ಖತರ್ನಾಕ್ ಕಳ್ಳರ ಬಂದನ-30 ಲಕ್ಷರೂ ಬೆಲೆ ಬಾಳುವ ಮಾಲು ವಶಪಡಿಸಿಕೊಂಡ ಬಾಗೇಪಲ್ಲಿ ಪೊಲೀಸರ

ಬಾಗೇಪಲ್ಲಿ : ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇಬ್ಬರು ಖತರ್ನಾಕ್ ಕಳ್ಳರನ್ನು ಬಂಧಿಸಿ ಬಂಧಿತರಿAದ 319 ಗ್ರಾಮ್ ಚಿನ್ನಾಭರಣಗಳನ್ನು ಬಾಗೇಪಲ್ಲಿ ಪೋಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಮನೆಗಳಿಗೆ ಕನ್ನ ಹಾಕಿ ಮನೆಯಲ್ಲಿದ್ದ ಚಿನ್ನಾಭರಣಗಳು ಬೆಲೆ ಬಾಳುವ ವಸ್ತುಗಳನ್ನ ಕದ್ದು ಪರಾರಿಯಾಗುತ್ತಿದ್ದ ಖತರ್ನಾಕ್ ಕಳ್ಳರನ್ನ ಬಾಗೇಪಲ್ಲಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶ್ವಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ತೀಮಾಕಲಹಳ್ಳಿ ಗ್ರಾಮದ ನರಸಿಂಹಮೂರ್ತಿ ಎಂಬುವವರ ಮನೆಯಲ್ಲಿ ಕಳೆದ ಏಪ್ರಿಲ್ 27 ರಂದು ಕಳ್ಳತನವಾಗಿತ್ತು.. ಕಳ್ಳತನ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಬಾಗೇಪಲ್ಲಿ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಪ್ರಶಾಂತ ವರ್ಣಿ ನೇತೃತ್ವದ ತಂಡ ಕಳ್ಳತನ ಮಾಡಿದ ಇಬ್ಬರು ಕಳ್ಳರನ್ನ ಬಂಧಿಸಿದ್ದಾರೆ.
ಬAಧಿತರನ್ನ ಬಾಗೇಪಲ್ಲಿ ಮೂಲದ ಉಮಾಶಂಕರ್ ಹಾಗೂ ತುಮಕೂರು ಮೂಲದ ಜಗನ್ನಾಥ್ ಎಂದು ಗುರುತಿಸಲಾಗಿದ್ದು, ಆರೋಪಿಗಳಿಂದ ಬರೋಬ್ಬರಿ 28 ಲಕ್ಷ ರೂಪಾಯಿ ಮೌಲ್ಯದ 319 ಗ್ರಾಮ್ ತೂಕದ ಚಿನ್ನಾಭರಣಗಳು, 1.80 ಲಕ್ಷ ರೂಪಾಯಿ ಮೌಲ್ಯದ ಎರಡು ಕೆಜಿ ಬೆಳ್ಳಿ ಆಭರಣಗಳನ್ನ ಹಾಗೂ ಒಂದು ಸ್ಯಾಂಟ್ರೋ ಕಾರನ್ನ ವಶಪಡಿಸಿಕೊಂಡಿದ್ದಾರೆ ಆರೋಪಿಗಳು ಬಾಗೇಪಲ್ಲಿ, ಬನ್ನೇರುಘಟ್ಟ, ಕೊಳ್ಳೇಗಾಲ, ಹೊನ್ನಾಳಿ ಸೇರಿದಂತೆ ಹಲವೆಡೆ ವಿವಿದ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಎಸ್ಪಿ ಕುಶಲ್ ಚೌಕ್ಸೆ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಮುನಿರತ್ನಂ, ಸುನಿಲ್ ಕುಮಾರ್, ಪೋಲೀಸ್ ಮುಖ್ಯ ಪೇದೆಗಳಾದ ವೆಂಕಟರವಣ, ಶ್ರೀಪತಿ, ಶ್ರೀನಾಥ್, ಕದೀರ್ ಅಹಮದ್, ಪೇದೆಗಳಾದ, ಮೋಹನ್, ಸಾಗರ್, ವೆಂಕಟಪ್ಪ, ದನಂಜಯ್, ಬಾಂದವ್ಯ, ರಾಜೇಶ್, ಕೃಷ್ಣಪ್ಪ, ಸೇರಿದಂತೆ ಇತರೆ ಪೊಲೀಸ್ ಸಿಬ್ಬಂದಿ ಇದ್ದರು....
What's Your Reaction?






