ಉಪ ಅರಣ್ಯ ಸಂರಕ್ಷಣಧಿಕಾರಿಗಳ ಇಲಾಖೆಯಿಂದ ವನಸಿರಿ ಅಮರೇಗೌಡ ಮಲ್ಲಾಪುರಗೆ ಪ್ರಶಂಸನೀಯ ಪತ್ರ

ರಾಯಚೂರಿನ ಕರ್ನಾಟಕ ಸರ್ಕಾರ,ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಇಲಾಖೆಯ ವತಿಯಿಂದ ಕಛೇರಿಯಲ್ಲಿ ವನಸಿರಿ ಪೌಂಡೇಷನ್ ರಾಜ್ಯಾಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಅವರ ಪ್ರಕೃತಿ,ನಿಸರ್ಗ ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿನ ನಿಸ್ವಾರ್ಥ ಸೇವೆ ಗುರುತಿಸಿ ರಾಯಚೂರು ಪ್ರಾದೇಶಿಕ ಅರಣ್ಯ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಪ್ರವೀಣ್ ಅವರು ಪ್ರಶಂಸನೀಯ ಪತ್ರ ನೀಡಿ ಗೌರವಿಸಲಾಯಿತು.
ರಾಯಚೂರು ಜಿಲ್ಲೆಯಾದ್ಯಂತ ಪ್ರಕೃತಿ,ನಿಸರ್ಗ ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ವಿಶೇಷ ಆಸಕ್ತಿವಹಿಸಿ ನಿಸ್ವಾರ್ಥ ಸೇವೆ ಸಲ್ಲಿಸಿರುವ, ಮಳೆಗಾಲದಲ್ಲಿ ಸಸಿನೆಡುವುದು,ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ಅರವಟ್ಟಿಗೆ ನಿರ್ಮಿಸುವ ಮತ್ತು ವಿತರಿಸುವ ಕಾರ್ಯ,ಜೊತೆಗೆ ಅನುಮತಿ ಇಲ್ಲದೇ ಮರಗಳನ್ನು ಕಡಿದವರ ಮಾಹಿತಿಯನ್ನು ಇಲಾಖೆಗೆ ಮಾಹಿತಿ ತಿಳಿಸುವುದು ಹೀಗೆ ಪರಿಸರ ಮತ್ತು ವನ್ಯಜೀವಿಗಳಿಗೋಸ್ಕರ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವನಸಿರಿ ಪೌಂಡೇಷನ್ ರಿ. ರಾಯಚೂರು ರಾಜ್ಯ ಘಟಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ,ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಇಲಾಖೆಯ ವತಿಯಿಂದ ರಾಯಚೂರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಪ್ರವೀಣ್ ಅವರು ಜೂನ್ 5 2025ರ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ನೀಡಬೇಕಾಗಿದ್ದ ಪ್ರಶಂಸನೀಯ ಪತ್ರವನ್ನು ಇಂದು ಅಮರೇಗೌಡ ಮಲ್ಲಾಪುರ ಅವರಿಗೆ ಪ್ರಶಂಸನೀಯ ಪತ್ರ ನೀಡಿ ಗೌರವಿಸಿದರು.
ಈ ಸಂಧರ್ಭದಲ್ಲಿ ಮಾನವಿ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿ ಸುರೇಶ ಅಲಮೇಲು,ವನಸಿರಿ ಪೌಂಡೇಷನ್ ಸದಸ್ಯ ಚನ್ನಪ್ಪ ಕೆ.ಹೊಸಹಳ್ಳಿ ಇದ್ದರು
What's Your Reaction?






