸಿರಿಗನ್ನಡ ವೇದಿಕೆ ವತಿಯಿಂದ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಕೋಲಾರ ಜಿಲ್ಲಾ ನಿವೃತ್ತ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಮಾತನಾಡಿ, ಗಡಿನಾಡು ಉತ್ಸವ ಕಾರ್ಯಕ್ರಮದಲ್ಲಿ ಹೆಚ್.ರಾಮಚಂದ್ರಪ್ಪನವರು ಶ್ರೀ ಸಾಯಿ ಜ್ಯೋತಿ ವೃದ್ಧಾಶ್ರಮಕ್ಕೆ ಪುಡ್ ಕಿಟ್, ಬೆಡ್ ಶೀಟ್ ವಿತರಣೆ, ಊಟದ ವ್ಯವಸ್ಥೆ, ಹಣ್ಣಿನ ಸಸಿಗಳನ್ನು ನೆಡುವುದು, ಕವಿಗೋಷ್ಠಿ, ಗೋವುಗಳಿಗೆ ಮೇವು ವಿತರಣೆಯನ್ನು ಪ್ರತಿ ವರ್ಷದಂತೆ ನಿರಂತರವಾಗಿ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.
ಕೋಲಾರ ರೋಟರಿ ಅಧ್ಯಕ್ಷ ಎಸ್.ಎಂ.ಚAದ್ರಶೇಖರ್ ರೋಟರಿ ಸಂಸ್ಥೆಯಿAದ ಸಮಾಜಕ್ಕೆ ಉಪಯೋಗವಾಗುವಂತಹ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು, ಹೆಚ್.ರಾಮಚಂದ್ರಪ್ಪ ರವರು ಹುಟ್ಟುಹಬ್ಬದಿನದಂದು ಗೋದಾನ ಮಾಡಿರುವುದು ವಿಶೇಷ ಕಾರ್ಯ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕೋಲಾರ ರೋಟರಿ ಕಾರ್ಯದರ್ಶಿ ಪ್ರಭಾಕರ್, ರೋಟರಿಯನ್ಗಳಾದ ಮುರಳಿಧರ್, ಜರ್ನಾಧನ್, ಸ್ವರ್ಣಭೂಮಿ ಫೌಂಡೇಶನ್ ಅಧ್ಯಕ್ಷ ಶಿವಕುಮಾರ್, ಮೋಹನ್ ಸಿಂಗ್, ಇಂಚರ ನಾರಾಯಣಸ್ವಾಮಿ, ಪ್ರಕಾಶ್, ಸುಪ್ರಿಂ, ಧನಂಜಯ, ಕೃಷ್ಣಪ್ಪ, ಶಂಕರ್, ಏಕಾಂಬರ, ರಾಧ ಪ್ರಕಾಶ್, ನಾಗರಾಜ್, ಪತ್ರಕರ್ತರಾದ ಪುರುಷೋತ್ತಮ್, ಕೃಷ್ಣಮೂರ್ತಿ, ಕೋಲಾರ್ ನ್ಯೂಸ್ ಚಂದ್ರು, ಮಂಜುನಾಥ್, ಧಾತ್ರಿ ಗೋಶಾಲೆಯ ವ್ಯವಸ್ಥಾಪಕಿ ಸುಲೋಚನಾ, ಶ್ರೀ ಗಂಗಾ ನಿಕೇತನ ಫೌಂಡೇಶನ್ ನಿರ್ದೇಶಕಿ ವಿ. ಶೈಲಜಾ ಮತ್ತಿತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರು, ವಿವಿಧ ಕ್ಷೇತ್ರಗಳ ಸಾಧಕರು, ಹಿರಿಯ ನಾಗರೀಕರು ಸೇರಿದಂತೆ ಶಿಕ್ಷಕರರನ್ನು ಸನ್ಮಾನಿಸಿ ಗೌರವಿಸಲಾಯಿತು.
What's Your Reaction?






