ಕೊಬ್ಬರಿ ಖರೀದಿಗೆ 90 ದಿನಗಳ ಮಿತಿ ಹೇರುವುದು ಸರಿಯಲ್ಲ-ಎಂಎಲ್ಸಿ ಗೋಪಾಲಸ್ವಾಮಿ

ಕೊಬ್ಬರಿ ಖರೀದಿಗೆ 90 ದಿನಗಳ ಮಿತಿ ಹೇರುವುದು ಸರಿಯಲ್ಲ-ಎಂಎಲ್ಸಿ ಗೋಪಾಲಸ್ವಾಮಿ

ಕೊಬ್ಬರಿ ಖರೀದಿಗೆ 90 ದಿನಗಳ ಮಿತಿ ಹೇರುವುದು ಸರಿಯಲ್ಲ-ಎಂಎಲ್ಸಿ ಗೋಪಾಲಸ್ವಾಮಿ

ಚನ್ನರಾಯಪಟ್ಟಣ: ಕೊಬ್ಬರಿ ಖರೀದಿಗೆ 90 ದಿನಗಳ ಮಿತಿ ಹೇರುವುದು ಸರಿಯಲ್ಲ ಎಂದು ಮಾಜಿ ಎಂಎಲ್ಸಿ ಗೋಪಾಲಸ್ವಾಮಿ ತಿಳಿಸಿದರು. ಪಟ್ಟಣದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಶಾಸಕರಾದ ಎಂ ಎ ಗೋಪಾಲಸ್ವಾಮಿ ಮಾತನಾಡಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ರೈತರಿಗಾಗಿ ಬೆಂಬಲ ಬೆಲೆ ನೀಡಿ ನೊಂದಣಿ ಕೇಂದ್ರಗಳನ್ನು ತೆರೆದಿರುವುದನ್ನು ನಾನು(ಸಿಎನ್ ಬಾಲಕೃಷ್ಣ) ಮತ್ತು ಜೆಡಿಎಸ್ ಶಾಸಕರು ಮಾಡಿದ್ದೇವೆ ಎಂದು ಹೇಳಿರುವುದು ಸರಿಯಲ್ಲ ಎಂದು ಮಾಜಿ ಎಂ ಎಲ್ ಸಿ ಗೋಪಾಲಸ್ವಾಮಿ ತಿಳಿಸಿದರು. ಈ ಹಿಂದೆ ಬೆಂಬಲ ಬೆಲೆಯನ್ನು ನೀಡುವಂತೆ ಮಾಡಲು ನಮ್ಮ ಮುಖ್ಯ ಮಂತ್ರಿಗಳಾದ  ಸಿದ್ದರಾಮಯ್ಯರವರು ಮತ್ತು ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಇನ್ನಿತರ ಸಚಿವರೊಂದಿಗೆ ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯದ ರೈತರ ಸಂಕಷ್ಟದ್ದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಮನವರಿಕೆ ಮಾಡಿಕೊಳ್ಳುವಲ್ಲಿ ಕರ್ನಾಟಕ ಸರ್ಕಾರವು ಯಶಸ್ವಿಯಾಗಿದೆ, ಈ ಸಲುವಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ  ಕೊಬ್ಬರಿ ಮತ್ತು ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.ಆದರೆ ಸ್ಥಳೀಯ ಶಾಸಕರು ನಮ್ಮ ಒತ್ತಾಯದಿಂದ ಕೊಬ್ಬರಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.ನಾನು ವಿಧಾನಪರಿಷತ್ ಸದಸ್ಯನಾಗಿದ್ದಾಗ ಎಲ್ಲಾ ಹೋಬಳಿಯಲ್ಲಿ ರಾಗಿ ಖರೀದಿ ಕೇಂದ್ರ ಹಾಗೂ ಕೊಬ್ಬರಿ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಹಲವಾರು ಬಾರಿ ಅಧಿಕಾರಿಗಳೊಂದಿಗೆ ಹಾಗೂ ವಿಧಾನ ಪರಿಷತ್ ನಲ್ಲಿ ಚರ್ಚಿಸಿದ್ದೇನೆ, ಶಾಸಕರ ಸ್ವಾಗ್ರಾಮದಲ್ಲೇ ಕಳೆದ 30 ವರ್ಷಗಳಿಂದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಚುನಾವಣೆ ನಡೆದಿಲ್ಲ ಎಂದು ಸ್ವಗ್ರಾಮದವರೇ ಆರೋಪಿಸಿದ್ದಾರೆ, ಎ ಚೋಳನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಅಕ್ರಮವಾಗಿ ಚುನಾವಣೆ ನಡೆದಿದೆ ಎಂದು ಸಹಕಾರ ಸಂಘದ ಸದಸ್ಯರೇ ಆರೋಪಿಸುತ್ತಿರುತ್ತಾರೆ ಎಂದರು. ನನ್ನ ಗ್ರಾಮದಲ್ಲಿ ಇಂತಹ ಆರೋಪಗಳು ಎಂದಿಗೂ ನಡೆದಿಲ್ಲ ಮತ್ತು ಮುಂದೆ ನಡೆಯುವುದಿಲ್ಲ ಎಂದರು. ಸ್ಥಳೀಯ ಶಾಸಕರಾಗಿ ತಮ್ಮ ಗ್ರಾಮದ ಸಹಕಾರಿ ಹಾಲು ಉತ್ಪಾದಕರ ಸಂಘಕ್ಕೆ ಇದುವರೆಗೂ ಯಾವ ಅನುದಾನವು ನೀಡಿಲ್ಲ ಮತ್ತು ಲೆಕ್ಕಪತ್ರವನ್ನು ನೀಡಿಲ್ಲ ಎಂದು ಆರೋಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ ಎ ಗೋಪಾಲಸ್ವಾಮಿ, ಹಿರೀಸಾವೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಮ್ ಕೆ ಮಂಜೇಗೌಡ, ಮಾಜಿ ಪಿಎಲ್ಡ್ ಬ್ಯಾಂಕ್ ಅಧ್ಯಕ್ಷರಾದ ಗುರುಮಾರನಹಳ್ಳಿ ಮೂರ್ತಿ, ಮಾಜಿ ಎಪಿಎಂಸಿ ಅಧ್ಯಕ್ಷರಾದ ಕಲಸಿಂದ ಶಿವರಾಜ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಂಬೂರು ಜಗದೀಶ್, ಕಾಂಗ್ರೆಸ್ ಮುಖಂಡ ಪುಟ್ಟಣ್ಣ ಸೇರಿದಂತೆ ಇತರರು ಹಾಜರಿದ್ದರು.