ಮನೆ ಕಳವು ಪ್ರಕರಣದಲ್ಲಿ ಓರ್ವ ಆರೋಪಿ ಬಂಧನ ಮಾಲು ವಶ

ಬಂಗಾರಪೇಟೆ: ಕಾಮಸಮುದ್ರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮನೆ ಕಳವು ಪ್ರಕರಣಕ್ಕೆ ಸಂಬAಧಿಸಿದAತೆ, ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ ಸುಮಾರು ರೂ.೩,೩೦,೦೦೦/- ಮೌಲ್ಯದ ೩೩ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಮಟಮಾಕನಹಳ್ಳಿ ಗ್ರಾಮದ ರಾಮಚಂದ್ರಪ್ಪಶೆಟ್ಟಿ ರವರ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ನಡೆಸಲಾಗುತ್ತಿತ್ತು.
ಡಿವೈಎಸ್ಪಿ ಎಸ್.ಪಾಂಡುರAಗ ರವರ ಮಾರ್ಗದರ್ಶನದಲ್ಲಿ ಕಾಮಸಮುದ್ರಂ ಸಿಪಿಐ ಜಿ.ಸಿ.ನಾರಾಯಣಸ್ವಾಮಿ ರವರ ನೇತೃತ್ವದಲ್ಲಿ ಪಿಎಎಸ್‌ಐ ಬಿ.ವಿ.ಕಿರಣ್‌ಕುಮಾರ್ ಮತ್ತು ಅಪರಾಧ ಪತ್ತೆ ತಂಡದವರು ತಮಟಮಾಕನಹಳ್ಳಿ ಗ್ರಾಮದ ನಿವಾಸಿ ಟಿವಿ ಸುರೇಂದ್ರ ಎಂಬುವರನ್ನು ಬಂಧಿಸಿ, ಆರೋಪಿಯಿಂದ ಸುಮಾರು ರೂ.೩,೩೦,೦೦೦/- ಮೌಲ್ಯದ ೩೩ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಂಡು, ಆರೋಪಿಯ ವಿರುದ್ಧ ಕಾನೂನು ಕ್ರಮ ವಹಿಸಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಕಾಮಸಮುದ್ರಂ ಪಿ.ಎಸ್.ಐ ಬಿ.ವಿ.ಕಿರಣ್‌ಕುಮಾರ್, ಪಿ.ಎಸ್.ಐ ಹೆಚ್.ಎಂ.ಲಕ್ಷ್ಮಿನಾರಾಯಣ, ಸಿಬ್ಬಂದಿಗಳಾದ ಮಂಜುನಾಥರೆಡ್ಡಿ, ಮುನಾವರ್‌ಪಾಷ, ರಾಮಕೃಷ್ಣಾರೆಡ್ಡಿ, ಎನ್.ವಿ.ಅಮರೇಶ್, ಮಂಜುನಾಥ, ಮಾರ್ಕೊಂಡ, ಲಕ್ಷ್ಮಣತೇಲಿ ಹಾಗೂ ಜೀಪ್ ಚಾಲಕ ಗುರುಮೂರ್ತಿ ರವರ ಉತ್ತಮ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಅವರು ಪ್ರಶಂಶಿಸಿದ್ದಾರೆ.
What's Your Reaction?






