ಕೊರ್ಲಕುಂಟೆ ಕೆರೆ ಕಟ್ಟೆ ತ್ಯಾಜ್ಯತಾಣ-ಆಶ್ರಯ ಬಡಾವಣೆ ನಿವಾಸಿಗಳು ಓಡಾಡಲು ನರಕಯಾತನೆ

ಬಾಗೇಪಲ್ಲಿ: ಪಟ್ಟಣದ ಕೊರ್ಲಕುಂಟೆ ಕೆರ ಕಟ್ಟೆ ಉದ್ದಾಕ್ಕೂ ಕಸ, ತ್ಯಾಜ್ಯ ಹಾಕಿರುವುದರಿಂದ ಬೀದಿ ನಾಯಿಗಳ ಭಯದಿಂದ ಆಶ್ರಯ ಬಡಾವಣೆ ಜನರ ಸಂಚಾರಕ್ಕೆ ತೊಂದರೆ ಆಗಿದೆ ಎಂದು ಈದ್ಯಾ ಮೈದಾನ ಬಡಾವಣೆ ನಿವಾಸಿಗಳು ಆರೋಪಿಸಿದ್ದಾರೆ.
ಪಟ್ಟಣದ ಹೊರವಲಯದ ಕೊಡಿಕೊಂಡ ರಸ್ತೆ ಕೆರೆ ಕಟ್ಟೆ ಅಂಗಳದಲ್ಲಿ ಕೋಳಿ ಮಾಂಸದ ತ್ಯಾಜ್ಯ ಹಾಗೂ ಕಟ್ಟಡ ಹಾಗೂ ಇತರೆ ತ್ಯಾಜ್ಯಗಳನ್ನು ಹಾಕಲಾಗುತ್ತಿದ್ದು, ಈ ಕೆರೆ ಕಟ್ಟೆ ಮೇಲೆ ಸಂಚಾರಿಸಲು ಪ್ರತಿದಿನ ನರಕಯಾತನೆ ಅನುಭವಿಸುವ ಪರಸ್ಥಿತಿ ನಿರ್ಮಾಣವಾಗಿದೆ.
ಈ ವೇಳೆ ಮಾತನಾಡಿದ ಆಶ್ರಯ ಬಡಾವಣೆ ವಾಸಿಗಳು ನಾವು ಮತ್ತು ನಮ್ಮ ಮಕ್ಕಳು, ಶಾಲೆಗೆ, ಆಸ್ಪತ್ರೆಗೆ,ಎಂದು ಪಟ್ಟಣಕ್ಕೆ ಹೋಗಬೇಕಾದರೆ ಇದೇ ಕೆರೆ ಕಟ್ಟೆ ಮೇಲೆ ಸಂಚಾರಿಸಬೇಕು.
ಮಾಂಸದ ಅಂಗಡಿ ವರ್ತಕರು ವಿವಿದೆಡೆಗಳಿಂದ ಕೋಳಿ ಮಾಂಸದ ತ್ಯಾಜ್ಯಗಳನ್ನು ತಂದು ಕೆರೆಯಲ್ಲಿ ಸುರಿಯ ಲಾಗುತ್ತಿದೆ. ಇದರಿಂದ ಕೆಟ್ಟ ವಾಸನೆ ಸುತ್ತಮುತ್ತಲ ಪ್ರದೇಶಕ್ಕೆ ಆವರಿಸಿಕೊಂಡು ಪರಿಸರ ಕಲುಷಿತ ವಾಗುತ್ತಿದೆ.
ಕೆರೆ ಕಟ್ಟೆ ಉದ್ದಕ್ಕೂ ಕಸದ ರಾಶಿ ಇದೆ. ಮಾಂಸ, ತ್ಯಾಜ್ಯ ತಿನ್ನಲು ಬೀದಿನಾಯಿಗಳು ಗುಂಪಾಗಿ ದಾಳಿ ಹಿಡುತ್ತಿವೆ. ಕಸ, ಕಡ್ಡಿ, ತ್ಯಾಜ್ಯ ಚೆಲ್ಲಾ-ಪಿಲ್ಲಿಯಾಗಿ ಕಲುಷಿತ ವಸ್ತುಗಳು ರಸ್ತೆಗೆ ಬಂದಿದೆ ಎಂದು ದೂರಿದರು.
