ತಾಂಬಾ ಗ್ರಾಮದಲ್ಲಿ ಮಟ್ಕಾ ಹಾವಳಿ: ಯಾರು ಈ ಸಂತೋಷ ನಾವಿ.?

ಇಂಡಿ: ತಾಲ್ಲೂಕಿನ ತಾಂಬಾ ಅಕ್ರಮ ಮಟ್ಕಾ ದಂಧೆ ಗ್ರಾಮದ ತುಂಬೆಲ್ಲ ಗರಿಗೆದರಿಕೊಂಡಿದ್ದು, ಬಹುತೇಕ ಯುವಜನರು ಇವುಗಳಿಗೆ ದಾಸರಾಗಿದ್ದಾರೆ. ಅಕ್ರಮ ಮಟ್ಕಾ ಆಟದ ಸೆಳೆತಕ್ಕೆ ಸಿಕ್ಕು ಆರ್ಥಿಕ ನಷ್ಟ ಅನುಭವಿಸುವುದರ ಜೊತೆಗೆ ಇಡೀ ಕುಟುಂಬವನ್ನು ಸಂಕಷ್ಟದ ಸುಳಿಗೆ ದೂಡುತ್ತಿದ್ದಾರೆ.
ಸಣ್ಣ ಚೀಟಿ ಹಾಗೂ ಬಾಯಿ ಮಾತಿನಲ್ಲಿ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ನಡೆಯುವ ಮಟ್ಕಾ ಸೇರಿದಂತೆ ಸಣ್ಣ ಸಣ್ಣ ಹಳ್ಳಿಗಳಲ್ಲಿಯೂ ಹೆಚ್ಚಾಗಿದೆ. ಮನೆ, ಪಾನ್ ಶಾಪ್, ಮುಖ್ಯ ಬಜಾರ್‌ಗಳಲ್ಲಿ ಒಸಿ (ಮಟ್ಕಾ) ಬರೆದುಕೊಳ್ಳವ ಬುಕ್ಕಿಗಳಿದ್ದು, ತಾಂಬಾ ಗ್ರಾಮದಲ್ಲಿ ಸಂತೋಷ ನಾವಿ ಎನ್ನುವಾತ ತಾಂಬಾ ಗ್ರಾಮದ ಗುಂಪಾದಲ್ಲಿ ಕುಳಿತು ಮಟ್ಕಾ ಬರೆಯುತ್ತಾನೆ. ಇವನಲ್ಲದೆ 4ಕ್ಕಿಂತ ಹೆಚ್ಚು ಬುಕ್ಕಿಗಳಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ತಾಂಬಾ ಅಂದ್ರೆ ಸಾಕು ಮಟ್ಕಾ ದಂಧೆಯ ಮಾತು ಕೇಳಿ ಬರುತ್ತದೆ.ಸಂತೋಷ ನಾವಿ ತಾಂಬಾ ಗ್ರಾಮದ ಜನರನ್ನು ಮಟ್ಕಾ ದಂಧೆಯಲ್ಲಿ ಮುಳುಗಿಸಿ ಬಿಟ್ಟಿದ್ದಾನೆ. ತಾಂಬಾ ಗ್ರಾಮದಲ್ಲಿ ಎಲ್ಲಿ ಬೇಕು ಅಲ್ಲಿ ಮಟ್ಕಾ ಏಜೆಂಟರು ಸಿಗುತ್ತಾರೆ.
*ಕೋಟ್*
ಭಾವೈಕ್ಯತೆಗೆ ಹೆಸರಾಗಿರುವ ನಿಂಬೆ ನಾಡು ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಅಕ್ರಮ ಮಟ್ಕಾ ದಂದೆಗಳ ಕೇಂದ್ರವಾಗಿರುವ ಕಳಂಕವನ್ನೂ ಹೊರುತ್ತಿದೆ. ಪೊಲೀಸ್ ಇಲಾಖೆಯು, ಅಕ್ರಮ ಮಟ್ಕಾ ಬರೆಯುವ ಸಂತೋಷ ನಾವಿ ಮತ್ತು ಸಹಚರರನ್ನು, ಖದೀಮರ ಹೆಡೆಮುರಿಕಟ್ಟಿ, ತಾಲ್ಲೂಕಿನ ಸ್ವಾಸ್ಥ್ಯ ಕಾಪಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
*ಬೇಸತ್ತು ಹೋದ ಮಹಿಳೆಯರು*
ತಾಂಬಾ ಗ್ರಾಮೀಣ ಭಾಗದಲ್ಲಿ ಮಟ್ಕಾ ದಂಧೆಯಿಂದಾಗಿ ಮಹಿಳೆಯರು ಬೇಸತ್ತು ಹೋಗಿದ್ದಾರೆ. ಪತಿ ದುಡಿಯಲು ಹೋಗುತ್ತಿಲ್ಲ. ನಾವು ಜಮೀನಿನಲ್ಲಿ ದುಡಿದು ತಂದ ದುಡ್ಡನ್ನು ಕಸಿದುಕೊಂಡು ಹೋಗಿ ಮಟ್ಕಾ ದಂಧೆಗೆ ಸುರಿಯುತ್ತಿದ್ದಾರೆ. ನಿತ್ಯದ ತುತ್ತಿನ ಚೀಲ ತುಂಬಿಸಿಕೊಳ್ಳುವುದೇ ಕಷ್ಟಕರವಾಗಿದೆ. ಇಂಥ ಸಮಯದಲ್ಲಿ ಗಂಡಸರು ಮನೆಯಲ್ಲಿನ ವಸ್ತುಗಳನ್ನು ಮಾರಾಟ ಮಾಡಿ ಮಟ್ಕಾ ದಂಧೆಕೋರರಿಗೆ ಹಣ ಸುರಿಯುತ್ತಿದ್ದಾರೆ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.
ಹೀಗಾಗಿ ಮಟ್ಕಾ ದಂಧೆಯಿಂದ ಬಡಕುಟುಂಬಗಳು ಬೀದಿಗೆ ಬರುವ ಸ್ಥಿತಿ ನಿರ್ವಣವಾಗಿದೆ. ಅನೇಕ ಕುಟುಂಬಗಳು ನಲುಗಿ ಹೋಗಿವೆ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ದಂಧೆಗೆ ಬ್ರೇಕ್ ಹಾಕಬೇಕು ಎಂಬುದು ಸಾರ್ವಜನಿಕರ ಒಕ್ಕೊರಲ ಆಗ್ರಹವಾಗಿದೆ.
What's Your Reaction?






