ಕಾಂಗ್ರೆಸ್ ಪಕ್ಷದ ಸೋಲಿಗೆ ಶಾಸಕರ ಆಪ್ತನ ಕುತಂತ್ರ ಮತ್ತು ಕೈವಾಡ

ಅರಸೀಕೆರೆ :ಯಳವಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಕಾಂಗ್ರೆಸ್ ಪಕ್ಷದ ಶಾಸಕರ ಆಪ್ತನೊಬ್ಬನು ಮಾಡಿದ ಕುತಂತ್ರವೇ ಕಾರಣವಾಯಿತು ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಗೀಜಿಹಳ್ಳಿ ಧರ್ಮಶೇಖರ್ ತಿಳಿಸಿದರು.
ಅವರು ಮಾತನಾಡಿ ನಮ್ಮ ಪಕ್ಷದಲ್ಲಿ ಯಾವಾಗಲೂ ನಮ್ಮ ಚುನಾವಣೆಯ ತಂತ್ರದಿಂದ ನಾವು ಪರಿಪೂರ್ಣವಾಗಿ ಗೆಲುವನ್ನು ಸಾಧಿಸುತ್ತಿದ್ದೇವೆ ಆದರೆ ಈ ಬಾರಿ ಪಕ್ಷದಲ್ಲಿ ಇದ್ದುಕೊಂಡು ನಮ್ಮ ವಿರುದ್ಧ ಕುತಂತ್ರ ಮಾಡಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಕ್ಕೆ ಹಣ ನೀಡಿ ಮತ್ತು ಅವರಿಗೆ ಸಹಾಯ ಮಾಡಿ ಅವರ ಪರವಾಗಿ ಮತಗಳನ್ನು ಹಾಕಿಸಿ ನಮ್ಮ ಅಭ್ಯರ್ಥಿಗಳನ್ನು ಸೋಲಿಸಿದ ಹಾಗಾಗಿ ಪಕ್ಷ ವಿರೋಧಿ ಚಟುವಟಿಕೆಯನ್ನು ನಡೆಸಿದ ವ್ಯಕ್ತಿಯ ವಿರುದ್ಧ ಶಿಸ್ತುಕ್ರಮ ಆಗಬೇಕು ಎಂದು ತಿಳಿಸಿದರು.
ಗಿಜೀಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದಂತಹ ನಾಗರಾಜ್ ಮಾತನಾಡಿ ನಮ್ಮ ಪಕ್ಷದ ಅಭ್ಯರ್ಥಿಗಳ ಸೋಲಿಗೆ ನಮ್ಮ ಪಕ್ಷದಲ್ಲಿ ಇದ್ದುಕೊಂಡು ಕುತಂತ್ರ ನಡೆಸಿದ ಶಾಸಕರ ಆಪ್ತ ನೊಬ್ಬನಿಂದ ಪಕ್ಷದ್ರೋಹ ಕೆಲಸ ನಡೆದಿದೆ ಅವನು ಪಕ್ಷದ್ರೋಹದ ಕೆಲಸವನ್ನು ಮಾಡಿ ಪಕ್ಷದ ವಿರುದ್ಧ ಮತಗಳನ್ನು ಹಾಕಿಸಿದ್ದಾನೆ ಅವನಿಂದ ನಾವು ಇಂದು ಸೋಲು ಕಾಣಬೇಕಾಯಿತು
ಇದೆಲ್ಲ ಗೊತ್ತಿದ್ದರೂ ಸಹ ಶಾಸಕರು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಈಗ ನಾವು ಇದನ್ನೆಲ್ಲಾ ಬಹಿರಂಗಪಡಿಸಿದ್ದೇವೆ ನಾವು ಮಾಡಿದಂತಹ ಎಲ್ಲಾ ಒಳ್ಳೆಯ ಕೆಲಸಗಳು ಮತ್ತು ಶಾಸಕರ ಪರವಾಗಿ ನಾವು ಅವರು ಯಾವುದೇ ಪಕ್ಷಕ್ಕೆ ಹೋದರು ಸಹ ಅವರ ಬೆಂಬಲಗಾಗಿ ನಿಂತು ಅವರಿಗೆ ಸಹಕಾರ ಮಾಡಿದ್ದೇವೆ ಅವರ ಗೆಲುವಿಗೆ ಶ್ರಮಿಸಿದ್ದೇವೆ
ಆದರೆ ಇಂದು ನಾವೇ ಸೋಲುವಂತಹ ಸ್ಥಿತಿ ಬಂದಿದ್ದು ಕಾರಣ ಶಾಸಕರ ಅಪ್ಪನೊಬ್ಬನು ಈ ಕೆಲಸವನ್ನು ಮಾಡಿದ್ದಾನೆ ಅವನ ವಿರುದ್ಧ ಶಾಸಕರು ಶಿಸ್ತು ಕ್ರಮವನ್ನು ಕೈಗೊಳ್ಳಬೇಕು ಯಳವಾರೆ ಕೇಶವಣ್ಣ ಎಂಬ ವ್ಯಕ್ತಿಯು ಹಿರಿಯ ವ್ಯಕ್ತಿ ಈ ವ್ಯಕ್ತಿಯು ಪಕ್ಷಕ್ಕೋಸ್ಕರ ದುಡಿದಿದ್ದಾರೆ ಆದರೂ ಇಂತಹ ವ್ಯಕ್ತಿ ಯನ್ನು ಶಾಸಕರ ಆಪ್ತ ಕುತಂತ್ರ ಮಾಡಿ ಸೋಲಿದ್ದಾನೆ.
ಹಿಂದುಳಿದ ವರ್ಗದವರನ್ನು ಮತ್ತು ಲಿಂಗಾಯಿತರನ್ನು ಸೋಲಿಸಿದ್ದಾರೆ ಬರೀ ಒಕ್ಕಲಿಗರನ್ನು ಮಾತ್ರ ಗೆಲ್ಲಿಸಿದ್ದಾರೆ ಇವರು ಹಿಂದುಳಿದ ವರ್ಗದವರನ್ನು ಲಿಂಗಾಯಿತರನ್ನು ಕಡೆಗಣಿಸಿದ್ದಾರೆ ಇದಕ್ಕೆ ಅವರು ಸೂಕ್ತ ಬೆಲೆ ತರಬೇಕಾಗುತ್ತದೆ ಎಂದು ತಿಳಿಸಿದರು ಪತ್ರಿಗಾಗೋಷ್ಠಿಯಲ್ಲಿ ಮಹೇಶ, ಯಳವಾರೆ ಕೇಶವಣ್ಣ ಮತ್ತು ಮಹೇಶ್ ಉಪಚಿತರಿದ್ದರು
What's Your Reaction?






