ಕಾರ್ತಿಕ ಆಚಾರ್ಯ ಎಂ.ಕಲ್ಲಹಳ್ಳಿ ಇವರಿಗೆ ರಾಷ್ಟ್ರೀಯ "ಯವಜ್ಞಾನ ಶ್ರೀ" ಪುರಸ್ಕಾರ
ಕಾರ್ತಿಕ ಆಚಾರ್ಯ ಎಂ.ಕಲ್ಲಹಳ್ಳಿ ಇವರಿಗೆ ರಾಷ್ಟ್ರೀಯ "ಯವಜ್ಞಾನ ಶ್ರೀ" ಪುರಸ್ಕಾರ
ವಿಜಯನಗರ ಜಿಲ್ಲೆಯ ಗ್ರಾಮೀಣ ಯುವಪ್ರತಿಭೆ ಕಾರ್ತಿಕ ಆಚಾರ್ಯ ಇವರು ವೈದ್ಯಕೀಯ ವಿಭಾಗದ ವಿದ್ಯಾರ್ಥಿಯಾಗಿದ್ದು ವಿದ್ಯಾರ್ಥಿದೆಸೆಯಂದಲೇ ನಿರೂಪಣೆ,ಆಧ್ಯಾತ್ಮ, ಸಂಘಟನೆ, ಮತ್ತು ಸಾಹಿತ್ಯದ ಅನೇಕ ಆಯಾಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾ ವಿಶೇಷ ವಿಚಾರಗಳೊಂದಿಗೆ ಮಾನಸದಲ್ಲಿ ಸ್ಥಾನಪಡೆಯುತ್ತಿರುವವರು ಜೊತೆಗೆ ಅನೇಕ ಸಾಧಕರನ್ನು ಪರಿಚಯಿಸುವ ಮತ್ತು ವಿದ್ಯಾರ್ಥಿಗಳಿಗೆ ಪೂರಕವಾಗುವ ಕ್ರಿಯಾತ್ಮಕ ಚಟುವಟಿಕೆಗಳ ಸ್ನೇಹವಾಗುವ ಬಳಗವನ್ನು ನೆಡೆಸುತ್ತಾ, ಜೊತೆಗೆ ಅನೇಕ ಸಂಸ್ಥೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವವರಾಗಿದ್ದಾರೆ.ಶ್ರೀಯುತರಿಗೆ ಕಸ್ತೂರಿ ಸಿರಿಗನ್ನಡ ವೇದಿಕೆ ಬೆಳಗಾವಿ ಯುವದಿನಾಚರಣೆ ಅಂಗವಾಗಿ ಇವರು ಕೊಡಮಾಡುವ ಯುವಜ್ಞಾನಶ್ರೀ ಪುರಸ್ಕಾರವನ್ನು ದಿನಾಂಕ ಫೆ ೦೪ ರಂದು ಪ್ರದಾನ ಮಾಡಲಾಯಿತು ಎಂದು ಜಿಲ್ಲಾಧ್ಯಕ್ಷರಾದ ಶ್ರೀ ಎಲ್.ಎಚ್.ಪೆಂಡಾರಿ (ಕವಿತ್ತ ಕರ್ಮಮಣಿ ) ಇವರು ತಿಳಿಸಿದ್ದಾರೆ. ಅನೇಕ ಸಾಹಿತ್ಯ ಮನಸ್ಸುಗಳು, ಸಂಸ್ಥೆಗಳು, ಸ್ನೇಹಿತವರ್ಗ ಹಾರೈಸಿ ಶುಭಕೋರುತ್ತಿವೆ.