ಗುಳ್ಳೆನಹಳ್ಳಿ ಶ್ರೀ ಮುಳ್ಳುಕಟ್ಟಮ್ಮ ಮಹಿಳಾ ಸ್ವ ಸಹಾಯ ಸಂಘದ 20ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನಡೆಯಿತು

ಗುಳ್ಳೆನಹಳ್ಳಿ ಶ್ರೀ ಮುಳ್ಳುಕಟ್ಟಮ್ಮ ಮಹಿಳಾ ಸ್ವ ಸಹಾಯ ಸಂಘದ 20ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನಡೆಯಿತು

ಗುಳ್ಳೆನಹಳ್ಳಿ ಶ್ರೀ ಮುಳ್ಳುಕಟ್ಟಮ್ಮ ಮಹಿಳಾ ಸ್ವ ಸಹಾಯ ಸಂಘದ 20ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ನಡೆಯಿತು

ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಗುಳ್ಳೆನಹಳ್ಳಿ ಗ್ರಾಮದಲ್ಲಿ ಶ್ರೀ

ಮಹಿಳಾ ಸ್ವಸಹಾಯ ಸಂಘದ 20ನೇ ವಾರ್ಷಿಕೋತ್ಸವ ಸಮಾರಂಭವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕ್ಲಸ್ಟರ್ ಸೂಪರ್ ಹೂನ್ನನಕೊಪ್ಪಲು ದೇವರಾಜ್ ಮಾತನಾಡಿ ಚನ್ನರಾಯಪಟ್ಟಣ ತಾಲೂಕಿನಲ್ಲಿಯೇ ತುಂಬಾ ಹಿರಿಯ ಸ್ವಸಹಾಯ ಸಂಘವೆಂದರೆ ಅದು ಶ್ರೀ ಮುಳ್ಕಟ್ಟಮ್ಮ ಮಹಿಳಾ ಸ್ವ ಸಹಾಯ ಸಂಘ ಎಂದರು, ಈ ಸಂಘವು 20 ವರ್ಷಗಳಿಂದ ನಿರಂತರವಾಗಿ ಎಲ್ಲಾ ಸದಸ್ಯರ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ, ಈ ಸಂಘವು 20 ಲಕ್ಷಕ್ಕೂ ಹೆಚ್ಚು ಹಣವನ್ನು ಉಳಿತಾಯ ಮಾಡಿದ್ದು ಪ್ರತಿ ವರ್ಷವೂ ಸಂಘದ ಸರ್ವ ಸದಸ್ಯರಿಗೆ ಪ್ರವಾಸ ಕರೆದುಕೊಂಡು ಹೋಗುವುದು, ಎಲ್ಲಾ ಸದಸ್ಯರಿಗೆ ಬೋನಸ್ ಹಣವನ್ನು ನೀಡುವುದು, ಎಲ್ಲಾ ಸದಸ್ಯರ ಸಾಲ ಮನ್ನಾ ಮಾಡುವುದು, ಎಲ್ಲಾ ಸದಸ್ಯರಿಗೂ ಚಿನ್ನದ ಉಂಗುರಗಳನ್ನು ಉಡುಗೊರೆ ನೀಡುವ ಮೂಲಕ ಎಲ್ಲಾ ಸದಸ್ಯರ ಪ್ರೀತಿ ಬಾಂಧವ್ಯಕ್ಕೆ  ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವುದು ನಮ್ಮ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದರು, ಈ ಸಂಘದ ಸರ್ವ ಸದಸ್ಯರು ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ ಮಾದರಿ ಸ್ವಸಹಾಯ ಸಂಘ ಎಂಬ ಬಿರುದನ್ನು ಪಡೆದಿರುತ್ತದೆ, ಇವರ ಕಾರ್ಯನಿರ್ವಹಣೆಯನ್ನು ಮೆಚ್ಚಿ ಮಟ್ಟನವಿಲೇ ಗ್ರಾಮದ ವಿಜಯ ಬ್ಯಾಂಕ್ ನವರು ಹಲವಾರು ಬಾರಿ ಸಾಲವನ್ನು ನೀಡಿದ್ದು ಈ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ತಮ್ಮ ಸಂಘಕ್ಕೆ ಉತ್ತಮ ಹೆಸರು ಬರುವಲ್ಲಿ ಸರ್ವ ಸದಸ್ಯರು ಕಾರಣರಾಗಿದ್ದಾರೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ  ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ  ಸರೋಜಮ್ಮ ವೆಂಕಟೇಶ್, ನಿವೃತ್ತ ಬ್ಯಾಂಕ್ ಅಧಿಕಾರಿ ಬಸವರಾಜು, ಸಂಘದ ಸಲಹೆಗಾರರಾದ ಕೃಷ್ಣೆಗೌಡ, ಟಿ.ಪಿ.ಎಂ ದೇವರಾಜ್, ಬಿ.ಎಂ ಸಿಂಪನಾ , ಸಿ ಎಸ್ ದೇವರಾಜ್, ಸಿ ಎಸ್ ವಿನುತಾ , ಬಿ ಆರ್ ಪಿ ಈ ಪಿ ಯಶಸ್ವಿನಿ, ಐ ಈ ಸಿ ಸಂಯೋಜಕರಾದ ಪ್ರವೀಣ್, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕರಾದ ರಾಮ ಶೆಟ್ಟಿ, ಶಿಕ್ಷಕರಾದ ಜೋಗಿಪುರ ಗಂಗಾಧರ್, ಶ್ರೀ ಮುಳ್ಕಟ್ಟಮ್ಮ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿಗಳಾದ ಜ್ಯೋತಿ, ಸವಿತಾ, ಲಕ್ಷ್ಮಿ , ಸೇರಿದಂತೆ ಮಹಿಳಾ ಸ್ವಸಹಾಯ ಸಂಘದ ಸರ್ವ ಸದಸ್ಯರು ಹಾಜರಿದ್ದರು.