ಉಮತೂರು ಗ್ರಾಮದಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮ

ಸಂತೆಮರಹಳ್ಳಿ: ಸಮೀಪದ ಉಮ್ಮತ್ತೂರು ಗ್ರಾಮದ ಅಂಗನವಾಡಿ ಆವರಣದಲ್ಲಿ ಮಕ್ಕಳ ಪೋಷಣಾ ಅಭಿಯಾನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಈಶ್ವರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹ ಪಿಡುಗು ಹೆಚ್ಚಾಗಿದ್ದೂ ಪೋಷಕರು ಇದರ ಬಗ್ಗೆ ತಿಳಿದುಕೊಂಡು ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಬೇಕು ಎಂದರು. ಜಿಲ್ಲೆಯಲ್ಲಿ ಬಾಲ್ಯ ವಿವಾಹದಂತ ಸಾಮಾಜಿಕ ಪಿಡುಗು ಅಲ್ಲಲ್ಲಿ ಸಂಭವಿಸುತ್ತಲೇ ಇದೇ ಮುಕ್ತಿ ಸಿಗಬೇಕು ಎಂದರೆ ನಾವು ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಬೇಕು ಹಾಗೂ ಪೋಷಕರು ಮಕ್ಕಳನ್ನು ಹೆಚ್ಚಿನ ವಿದ್ಯಾವಂತರಾಗುವಂತೆ ಪ್ರೇರೇಪಿಸಬೇಕು ಎಂದರು. ಕೌಟುಂಬಿಕ ಕಲಹಗಳಿಗೆ ಯಾವುದೇ ಆಸ್ಪದ ಕೊಡದೆ ನಾವು ಸಾಮೂಹಿಕವಾಗಿ ಕುಟುಂಬದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಲ್ಲಿ ಮುಂದಾಗಬೇಕು ಹಾಗೂ ಆದಷ್ಟು ಕುಟುಂಬದಲ್ಲಿ ವೈರತ್ವ ಬೆಳೆಸದೆ ಉತ್ತಮ ಬಾಂಧವ್ಯ ಹೊಂದಿ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಮುಂದಾಗಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲೆಗಳು ನಡೆಯುತ್ತಿದ್ದು ನಾವೆಲ್ಲ ಒಗ್ಗೂಡಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗಿಯಾಗಿ ತಿಳುವಳಿಕೆ ನೀಡಲು ಮುಂದಾಗಬೇಕು ಎಂದರು.
ಈ ಬಳಿಕ ಸಂತೆಮರಹಳ್ಳಿ ಪಿ ಎಸ್ ಐ ತಾಜುದ್ದೀನ್ ಮಾತನಾಡಿ ಎಲ್ಲಾ ವರ್ಗದವರಿಗೆ ವಿಶೇಷವಾಗಿ ಮಹಿಳೆಯರಿಗೆ ಶಿಕ್ಷಣ ತಲುಪಬೇಕು ಹಾಗೂ ಮಾದಕ ದ್ರವ್ಯಗಳ ತಡೆಗಟ್ಟುವಿಕೆ ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಬೇಕು ಎಂದರು. ಕಾನೂನುಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮತ್ತು ಅವುಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂತೆಮರಹಳ್ಳಿ ಸಿಡಿಪಿಓ ಜಯಶೀಲಾ, ಗ್ರಾ ಪಂ ಅಧ್ಯಕ್ಷೆ ರಾಜಮ್ಮ, ಡಾ ರವಿಕುಮಾರ್, ಪಿಡಿಓ ಪ್ರಭು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
What's Your Reaction?






