ಎರಡು ಬೈಕ್ ಗಳ ನಡುವೆ ಮುಖ ಮುಖಿ ಡಿಕ್ಕಿ ,ಸ್ಥಳದಲ್ಲಿ ಓರ್ವ ಬೈಕ್ ಸವಾರ ಸಾವು

ಸಂತೆಮರಹಳ್ಳಿ: ಸಮೀಪದ ಕಮರವಾಡಿ ಗೇಟ್ ಸಿದ್ದೇಶ್ವರ ಫಾರಂ ಮುಂಭಾಗ ಸಂತೇಮರಹಳ್ಳಿ ಮೂಗೂರು ರಸ್ತೆ ಬಳಿ ಎರಡು ದ್ವಿಚಕ್ರ ವಾಹನಗಳ ಮುಖ ಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿ ಚಾಮರಾಜನಗರದ ಪ್ರಜ್ವಲ್ ಎಂಬತಾ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಉಳಿದ ಗಾಯಳುಗಳಾದ ಬಸವಟ್ಟಿ ಗ್ರಾಮದ ನಿವಾಸಿ ಸುಭಾಷ್ ( 21) , ಮಹದೇವಸ್ವಾಮಿ ಮೆಲಹಳ್ಳಿ ಗ್ರಾಮ (20) ವರ್ಷ, ರೋಹಿತ್ ಎಂಬವರನ್ನು ಸಂತೆಮರಹಳ್ಳಿ ಸರ್ಕಾರಿ ಆಸ್ಪತ್ರೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಚಾಮರಾಜನಗ ರಸರ್ಕಾರಿ ಸಿಮ್ಸ್ ಆಸ್ಪತ್ರೆಗೆ ಗಾಯಳುಗಳನ್ನ ರವಾನೆ ಮಾಡಲಾಗಿದೆ.
ಈ ಪ್ರಕರಣ ಸಂತೆಮರಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ .
What's Your Reaction?






