ಖಾಶೆಂಪುರ್ (ಪಿ): ಸಾಂಪ್ರದಾಯಿಕ ದಸರಾ ಆಚರಣೆ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಭಾಗಿ

Oct 3, 2025 - 17:19
 0  3
ಖಾಶೆಂಪುರ್ (ಪಿ): ಸಾಂಪ್ರದಾಯಿಕ ದಸರಾ ಆಚರಣೆ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಭಾಗಿ

ಬೀದರ್ (ಅ.03): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ (ಪಿ) ಗ್ರಾಮದಲ್ಲಿ ಪ್ರತಿ ವರ್ಷದಂತೆಯೂ ಈ ವರ್ಷವೂ ಸಾಂಪ್ರದಾಯಿಕವಾಗಿ ಸಡಗರ ಸಂಭ್ರಮದಿಂದ ಆಚರಿಸಲಾದ ದಸರಾ ಕಾರ್ಯಕ್ರಮದಲ್ಲಿ ಅದೇ ಗ್ರಾಮದವರು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಪಾಲ್ಗೊಂಡರು.

 

ಪ್ರತಿ ವರ್ಷದ ಸಂಪ್ರದಾಯದಂತೆ ಈ ಬಾರಿ ಕೂಡ‌ ಭಾಜಾ ಭಜಂತ್ರಿಗಳೊಂದಿಗೆ ಗ್ರಾಮದ ಹಿರಿಯರು, ಮಹಾರಾಜರ ಸಮ್ಮುಖದಲ್ಲಿ ಮಾಜಿ ಸಚಿವ ಬಂಡೆಪ್ಪ ಅವರ ನೇತೃತ್ವದಲ್ಲಿ ಗುರುವಾರ ಸಂಜೆ ಊರ ಹತ್ತಿರದ ಬನ್ನಿ ಮರಕ್ಕೆ ಹೋಗಿ ಪೂಜೆ ಸಲ್ಲಿಸಿ, ಬನ್ನಿ ತೆಗೆದುಕೊಂಡು ಬಂದ ಗ್ರಾಮಸ್ಥರು, ಗ್ರಾಮದಲ್ಲಿರುವ ವಿವಿಧ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿ ಬನ್ನಿ ಅರ್ಪಿಸಿದರು. ಇದೇ ವೇಳೆ ಗ್ರಾಮಸ್ಥರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಶುಭ ಕೋರಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಅವರು, ಪ್ರತಿ ವರ್ಷದ ಸಂಪ್ರದಾಯದಂತೆ ದೇವಸ್ಥಾನಗಳಿಗೆ ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಣೆ ಮಾಡಲಾಗಿದೆ. ಗ್ರಾಮದ ವಿವಿಧ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ, ಜನರ ನೆಮ್ಮದಿಯ ಜೀವನಕ್ಕಾಗಿ ಪ್ರಾರ್ಥಿಸಲಾಗಿದೆ ಎಂದರು.
ನಂತರ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಬೀದರ್ ನಗರದಲ್ಲಿರುವ ತಮ್ಮ ನಿವಾಸಕ್ಕೆ ತೆರಳಿ ಕುಟುಂಬದವರು, ಅಭಿಮಾನಿಗಳು, ಮುಖಂಡರು, ಕಾರ್ಯಕರ್ತರೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡರು.
ಶುಕ್ರವಾರ ದಿನವಿಡೀ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳ ಮುಖಂಡರು, ಕಾರ್ಯಕರ್ತರು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರ ನಿವಾಸಕ್ಕೆ ತೆರಳಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡು ಶುಭ ಕೋರಿದರು.
ಗುರುವಾರ ಸಂಜೆ ಖಾಶೆಂಪುರ್ ಪಿ ಗ್ರಾಮದಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಡಾ. ಮಾರ್ತಾಂಡರಾವ್ ಶ್ರೀನಿವಾಸರಾವ್ ಖಾಶೆಂಪುರ್, ರಾಜು ಶ್ರೀನಿವಾಸರಾವ್ ಖಾಶೆಂಪುರ್, ಶೇಖರ್ ಪೊಲೀಸ್ ಪಾಟೀಲ್, ರಾಜು ಖಾಶೆಂಪುರ್, ಬಾಬುರಾವ್ ಖಾಶೆಂಪುರ್, ಪ್ರಭಾಕರ್ ನಾಗರಾವ್ ಕುಲಕರ್ಣಿ, ಮಾರುತಿ ಸಂಗಪ್ಪ ವಗ್ಗೆ, ಭಜರಂಗ ತಮಗೊಂಡ, ಸುನೀಲ್ ತುಕ್ಕರಾಮ್ ಬಂತ್ಗೆ, ರಾಜು ಪಾಟೀಲ್, ಆನಂದ್ ತಮಗೊಂಡ, ರವಿ ಬಾಲೇಬಾಯಿ, ರವಿ ಗುಮಾಸ್ತಿ, ಶರತ್ ಖಾಶೆಂಪುರ್, ಕೇವಲ್ ಖಾಶೆಂಪುರ್, ಉಜ್ವಲ್ ಖಾಶೆಂಪುರ್, ಆಕರ್ಶ್ ಖಾಶೆಂಪುರ್ ಸೇರಿದಂತೆ ಗ್ರಾಮಸ್ಥರು, ಮುಖಂಡರು ಇದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0