ಎಚ್.ಎನ್.ವ್ಯಾಲಿ ಯೋಜನೆಯ ಮುಖ್ಯ ಉದ್ದೇಶ ಅಂತರ್ಜಲಮಟ್ಟವನ್ನು ಹೆಚ್ಚಿಸುವುದು: ಶಾಸಕ ಎಸ್.ಎನ್. ಸುಬ್ಬಾರೆಡ್ಡಿ

Aug 26, 2025 - 13:04
 0  1
ಎಚ್.ಎನ್.ವ್ಯಾಲಿ ಯೋಜನೆಯ ಮುಖ್ಯ ಉದ್ದೇಶ ಅಂತರ್ಜಲಮಟ್ಟವನ್ನು ಹೆಚ್ಚಿಸುವುದು: ಶಾಸಕ ಎಸ್.ಎನ್. ಸುಬ್ಬಾರೆಡ್ಡಿ

ಭಾಗ್ಯನಗರ: ಎಚ್. ಎನ್. ವ್ಯಾಲಿ ಯೋಜನೆ ಅಂತರ್ಜಲಮಟ್ಟವನ್ನು ಹೆಚ್ಚಿಸುವ ಉದ್ದೇಶವಾಗಿದೆ ಹಾಗೂ ಕುಡಿಯುವ ನೀರು ಒದಗಿಸಲು ಗಂಟ್ಲಮಲ್ಲಮ್ಮ ಡ್ಯಾಂ ನಿರ್ಮಾಣ ಸಹಕರಿಯಾಗಲಿದೆ ಎಂದು ಶಾಸಕ ಎಸ್. ಎನ್. ಸುಬ್ಬಾ ರೆಡ್ಡಿ ತಿಳಿಸಿದರು.

ತಾಲೂಕಿನ ಯಲ್ಲoಪಲ್ಲಿ, ಕೊತ್ತ ಕೋಟೆ ಗ್ರಾಮಗಳ ಕೆರೆಗಳಿಗೆ ಎಚ್ ಎನ್ ವ್ಯಾಲಿ ನೀರು ಹರಿಸುವ ಕಾಮಗಾರಿಗೆ ಚಾಲನೆ ಮಾತನಾಡಿದ ಅವರು ಈ ಭಾಗದಲ್ಲಿ ಅಂತರ್ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಎಚ್.ಎನ್‌.ವ್ಯಾಲಿ ಸಂಸ್ಕರಿತ ನೀರನ್ನು ಕೆರೆಗಳಿಗೆ ಹರಿಸಲಾಗುತ್ತಿದೆ.

ಈಗ ಇರುವ ಪರಸ್ಥಿತಿಯಲ್ಲಿ ಕೊಳವೆ ಬಾವಿಯಲ್ಲಿ ನೀರು ಸಿಗಬೇಕಾದರೆ ಸುಮಾರು 1000 ಕ್ಕೂ ಹೆಚ್ಚು ಅಡಿ ಕೊಳವೆ ಕೊರೆಸುವ ಅಗತ್ಯವಿದೆ ಆದರೆ ಎಚ್. ಎನ್. ವ್ಯಾಲಿ ಯೋಜನೆಯಿಂದ ಮುಂದಿನ ಕೇವಲ ಒಂದು ವರ್ಷದ ನಂತರ ಈ ಭಾಗದಲ್ಲಿ 400 ರಿಂದ 450 ಅಡಿಯಲ್ಲಿ ನೀರು ಸಿಗಲಿದೆ ಇದಕ್ಕೆ ನಾನು ಭರವಸೆ ನೀಡುತ್ತೇವೆ

ಇದಕ್ಕೆ ಮುಖ್ಯ ಕಾರಣ ಎಚ್. ಎನ್ ವ್ಯಾಲಿ ಯೋಜನೆ ಇದು ಒಂದು ಕೊಳವೆಭಾವಿಗಳ ಅಂತರ್ಜಲಮಟ್ಟವನ್ನು ಹೆಚ್ಚಿಸುವ ಉದ್ದೇಶವಾಗಿದೆ ಹಾಗೂ ಈಗಾಗಲೇ ನಮ್ಮ ಭಾಗದ ಆಚೇಪಲ್ಲಿ ಕೆರೆಗೆ ಎಚ್. ಎನ್ ವ್ಯಾಲಿ ನೀರು ಹರಿಸಲಾಗಿದೆ.

ನಮ್ಮ ಕಾಂಗ್ರೆಸ್ ಸರ್ಕಾರದ ಸಚಿವರಾದ ಬೋಸ್ ರಾಜು ಅವರನ್ನು  ನಮ್ಮ ಕ್ಷೇತ್ರಕ್ಕೆ ಅಹ್ವಾನಿಸಿ ಅತೀ ಶೀಘ್ರದಲ್ಲಿ ಅಧಿಕೃತವಾಗಿ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಚಾಲನೆ ನೀಡಲಾಗುತ್ತದೆ,ಗಂಟ್ಲಮಲ್ಲಮ್ಮ ಜಲಾಶಯವನ್ನು  ನಿರ್ಮಾಣಕ್ಕೆ ನಮ್ಮ ಸರ್ಕಾರ ಈಗಾಗಲೇ ಗ್ರೀನ್ ಸಿಗ್ನೇಲ್ ನೀಡಲಾಗಿದ್ದು ಸುಮಾರು 180 ಕೋಟಿ ರೂಗಳ ಅನುದಾನವನ್ನು ಮುಖ್ಯಮಂತ್ರಿಗಳು ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಮುಖಂಡರಾದ ಬೂರಗಮಡಗು ನರಸಿಂಹಪ್ಪ, ಗುಂಟಿಗಾನಪಲ್ಲಿ  ಮಂಜುನಾಥ್ ರೆಡ್ಡಿ, ನಾರಾಯಣ ಸ್ವಾಮಿ, ಯರ್ರಕಿಟ್ಟಪ್ಪ, ಆನಂದ್,ಸುಧಾಕರ್, ಕೃಷ್ಣಮೂರ್ತಿ,ಸೇರಿದಂತೆ ಅನೇಕ ಮುಖಂಡರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0