ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಜಿಲ್ಲಾ 3ನೇ ಡಿಜೆ ನ್ಯಾಯಾಲಯ

May 13, 2025 - 10:27
 0  9
ಕೊಲೆ ಮಾಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಜಿಲ್ಲಾ 3ನೇ ಡಿಜೆ ನ್ಯಾಯಾಲಯ

ಬಾಗೇಪಲ್ಲಿ: ಕ್ಷುಲ್ಲಕ ಕಾರಣಕ್ಕಾಗಿ ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದು 25 ಸಾವಿರ ರೂಪಾಯಿಗಳ ದಂಡವನ್ನು ಪಾವತಿಸುವಂತೆ ಸೂಚಿಸಿದೆ.

ತಾಲ್ಲೂಕಿನ ಮಾಮಿಡಿಕಾಯಿಲಪಲ್ಲಿ ಗ್ರಾಮದ ನರಸಮ್ಮ ಎಂಬ ಮಹಿಳೆಯನ್ನು ಕ್ಷುಲ್ಲಕ ಕಾರಣಕ್ಕಾಗಿ ನಾಗರಾಜಪ್ಪ ಎಂಬಾತ ಒನಕೆಯಿಂದ ತಲೆಗೆ ಹೊಡೆದ ಕಾರಣ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಆರೋಪಿಯನ್ನು ಬಾಗೇಪಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಶಾಂತ್ ವರ್ಣಿ ಕೊಲೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.

ನಾಗರಾಜಪ್ಪ ಕೊಲೆ ಮಾಡಿರುವುದನ್ನು ಸಾಕ್ಷಿಗಳ ಸಮೇತ ಸಾಬೀತುಪಡಿಸಿದ್ದರಿಂದ ಚಿಕ್ಕಬಳ್ಳಾಪುರದ 3 ನೇ ಡಿಜೆ ನ್ಯಾಯಾಲಯವು ವಿಚಾರಣೆನ್ನು ನಡೆಸಿ ಈ ಪ್ರಕರಣದ ಆರೋಪಿತನಾದ ನಾಗರಾಜಪ್ಪ ಈತನ ಮೇಲೆ ಆರೋಪಗಳು ಸಾಭೀತಾಗಿರುವುದರಿಂದ ಈತನನ್ನು ಆರೋಪಿ ಎಂದು ಪರಿಗಣಿಸಿ ಈತನಿಗೆ ಜೀವಾವಧಿ ಶಿಕ್ಷೆ ಮತ್ತು 25000/- ರೂ ದಂಡವನ್ನು ವಿಧಿಸಿ ತೀರ್ಪನ್ನು ಪಕಟಿಸಿರುತ್ತಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0