ಕೆರೆಕಟ್ಟೆ ಇಕ್ಕೆಲಗಳಲ್ಲಿನ ತ್ಯಾಜ್ಯ ಕೊಳೆತು ದುರ್ನಾತ ಬೀರುತ್ತಿದೆ. ಇಲಿ, ಹೆಗ್ಗಣ, ಕೋತಿ, ಹಸು, ಎತ್ತು ಸೊಳ್ಳೆಗಳು ಹೆಚ್ಚಾಗಿವೆ. ಕೊಳೆತ ನಾಯಿಗಳು, ಬೆಕ್ಕುಗಳು, ಇಲಿ, ಹಾವುಗಳನ್ನು ಕಟ್ಟೆ ಮೇಲೆ ಹಾಕಲಾಗಿದೆ. ಸಂಕ್ರಾಮಿಕ ರೋಗ ಹರಡುವ ಭೀತಿ ಇದೆ.
ಇದಲ್ಲದೇ ಈ ವಾಸನೆಗೆ ನಾಯಿಗಳು ಗುಂಪು ಗುಂಪಾಗಿ ಬಂದು ತ್ಯಾಜ್ಯವನ್ನು ಕೆಣಕುತ್ತ ಚಲ್ಲಾ, ಪಿಳ್ಳಿ ಮಾಡುತ್ತಾ ರಸ್ತೆಹೋಕರನ್ನು ಕಚ್ಚಲು ಮುಂದಾಗುತ್ತವೆ ಹಾಗೂ ಸಂಜೆ ಆದರೆ ಕೆರೆ ಕಟ್ಟೆ ಮೇಲೆ ಮಹಿಳೆಯರು, ಮಕ್ಕಳು ಕಂಗತ್ತಲಲ್ಲಿ ಬಯಭೀತಿಯಿಂದ ಹೊಡಾಡುವ ಪರಸ್ಥಿತಿ ನಿರ್ಮಾಣ ವಾಗಿದೆ.
ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಕೆರೆ ಕಟ್ಟೆ ಅಂಗಳದಲ್ಲಿ ಕೊಳೆತು ಹೋದ ಹಣ್ಣು ಹಂಪಲು, ಮತ್ತು, ಕೋಳಿ ತ್ಯಾಜ್ಯ,ಸೇರಿದಂತೆ ವಿವಿಧ ರೀತಿಯ ತ್ಯಾಜ್ಯ ತಂದು ಸುರಿಯುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ವರ್ತಕರಿಗೆ ಕಾನೂನು ಎಚ್ಚರಿಕೆ ನೀಡಿ ಕೆರೆ ಕಟ್ಟೆ ಮೇಲೆ ಕಸ, ತ್ಯಾಜ್ಯ ವಸ್ತುಗಳು ಸುರಿಯಬಾರದು ಎಂದು ನಾಮ ಫಲಕ ಅಳವಡಿಸಬೇಕು, ಹಾಗೂ ಮುಖ್ಯವಾಗಿ ಕೆರೆ ಕಟ್ಟೆ ಮೇಲೆ ಬೀದಿ ದೀಪಗಳು ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಧರ್ಭದಲ್ಲಿ ಮುಖಂಡರಾದ ಇರ್ಫಾನ್,ಬಾಬಾ, ಜೆಬಿ,ಆಶ್ರಯ ಬಡಾವಣೆ ನಿವಾಸಿಗಳಾದ ವೀಣಾ,ಹಸೀನಾ, ನೂರ್ಜಾನ್,ಸುವರ್ಣಮ್ಮ, ಫಾತಿಮಾ, ಬಿಬಿಜಾನ್,ಶಾಹೇದ, ಹರ್ಷಿಯ, ವಹೀದಾ, ಗುಲಾಬ್ ಜಾನ್ ಸೇರಿದಂತೆ ಮತ್ತಿತರರು ಇದ್ದರು.
What's Your Reaction?






