ಸಿಇಐಆರ್ ಪೋರ್ಟಲ್ ತಂತ್ರಾಂಶದಿಂದ ಪತ್ತೆಯಾದ ಮೊಬೈಲ್‌ಗಳನ್ನು ವಾರಸುದಾರರಿಗೆ ಹಸ್ತಾಂತರ

Sep 19, 2025 - 15:58
 0  2
ಸಿಇಐಆರ್ ಪೋರ್ಟಲ್ ತಂತ್ರಾಂಶದಿಂದ ಪತ್ತೆಯಾದ ಮೊಬೈಲ್‌ಗಳನ್ನು ವಾರಸುದಾರರಿಗೆ ಹಸ್ತಾಂತರ

ಕೆಜಿಎಫ್,ಸೆ.೧೮: ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಸಿಇಐಆರ್ ತಂತ್ರಾಂಶದಲ್ಲಿ ದೂರು ದಾಖಲಾಗಿದ್ದ ೧೮ ಮೊಬೈಲ್ ಫೋನ್‌ಗಳನ್ನು ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮವನ್ನು ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಸಿಇಎನ್ ಕ್ರೈಂ ಪೊಲೀಸ್ ಠಾಣೆ ವತಿಯಿಂದ ಸಿಇಐಆರ್ ಪೋರ್ಟಲ್ (ಕೇಂದ್ರೀಯ ಸಲಕರಣೆಗಳ ಗುರುತಿನ ನೋಂದಣಿ) (Central Equipment Identity Register) ನಲ್ಲಿ ದಾಖಲಾಗಿದ್ದ ಮೊಬೈಲ್ ಫೋನ್‌ಗಳ ಬಗ್ಗೆ ವಿಶೇಷ ಕಾರ್ಯಾಚರಣೆ ನಡೆಸಿ ೧೮ ಮೊಬೈಲ್‌ಗಳನ್ನು ಪತ್ತೆ ಮಾಡಿ, ವಾರಸುದಾರರನ್ನು ಬರಮಾಡಿಕೊಂಡು, ಅವರವರ ಮೊಬೈಲ್ ಫೋನ್‌ಗಳನ್ನು ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯ ಪಿಐ ಲಕ್ಷ್ಮೀನಾರಾಯಣ ಅವರ ಸಮಕ್ಷಮ ಹಸ್ತಾಂತರಿಸಲಾಯಿತು.

ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡಲ್ಲಿ ಕೂಡಲೇ ಸಿ.ಇ.ಐ.ಆರ್. ಪೋರ್ಟಲ್‌ನಲ್ಲಿ (www.ceir.gov.in) ದೂರನ್ನು ದಾಖಲಿಸುವಂತೆ ಕರೆ ನೀಡಿದರು.

ಇದರಿಂದಾಗಿ ಕಳುವಾದ ಹಾಗೂ ಕಳೆದುಕೊಂಡ ಮೊಬೈಲ್ ಫೋನ್‌ಗಳು ಪತ್ತೆಯಾಗುವುದಲ್ಲದೇ, ಬೇರೆಯವರು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಬಹುದೆಂದು ಈ ಕುರಿತು ಅಗತ್ಯ ತಿಳುವಳಿಕೆಗಳನ್ನು ನೀಡಿ ಅರಿವು ಮೂಡಿಸಲಾಯಿತು. ೧೮ ಮೊಬೈಲ್‌ಗಳನ್ನು ಪತ್ತೆ ಮಾಡಿ, ವಾರಸುದಾರರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾದ ಸಿಇಎನ್ ಪಿಐ ಲಕ್ಷ್ಮೀನಾರಾಯಣ ಮತ್ತು ಸಿಬ್ಬಂದಿ ಮಣಿಕಂಠ ಅವರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಅವರು ಶ್ಲಾಘಿಸಿದ್ದಾರೆ.
ಚಿತ್ರಶೀರ್ಷಿಕೆ: ೧೮ಕೆಜಿಎಫ್೦೧: ಮೊಬೈಲ್ ಪೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಸಿಇಎನ್ ಇನ್ಸ್‌ಪೆಕ್ಟರ್ ಲಕ್ಷ್ಮೀನಾರಾಯಣ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0