35 ನಗರ ಸಭೆ ವಾರ್ಡ್ಗಳಲ್ಲಿ ರೈಟ್ ಇಂಡಿಯಾ ಮೂವ್ಮೆಂಟ್ ಪಾರ್ಟಿ ಚುನಾವಣೆಯಲ್ಲಿ ಸ್ಪರ್ಧೆ
ಕೆಜಿಎಫ್: ಮುಂದಿನ ನಗರಸಭೆ ಚುನಾವಣೆಯಲ್ಲಿ 35 ವಾರ್ಡ್ಗಳಲ್ಲಿ ಇಂಡಿಯಾ ಮೂವ್ಮೆಂಟ್ ಪಾರ್ಟಿ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ . ನಗರಸಭೆಯಲ್ಲಿ ತುಂಬಾ ತುಳುಕುತ್ತಿರುವ ಭ್ರಷ್ಟಾಚಾರವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಹೋರಾಟವನ್ನು ಮಾಡಲಾಗುವುದು ಎಂದು ರೇಟ್ ಇಂಡಿಯಾ ಮೂಮೆಂಟ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಕರ್ನಾಟಕ ತಮಿಳುನಾಡು ಉಸ್ತುವಾರಿಯಾಗಿರುವ ಎಲ್. ಬಾಬು. ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಕೆಲವು ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಗೊಳಿಸಿದರೆ ಸಾಲದು ವಾರ್ಡಗಳ ಒಳಗೆ ಇರುವ ರಸ್ತೆಗಳ ಸ್ಥಿತಿಯನ್ನು ನೋಡಬೇಕು. ಗುಂಡಿ ಬಿದ್ದ ರಸ್ತೆಗಳಲ್ಲಿ ವಾಹನ ಸವಾರರು ಸಾರ್ವಜನಿಕರು ಬಿದ್ದು ಗಾಯಗೊಳ್ಳುವ ಪ್ರಕರಣಗಳು ನಡೆಯುತ್ತಲೇ ಇದೆ.
ನಗರಸಭೆಯಂತೂ ಭ್ರಷ್ಟಾಚಾರದಿಂದ ತುಂಬಿಹೋಗಿದ್ದು, ನಗರಸಭೆ ಒಳಗೆ ಎಂಟ್ರಿ ಆಗುತ್ತಿದ್ದಂತೆ ಅರ್ಜಿ ನೀಡುವುದರಿಂದ ಹಿಡಿದು ಆರ್ ಐ. ಆರ್ ಓ. ಬಿಲ್ ಕಲೆಕ್ಟರ್ ವರೆಗೂ ಹಣ ನೀಡಲೇಬೇಕು ಇಲ್ಲದಿದ್ದರೆ ನಿಮ್ಮ ಕಡತಗಳು ಕದಲುವುದಿಲ್ಲ ಅಷ್ಟರ ಮಟ್ಟಿಗೆ ವ್ಯವಸ್ಥೆ ಅದುಗಟ್ಟಿ ಹೋಗಿದೆ ಆದ್ದರಿಂದ ಮುಂದಿನ ನಗರ ಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು
ಮೂಲಕ ನಗರಸಭೆಯಲ್ಲಿ ನಮ್ಮ ಬಾವುಟವನ್ನು ಹಾರಿಸುವ ವಿಶ್ವಾಸವಿದೆ ಎಂದರು.
ಹಣ ನೀಡಿದವರಿಗೆ ಬಿಜಿಎಂಎಲ್ ಅಧಿಕಾರಿಗಳು ಅನುಕೂಲ ಮಾಡಿಕೊಡುತ್ತಾರೆ.
ಬಿಜಿಎಂಎಲ್ ಕಾಲೋನಿಗಳಲ್ಲಿ ವಾಸ ಮಾಡುತ್ತಿರುವ ಬಿಜಿಎಂಎಲ್ ಕಾರ್ಮಿಕರು ಅವಲಂಬಿತ ಕುಟುಂಬ ವರ್ಗದವರಿಗೆ ಮನೆಗಳ ವಾಸ ದೃಢೀಕರಣ ಪ್ರಮಾಣ ಪತ್ರಗಳನ್ನು ಇದುವರೆಗೂ ನೀಡಿಲ್ಲ. ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿದವರಿಂದ ಹಣ ಪಡೆದು ಬಿಜಿಎಂಎಲ್ ಅಧಿಕಾರಿಗಳು ಅನುಕೂಲ ಮಾಡಿಕೊಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ ಆದರೆ ಬಡವರು ಮನೆ ಕಟ್ಟಲು ಮುಂದಾದರೆ ಅವರಿಗೆ ವಿನಾಕಾರಣ ತೊಂದರೆ ಕೊಡುತ್ತಾರೆ ಎಂದು ಹೇಳಿದರು.
ತಮಿಳುನಾಡು ವಿಧಾನಸಭೆಯ ಚುನಾವಣೆಯಲ್ಲಿ ನಮ್ಮ ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಆಗುವುದು ಮತ್ತು ಪ್ರಬಲ ಪೈಪೋಟಿ ನೀಡಲಾಗುವುದು ಎಂದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
