ಗಣೇಶೋತ್ಸವ ಸಂಭ್ರಮ ವಿಜೇತರಿಗೆ ಬಹುಮಾನ ವಿತರಣೆ

Sep 8, 2025 - 15:48
 0  39
ಗಣೇಶೋತ್ಸವ ಸಂಭ್ರಮ ವಿಜೇತರಿಗೆ ಬಹುಮಾನ ವಿತರಣೆ

ಕೆಜಿಎಫ್: ತಾಲೂಕಿನ ಮಾರಿಕುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಕೋತ್ತೂರು ಡಾರ್ಲಿಂಗ್ ಬಾಯ್ಸ್ ಯುವಕರ ಸಂಘದಿಂದ ಹಮ್ಮಿಕೊಂಡಿದ್ದ ಗಣೇಶೋತ್ಸವದಲ್ಲಿ ವಿವಿಧ ವಿನೂತನ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಮೂಲಕ ಗಮನಸೆಳೆದಿದ್ದಾರೆ.

ಗ್ರಾಮದ ಚೌಡೇಶ್ವರಿ ದೇವಿಯ ಆವರಣದಲ್ಲಿ ಸುಮಾರು 11 ಅಡಿಗಳ ಎತ್ತರದ ಗಣೇಶ ಮೂರ್ತಿಯನ್ನು ಶುಕ್ರವಾರ ಪ್ರತಿಷ್ಠಾಪನೆ ಮಾಡಿ 3ನೇ ದಿನ ಭಾನುವಾರ ವಿಜೃಂಭಣೆಯಿಂದ ವಿಸರ್ಜನೆ ಮಾಡಿದರು.

ದೇಗುಲ ಹಾಗೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದ ಸ್ಥಳದಲ್ಲಿ ತಳಿರು ತೋರಣ ಕಟ್ಟಿ, ವಿದ್ಯುತ್ ದ್ವೀಪ ಅಲಂಕಾರ ಮಾಡಲಾಗಿತ್ತು.

ಶುಕ್ರವಾರ ರಾತ್ರಿ ಚೌಡೇಶ್ವರಿ ದೇವಿಗೂ ವಿಶೇಷ ಪೂಜೆಯನ್ನು ಪ್ರಧಾನ ಅರ್ಚಕ ಮಂಜುನಾಥ್ ದಿಕ್ಷೀತ್ ಅವರು ಪೂಜೆ ಸಲ್ಲಿಸಿ, ಬೃಹತ್ 11 ಅಡಿಗಳ ಗಣೇಶನಿಗೆ ವಿವಿಧ ಬಣ್ಣಗಳ ಹೂಗಳಿಂದ ಅಲಂಕರಿಸಿ, ಪೂಜೆ ಸಲ್ಲಿಸಿದರು.

2 ನೇ ಶನಿವಾರ ಬೆಳಿಗ್ಗೆ ಯುವಕರಿಂದ ಮಡಕೆ ಒಡೆಯುವ ಸ್ಪರ್ಧೆ, ಮರ ಹೇರುವುದು, ದಿನ ರಾತ್ರಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಕಾರ್ಯಕ್ರಮ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಎಲ್ಲರಿಗೂ ಬಹುಮಾನ ವಿತರಣೆ ಸಮಾರಂಭ ನಡೆಯಿತು.

3 ನೇ‌ ದಿನ ದೇವರಿಗೆ ಪ್ರಸಾದವಾಗಿ ಇಟ್ಟಿದ್ದ 3 ಕೆ.ಜಿ ರಡ್ಡು 6700, 2 ಕೆಜಿ ಲಡ್ಡು 4500, 1, ಕೆಜಿ ಲಡ್ಡು 5000 ಸಾವಿರಕ್ಕೆ, ದೇವರ ಪಂಚೆ ಇತರೆ ವಸ್ತುಗಳ ಬಿಡ್ಡಿಂಗ್ ನಡೆದು ಹರಾಜು ಪ್ರಕ್ರಿಯೆ ನಡೆಯಿತು.

ಸಂಭ್ರಮದ ವಿಸರ್ಜನೆ: ಚೌಡೇಶ್ವರಿ ದೇವಾಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬ್ಯಾಂಡ್ ಸೆಟ್, ತಮಟೆ ವಾದ್ಯಗಳೊಂದಿಗೆ, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಸಂಭ್ರಮದಿಂದ ತಮಟೆ ವಾದ್ಯಕ್ಕೆ ತಕ್ಕಂತೆ ಕುಣಿಯುವ ಮೂಲಕ ಸಂಭ್ರಮ ಹೆಚ್ಚಿಸಿದರು.

ಯಾವುದೇ ಸಮಸ್ಯೆಯಿಲ್ಲದೆ ಸಂಜೆ ವೇಳೆಗೆ ವಿಸರ್ಜನೆ ಮಾಡಲಾಯಿತು.

 ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪುರುಷೋತ್ತಮ್ ರೆಡ್ಡಿ, ಮಾಜಿ ಸದಸ್ಯ ನಾರಾಯಣಪ್ಪ, ಮುಖಂಡರಾದ ಮುನಿರತ್ನಂ, ಡೈರಿ ಶ್ರೀನಾಥ್ ರೆಡ್ಡಿ, ಆರ್ಮಿ ವಸಂತ್, ಚಂಗಲರಾಯರೆಡ್ಡಿ, ವೆಂಕಟರಾಮ್ , ಪ್ರದೀಪ್ ಕುಮಾರ್, ಪ್ರೇಸ್ ಪುರುಷೋತ್ತಮ್ ರೆಡ್ಡಿ, ಡಾರ್ಲಿಂಗ್ ಬಾಯ್ಸ್ ಯುವಕರು, ಹಾಗೂ ಅನೇಕ ಮುಖಂಡರು,ಯುವಕರು ಗ್ರಾಮಸ್ಥರು ಮಹಿಳೆಯರು ಇದ್ದರು.

01 ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಡಾರ್ಲಿಂಗ್ ಬಾಯ್ಸ್ ಯುವಕರ ಸಂಘದಿಂದ ಬಹುಮಾನ ವಿತರಿಸಲಾಯಿತು.

What's Your Reaction?

Like Like 2
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456