ಜೋಳ ಖರೀದಿ ಕೇಂದ್ರದ ದಿನಾಂಕವನ್ನು 15 ದಿನಗಳ ವರೆಗೆ ವಿಸ್ತರಿಸಿ. ಕೆ ಆರ್ ಎಸ್ ಪಕ್ಷದ  ಮನವಿ

Jun 26, 2025 - 17:54
 0  4
ಜೋಳ ಖರೀದಿ ಕೇಂದ್ರದ ದಿನಾಂಕವನ್ನು 15 ದಿನಗಳ ವರೆಗೆ ವಿಸ್ತರಿಸಿ. ಕೆ ಆರ್ ಎಸ್ ಪಕ್ಷದ  ಮನವಿ

ಸಿಂಧನೂರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಸಿಂಧನೂರಿನಲ್ಲಿ ಉಪ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರಿಗೆ ಜೋಳ ಖರೀದಿ ಕೇಂದ್ರದ ದಿನಾಂಕವನ್ನು 15 ದಿನಗಳವರೆಗೆ ವಿಸ್ತರಿಸಬೇಕೆಂದು ಮನವಿ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಮನವಿಯ ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಘಟಕದ ಪ್ರಧಾನ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಅವರು ರಾಯಚೂರು ಜಿಲ್ಲೆಯಲ್ಲಿ ರೈತರು ಹೆಚ್ಚಿನ ಜೋಳವನ್ನು ಬೆಳೆದಿದ್ದು ವಿಶೇಷ ಎಂಬಂತೆ ಸಿಂಧನೂರು ತಾಲೂಕಿನಲ್ಲಿ ರೈತರು ಹೆಚ್ಚಿನ ಜೋಳವನ್ನು ಬೆಳೆದಿರುತ್ತಾರೆ. ಈಗಾಗಲೇ ಸುಮಾರು ಐದಾರು ತಿಂಗಳ ಗಳಿಂದ ಮುಂಗಾರು ಮತ್ತು ಹಿಂಗಾರು ಜೋಳ ಖರೀದಿ ಪ್ರಕ್ರಿಯೆ ಜಿಲ್ಲೆ ಹಾಗೂ ತಾಲೂಕಿನಲ್ಲಿ ನಡೆಯುತ್ತಿದ್ದರೂ ಸಹ ಅಧಿಕಾರಿಗಳು ಹಾಗೂ ಕೇಂದ್ರಗಳ ಸಮಸ್ಯೆಗಳಿಂದಾಗಿ ಸರ್ಕಾರ ಸರಿಯಾದ ಸಮಯಕ್ಕೆ ಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭ ಮಾಡದ ಪರಿಣಾಮ ಮತ್ತು ಈ ವರ್ಷ ಸಿಂಧನೂರು ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿರುವ ಕಾರಣ ರೈತರು ನೊಂದಣಿ ಮಾಡಿದ ಜೋಳ ಖರೀದಿ ಕೇಂದ್ರಕ್ಕೆ ಸರ್ಕಾರ ನಿಗದಿ ಮಾಡಿದ ದಿನಾಂಕ 30/6/2025 ಕೊನೆ ದಿನ ಇರುವ ಕಾರಣ ನೋಂದಣಿಯಾದ ಎಲ್ಲಾ ರೈತರು ಜೋಳದ ಕೇಂದ್ರಕ್ಕೆ ತೂಕ ಮಾಡಿ ಖರೀದಿ ಕೇಂದ್ರಕ್ಕೆ ನಾನ ಕಾರಣಗಳಿಂದಾಗಿ ಜೋಳ ಸಾಗಿಸುವಲ್ಲಿ ಸಾಧ್ಯವಾಗದ ಕಾರಣ ಸಿಂಧನೂರು ತಾಲೂಕಿನ ರೈತರ ಸ್ಥಿತಿ ಚಿಂತಾಜನಕವಾಗಿದೆ ಸಾವಿರಾರು ಕ್ವಿಂಟಾಲ್ ಜೋಳಗಳು ರೈತರ ಬಳಿ ಉಳಿದಿದ್ದು ಸರ್ಕಾರದ ಖರೀದಿ ಸೌಲಭ್ಯಗಳಿಂದ ವಂಚಿತರಾಗುತ್ತಾರೆ.
ಒಂದು ವೇಳೆ 30/06/2025 ರಂದೇ ಕೇಂದ್ರಗಳನ್ನು  ಮುಚ್ಚಿದಲ್ಲಿ ಸಾವಿರಾರು ರೈತರು ಕಷ್ಟಪಟ್ಟು ಬೆಳೆದ ಜೋಳ ಮಧ್ಯವರ್ತಿಗಳಿಗೆ,ದಲ್ಲಾಳಿಗಳಿಗೆ ಖಾಸಗಿಯವರಿಗೆ ಮಾರುವ ಪರಿಸ್ಥಿತಿ ಉಂಟಾಗಲಿದ್ದು ರೈತರು  ಸಾಲದ ಕೂಪಕ್ಕೆ ಜಾರಲಿದ್ದಾರೆ.
ಹಾಗಾಗಿ ಈ ಮೇಲಿನ ಎಲ್ಲ ಅಂಶಗಳನ್ನು ಸೂಕ್ಷ್ಮ ರೀತಿಯಲ್ಲಿ ಪರಿಗಣಿಸಿ ರೈತರ ಜೋಳ ಖರೀದಿಗೆ ಈಗಾಗಲೇ ನೀಡಿದ ಗಡುವಿನ ದಿನಾಂಕಕಿಂತ ಇನ್ನೂ 15 ದಿನಗಳವರೆಗೆ ವಿಸ್ತರಣೆ ಮಾಡಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಆಗ್ರಹದ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಪಕ್ಷದ ಮುಖಂಡರಾದ  ಶರಣಪ್ಪ ಬೇರಿಗೆ, ಶರಣಪ್ಪ ಜನತಾ ಕಾಲೋನಿ,ಅಜೀದ್ ಕುನಟಿಗೆ, ಕನಕಪ್ಪ ಎಲೆಕೂಡ್ಲಿಗಿ, ಹನುಮಂತ ಸುಕಲ್ಪೇಟೆ, ಜಗದೀಶ್ ಸುಲ್ತಾನಾಪುರ, ಶಂಸುದ್ದೀನ್ ಗೋಮರ್ಸಿ,ಹನುಮಂತ ಮುದ್ದಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0