ತೋರವಳ್ಳಿ ಗ್ರಾಮದಲ್ಲಿ ಚಿರತೆ ಸೆರೆ.

ಸಂತೆಮರಹಳ್ಳಿ : ಸಮೀಪದ ತೋರವಳ್ಳಿ ಬಳಿ ಇರುವ ಕೋರೆಯಲ್ಲಿ ಚಿರತೆ ಸೆರೆ. ತೋರವಳ್ಳಿ ಸುತ್ತಮುತ್ತ ಪ್ರದೇಶದಲ್ಲಿ ಬಹಳ ದಿನಗಳಿಂದ ಓಡಾಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿ ತಂಡ ಸೆರೆ ಹಿಡಿದರು.
ಕಾಡು ಬಿಟ್ಟು ಹಳ್ಳಿಗಳ ಪೊದೆ ಹಾಗೂ ಕೋರೆಗಳಲ್ಲಿ ಓಡಾಡುವ ಚಿರತೆಯನ್ನು ಸಾರ್ವಜನಿಕರ ಸಹಾಯದಿಂದ ಸೆರೆ ಹಿಡಿಯಲಾಯಿತು.
ಈ ಭಾಗದ ಸಾರ್ವಜನಿಕರು ತಮ್ಮ ಜೀವ ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು ಕೊನೆಗೂ ಕೊರೆಯಲ್ಲಿ ಅಡಗಿ ಕುಳಿತಿದ್ದ ಚಿರತೆಯನ್ನು ಬೋನಿನಲ್ಲಿ ಕೆಡಿಯುವಲ್ಲಿ ಅರಣ್ಯ ಅಧಿಕಾರಿಗಳು ಯಶಸ್ವಿಯಾದರು.
What's Your Reaction?






